ಸುಹಾಸ್ ಹತ್ಯೆ ಪ್ರಕರಣ: 'ಫಿನೀಶ್' ಎಂಬ ಪೋಸ್ಟ್ ವೈರಲ್

ಮಂಗಳೂರಿನಲ್ಲಿ ಮೇಲಿಂದ ಮೇಲೆ ಹತ್ಯೆ ಸೇಡು ಪ್ರತೀಕಾರ ಮುಂದುವರೆದಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಬೆನ್ನಲ್ಲೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದು ವೈರಲ್ ಆಗಿದೆ. ಸುಹಾಸ್ ಹತ್ಯೆ ಬೆನ್ನಲ್ಲೆ 'ಫಿನೀಶ್' ಎಂಬ ಪೋಸ್ಟ್ ಹಾಕಲಾಗಿದ್ದು ಕಾರ್ಯಕರ್ತರ ಕೋಪವನ್ನ ಮತ್ತಷ್ಟು ಹೆಚ್ಚಿಸಿದೆ.

ಹೌದು ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ಹಿಂದೂ ಕಾರ್ಯಕರ್ತರ ಕೋಪವನ್ನ ನೆತ್ತಿಗೇರಿಸಿದೆ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದು ವೈರಲ್ ಆಗಿದ್ದು ಮತ್ತಷ್ಟು ಸೇಡಿನ ಕಿಚ್ಚನ್ನು ಹೊತ್ತಿಸಿದೆ. ಕಳೆದ ದಿನ ರಾತ್ರಿ ಸುಹಾಸ್‌ ಶೆಟ್ಟಿಯನ್ನು ಸಾರ್ವಜನಿಕರ ಎದುರು ಕೊಚ್ಚಿ ಕೊಲೆ ಮಾಡಲಾಗಿದ್ದು, ಹಿಂದೂ ಕಾರ್ಯಕರ್ತರು ಇಂದು ಮಂಗಳೂರು ಬಂದ್‌ಗೆ ಕರೆ ನೀಡಿದ್ದಾರೆ.

mangaluru suhas shetty murder case Finish post viral in social media

Troll_mayadiaka ಹೆಸರಿನ ಇನ್‌ಸ್ಟಾಗ್ರಾಮ್‌ ಸ್ಟೇಟಸ್‌ನಲ್ಲಿ 'ಫಿನೀಶ್' ಪೋಸ್ಟ್‌ ಜೊತೆಗೆ Waiting for next wicket ಎಂಬ ಸಂದೇಶದ ಸ್ಟೇಟಸ್ ಹಾಕಲಾಗಿದೆ. ನಕಲಿ ಇನ್‌ಸ್ಟಾಗ್ರಾಮ್ ಪೇಜ್‌ಗಳಲ್ಲಿ ಹತ್ಯೆಯ ವಿಡಿಯೋ ಪೋಸ್ಟ್ ಮಾಡಿ ಸಂಭ್ರಮಾಚರಣೆ ಮಾಡಿರುವುದು ಕಂಡುಬಂದಿದೆ. ವಿಡಿಯೋ ಸಹಿತ ನೆಸ್ಟ್ ಟಾರ್ಗೇಟ್ ಎಂಬ ಪೋಸ್ಟ್ ಹಾಕಲಾಗಿದ್ದು ಇದು ಕಾನೂನಿನ ಬಗ್ಗೆ ಜನರಿಗೆ ಇರುವ ಭಯ ಎಷ್ಟಿದೆ ಎನ್ನುವುದನ್ನು ತೋರಿಸುತ್ತದೆ.

ಒಬ್ಬ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಿರುವುದು ಮಾತ್ರವಲ್ಲದೆ, ವಿಡಿಯೋ ಹಾಗೂ ಪೋಸ್ಟ್ ಹಂಚಿಕೊಂಡು Waiting for next wicket ಎಂದು ಬರೆದುಕೊಳ್ಳಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅಷ್ಟೇ ಅಲ್ಲ ಮಾರ್ಚ್‌ ತಿಂಗಳಲ್ಲೇ ಸುಹಾಸ್ ಶೆಟ್ಟಿ ಹತ್ಯೆಗೆ ಮುಹೂರ್ತ ಫಿಕ್ಸ್ ಆಗಿತ್ತು ಎನ್ನುವ ಅನುಮಾನ ಹುಟ್ಟಿಕೊಂಡಿದೆ. ಯಾಕೆಂದರೆ ಅಂದೇ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಟಾರ್ಗೆಟ್ ಕಿಲ್ಲರ್- 03 ಎಂಬ ಇನ್‌ಸ್ಟಾಗ್ರಾಂ ಖಾತೆಯಿಂದ ಸುಹಾಸ್ ಶೆಟ್ಟಿ ಪೋಟೋ ಹಾಕಿ ಶೀಘ್ರದಲ್ಲೇ ಸೇಡು ತೀರಿಸಿಕೊಳ್ಳುವುದಾಗಿ ಪೋಸ್ಟ್ ಹಾಕಲಾಗಿತ್ತು.

ಸುಹಾಸ್ ಶೆಟ್ಟಿ ಹತ್ಯೆಯಾದ ಕೆಲವೇ ನಿಮಿಷದಲ್ಲಿ 'ಫಿನಿಶ್' ಎಂದು ಸ್ಟೇಟಸ್ ಹಾಕಲಾಗಿದೆ. ಜೊತೆಗೆ ಹತ್ಯೆ ಬೆನ್ನಲ್ಲೇ ವಿಡಿಯೋ ಹಂಚಿಕೊಳ್ಳುವ ಮೂಲಕ ಸಂಭ್ರಮಿಸಲಾಗಿದೆ. ಹೀಗೆ ಪಕ್ಕಾ ಪ್ಲ್ಯಾನ್ ಮಾಡಿ ಸುಹಾಸ್ ಶೆಟ್ಟಿಯನ್ನು ಕೊಲೆ ಮಾಡಲಾಗಿದೆ. ಈ ಘಟನೆ ಮಂಗಳೂರಿನಲ್ಲಿ ಸಾಕಷ್ಟು ಸಂಚಲವನ್ನು ಮೂಡಿಸಿದೆ.

ಅಂದಹಾಗೆ ಕೊಲೆಯಾದ ಸುಹಾಸ್ ಶೆಟ್ಟಿ ವಿರುದ್ಧ ಹಲವು ಪ್ರಕರಣಗಳು ಇವೆ. ಮಂಗಳೂರಿನ ವಿವಿಧ ಪೊಲೀಸ್ ಠಾಣೆಯಲ್ಲಿ ಒಟ್ಟು ಐದು ಪ್ರಕರಣಗಳು ದಾಖಲಾಗಿವೆ. ಸುಹಾಸ್ ಫಾಜಿಲ್ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ಹೊರಬಂದಿದ್ದರು. ಐದು ಪ್ರಕರಣಗಳ ಪೈಕಿ ಎರಡು ಪ್ರಕರಣಗಳು ಖುಲಾಸೆಗೊಂಡಿದ್ದರೆ ಇನ್ನೆರೆಡು ವಿಚಾರಣೆ ಹಂತದಲ್ಲಿ ಇವೆ.

ಸುಹಾಸ್ ಹತ್ಯೆ ಅದೆಷ್ಟು ಭೀಕರವಾಗಿತ್ತು ಅಂದರೆ ಸ್ಥಳೀಯರ ಕಣ್ಣೆದುರು ಹಂತಕರು ಕೊಚ್ಚಿ ಕೊಲೆ ಮಾಡಿದ್ದಾರೆ. ಟೆಂಪೋ ಹಾಗೂ ಒಂದು ಸ್ವಿಫ್ಟ್ ಕಾರಿನ ಮೂಲಕ ಸುಹಾಸ್ ಕಾರನ್ನ ಚೇಸ್ ಮಾಡಿದ ಹಂತಕರು, ಸುಹಾಸ್ ಕಾರಿಗೆ ಗುದ್ದಿದ್ದಾರೆ. ಗುದ್ದಿದ ರಬಸಕ್ಕೆ ಸುಹಾಸ್ ಕಾರು ಸೆಲ್ಯೂನ್ ಒಳಗೆ ನುಗ್ಗಿದೆ.

ಇನ್ನೂ ಸ್ವಿಫ್ಟ್ ಕಾರಿನಲ್ಲಿ ಇದ್ದ ನಾಲ್ವರು ಹಂತಕರು ಮಾರಕಾಸ್ತ್ರಗಳಿಂದ ಸಾರ್ವಜನಿಕರ ಎದುರೇ ಸುಹಾಸ್‌ನನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಈ ದೃಶ್ಯ ಸ್ಥಳೀಯರ ಕ್ಯಾಮರಾದಲ್ಲಿ ಸೆರೆಯಾಗಿದೆ. ಮಂಗಳೂರು ಹೊರವಲಯದ ಬಜಪೆ ಕಿನ್ನಪದವು ಬಳಿ ಈ ಘಟನೆ ನಡೆದಿದ್ದು ಸ್ಥಳೀಯರಲ್ಲಿ ಆತಂಕ ಶುರುವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+