• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಾಡ ಕಾಡುವ ಹುಲಿಯನ್ನು ಕಾಡಿಗಟ್ಟದೆ ಬಿಡುವುದಿಲ್ಲ: ಶ್ರೀನಿವಾಸ ಪೂಜಾರಿ

By ಮಂಗಳೂರು ಪ್ರತಿನಿಧಿ
|

ಮಂಗಳೂರು, ಅಕ್ಟೋಬರ್ 23: ನಾಡನ್ನು ಕಾಡುವ ಹುಲಿಯನ್ನು, ಕಾಡಿಗಟ್ಟದೆ ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್‌ ಕಟೀಲ್ ಅವರು ""ರಾಜರಾಜೇಶ್ವರಿ ನಗರ ಮತ್ತು ಶಿರಾ ಕ್ಷೇತ್ರಗಳ ಉಪ ಚುನಾವಣೆ ಮುಗಿದ ಬಳಿಕ ಬಂಡೆ ಛಿದ್ರವಾಗುತ್ತದೆ, ಹುಲಿಯಾ ಕಾಡಿಗೆ ಹೋಗಬೇಕಾಗುತ್ತದೆ'' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಲೇವಡಿ ಮಾಡಿದ್ದರು.

ಲಸಿಕೆ ಉಚಿತವಾಗಿ ಕೊಡಿಸುವ 'ಧಮ್' ಇದೆಯೇ? ನಳಿನ್; ಸಿದ್ದರಾಮಯ್ಯ

ಇದಕ್ಕೆ ತಿರುಗೇಟು ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಂಗಳೂರಿನಲ್ಲಿ ಎಲ್ಲಿಯೋ ಬೀದಿ ಅಲೆಯುತ್ತಿದ್ದ ಈ ನಳಿನ್ ಕುಮಾರ್‌ ಕಟೀಲ್ ಎಂಬ ಪೋಕರಿಯನ್ನು ಯಾರೋ ತಮ್ಮ "ಸಂತೋಷ' ಕ್ಕಾಗಿ ತಂದು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದರು. ಇವರಿಗೆ ಕೊಟ್ಟಿರುವ ಕೆಲಸ ಪಕ್ಷ ಕಟ್ಟುವುದಲ್ಲ, ಬಿ.ಎಸ್ ಯಡಿಯೂರಪ್ಪನವರನ್ನು ಕೆಡವುದು, ಅದನ್ನೇ ಮಾಡುತ್ತಾ ಇದ್ದಾರೆ ಎಂದು ವ್ಯಂಗ್ಯವಾಡಿದ್ದರು.

ಸಿದ್ದರಾಮಯ್ಯ ಅವರ ಈ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ನಳಿನ್ ಕುಮಾರ್ ಅವರು, ಕಾರ್ಯಕರ್ತರ ಸಂತೋಷಕ್ಕೆ ರಾಜ್ಯಾಧ್ಯಕ್ಷರಾಗಿದ್ದಾರೆ. ಬಂಡೆ ಒಡೆಯುವುದು, ಟಗರಿಗೆ ಡಿಕ್ಕಿ ಹೊಡೆಯುವುದು, ಸಾಂದರ್ಭಿಕ ಮಾತು. ನೆನಪಿರಲಿ ಕಳೆದ ಉಪ ಚುನಾವಣೆಯಲ್ಲಿ 15 ರಲ್ಲಿ 12 ಕ್ಷೇತ್ರ ಗೆದ್ದಿದ್ದು, ಮುಂದೆ ಶಿರಾ, ಆರ್.ಆರ್ ನಗರ ಗೆಲ್ಲುವುದು, ನಳಿನ್ ಕುಮಾರ್‌ ಕಟೀಲ್ ನೇತೃತ್ವದಲ್ಲೇ, ನಾಡ ಕಾಡುವ ಹುಲಿಯನ್ನು, ಕಾಡಿಗಟ್ಟದೆ ಬಿಡೆವು ಎಂದು ಟಾಂಗ್ ಕೊಟ್ಟಿದ್ದಾರೆ.

English summary
Minister Kota Srinivasa Poojary has indirectly Outraged against opposition leader Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X