ಅಪರೂಪದ ಈ ಮ್ಯೂಸಿಯಂ ಅಭಿವೃದ್ಧಿ ಮಾಡುವವರು ಯಾರು?
ಮಂಗಳೂರು, ಜೂ.27 : ಅಪರೂಪದ ವಿಗ್ರಹ, ರಾಜರ ಕಾಲದ ಆಯುಧ, ತಾಳೆಗರಿ, 2ನೇ ಮಹಾಯುದ್ಧ ಸಂದರ್ಭದಲ್ಲಿನ ಅತ್ಯಂತ ಅಪರೂಪದ ದಾಖಲೆ ಪತ್ರಗಳು ಹೀಗೆ ಮಂಗಳೂರಿನ ಮ್ಯೂಸಿಯಂನಲ್ಲಿರುವ ವಸ್ತುಗಳಿಗೆ ಬೆಲೆ ಕಟ್ಟಲಾಗುವುದಿಲ್ಲ. ಆದರೆ, ಮ್ಯೂಸಿಯಂ ಮಾತ್ರ ಪಾಳು ಬಿದ್ದ ಬಂಗಲೆಯಂತಾಗಿದೆ.
ಮಂಗಳೂರಿನಲ್ಲಿರೋ ಏಕೈಕ ಸರ್ಕಾರಿ ವಸ್ತು ಸಂಗ್ರಹಾಲಯ 'ಶ್ರೀಮಂತಿ ಬಾಯಿ ಮ್ಯೂಸಿಯಂ'. ಬಿಜೈನ ಗುಡ್ಡ ಪ್ರದೇಶದಲ್ಲಿರೋ ಈ ಮ್ಯೂಸಿಯಂ ಕಟ್ಟಡ, ಮಂಗಳೂರಿನಲ್ಲೇ ಅತಿ ಹಳೆಯ ಕಟ್ಟಡ ಎಂಬ ಹಿರಿಮೆಗೆ ಪಾತ್ರವಾಗಿದೆ. ಹಾಗೆಯೇ ಅಭಿವೃದ್ಧಿ ಕಾಣದೇ ಸೊರಗುತ್ತಿದೆ. ಇಲ್ಲಿ ಮ್ಯೂಸಿಯಂ ಇದೆ ಎನ್ನುವುದು ಅನೇಕ ಜನರಿಗೆ ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ. [ಮಂಗಳೂರಿನಲ್ಲಿ ಇದು ಕೇವಲ ಮನೆಯಲ್ಲ ಮ್ಯೂಸಿಯಂ]
ದ್ವಿತೀಯ ಮಹಾಯುದ್ಧದಲ್ಲಿ ಸೇನಾ ವೈದ್ಯರಾಗಿದ್ದ ಕರ್ನಲ್ ಮಿರಾಜ್ಕರ್ ಈ ಮ್ಯೂಸಿಯಂ ಸ್ಥಾಪನೆ ಮಾಡಿದರು. 1960ರಲ್ಲಿ ತಮ್ಮ ತಾಯಿ ಶ್ರೀಮಂತಿಬಾಯಿ ಅವರ ನೆನಪಿಗಾಗಿ ಸಾರ್ವಜನಿಕರಿಗೆ ಉಪಯೋಗವಾಗಲಿ ಎಂದು ಅಪರೂಪದ ದಾಖಲೆಗಳ ಸಂಗ್ರಹವಿದ್ದ ಕಟ್ಟಡವನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು.
ಮಂಗಳೂರು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ನಿರ್ಲಕ್ಷ್ಯದಿಂದಾಗಿ ಈ ಮ್ಯೂಸಿಯಂ ಪಾಳುಬಿದ್ದ ಬಂಗಲೆಯಂತಾಗಿದೆ. ಸರ್ಕಾರದ ವಶಕ್ಕೆ ನೀಡಿದ ಈ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೆ ಸೊರಗುತ್ತಿದೆ. ಹೇಗಿದೆ ಮ್ಯೂಸಿಯಂ ಸ್ಥಿತಿ ಚಿತ್ರಗಳಲ್ಲಿ ನೋಡಿ.....

ಪುರಾತನ ಕಟ್ಟಡ ಅಭಿವೃದ್ಧಿಗಾಗಿ ಕಾದಿದೆ
ಮಂಗಳೂರು ನಗರದ ಏಕೈಕ ಸರ್ಕಾರಿ ವಸ್ತು ಸಂಗ್ರಹಾಲಯ ಬಿಜೈನ ಗುಡ್ಡ ಪ್ರದೇಶದಲ್ಲಿದೆ. ಮಂಗಳೂರಿನಲ್ಲೇ ಅತಿ ಹಳೆಯ ಕಟ್ಟಡ ಎಂಬ ಹಿರಿಮೆಗೆ ಪಾತ್ರವಾಗಿದೆ. ಹಾಗೆಯೇ ಅಭಿವೃದ್ಧಿ ಕಾಣದೇ ಸೊರಗುತ್ತಿದೆ. ಇಲ್ಲಿ ಮ್ಯೂಸಿಯಂ ಇದೆ ಎನ್ನುವುದು ಅನೇಕ ಜನರಿಗೆ ತಿಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ. ಮೂಲ ಸೌಕರ್ಯಗಳ ಕೊರತೆಯಿಂದ ಮ್ಯೂಸಿಯಂಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿಲ್ಲ.

ಶ್ರೀಮಂತಿಬಾಯಿ ಮ್ಯೂಸಿಯಂ
ದ್ವಿತೀಯ ಮಹಾಯುದ್ಧದಲ್ಲಿ ಸೇನಾ ವೈದ್ಯರಾಗಿದ್ದ ಕರ್ನಲ್ ಮಿರಾಜ್ಕರ್ ಈ ಮ್ಯೂಸಿಯಂ ಸ್ಥಾಪನೆ ಮಾಡಿದರು. 1960ರಲ್ಲಿ ತಮ್ಮ ತಾಯಿ ಶ್ರೀಮಂತಿಬಾಯಿ ಅವರ ನೆನಪಿಗಾಗಿ ಸಾರ್ವಜನಿಕರಿಗೆ ಉಪಯೋಗವಾಗಲಿ ಅಪರೂಪದ ದಾಖಲೆಗಳ ಸಂಗ್ರಹವಿದ್ದ ಕಟ್ಟಡವನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು.

ಮ್ಯೂಸಿಯಂನಲ್ಲಿ ಏನೇನಿದೆ?
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವಂತಹ ವಸ್ತುಗಳು ಈ ಮ್ಯೂಸಿಯಂನಲ್ಲಿವೆ. ರಾಮಾಯಣ, ಮಹಾಭಾರತದ ತಾಳೆಗರಿ, ಪ್ರಾಚೀನ ಇತಿಹಾಸವನ್ನು ಸಾರುವ ಶಾಸನ, ರಾಮ- ಸೀತೆಯರ ವಿಗ್ರಹ, ಚೋಳರು, ಅಳುಪರು, ಹೊಯ್ಸಳರ ಕಾಲದ ಆಯುಧ, ಶಿಲಾಯುಗದಲ್ಲಿ ಬಳಸುತ್ತಿದ್ದ ಪರಿಕರಗಳು, ಗಾಂಧೀಜಿಯವರ ಅಪರೂಪದ ಪತ್ರಗಳು, 2ನೇ ಮಹಾಯುದ್ಧ ಸಂದರ್ಭದಲ್ಲಿನ ಅತ್ಯಂತ ಅಪರೂಪದ ದಾಖಲೆ ಪತ್ರಗಳು ಸೇರಿದಂತೆ ಹಲವಾರು ವಸ್ತುಗಳು ಇಲ್ಲಿವೆ.

ಮ್ಯೂಸಿಯಂಗೆ ಸರಿಯಾದ ರಸ್ತೆ ಇಲ್ಲ
ಈ ಮ್ಯೂಸಿಯಂನಲ್ಲಿ ಬೆಲೆಬಾಳುವ ವಸ್ತುಗಳಿದ್ದರೂ, ಒಬ್ಬ ವಾಚ್ ಮ್ಯಾನ್ ಬಿಟ್ಟರೆ ಬೇರೆ ಭದ್ರತಾ ವ್ಯವಸ್ಥೆ ಇಲ್ಲ. ಇಲ್ಲಿಗೆ ಆಗಮಿಸುವ ಜನರಿಗೆ ಮಾಹಿತಿ ಕೊಡುವ ಗೈಡ್‌ಗಳಿಲ್ಲ. ಮ್ಯೂಸಿಯಂ ಸಂಪರ್ಕಿಸುವ ರಸ್ತೆ ನೋಡಿದರೆ ಕಾಡಿನ ದಾರಿ ನೆನಪಾಗುತ್ತದೆ.

ಅಭಿವೃದ್ಧಿ ಮಾಡುವವರು ಯಾರು?
ಈ ಮ್ಯೂಸಿಯಂ ಅಭಿವೃದ್ಧಿಯನ್ನು ಯಾರು ಮಾಡಬೇಕು ಎಂಬುದು ದೊಡ್ಡ ಪ್ರಶ್ನೆ. ನಗರದ ಮೇಯರ್ ಜೆಸಿಂತಾ ಅಲ್ಫ್ರೆಡ್ ಅವರು ರಸ್ತೆ ಸರಿಮಾಡುತ್ತೇವೆ. ಆದರೆ, ಮ್ಯೂಸಿಯಂ ಪ್ರಾಚ್ಯವಸ್ತು ಇಲಾಖೆಗೆ ಸೇರಿದೆ. ಆದ್ದರಿಂದ ಅದರ ವೊಳಗೆ ನಾವು ಕಾಮಗಾರಿ ಕೈಗೊಳ್ಳುವಂತಿಲ್ಲ ಎಂದು ಹೇಳುತ್ತಾರೆ.












Click it and Unblock the Notifications