ವಿಡಿಯೋ ವೈರಲ್: ಮಂಗಳೂರಿನ ರಸ್ತೆ ಪರಿಸ್ಥಿತಿ ಅಣಕಿಸಿದ ಮಿಲ್ಕ್ ಶೇಕ್ ಚಾಲೆಂಜ್

ಮಂಗಳೂರು, ಜುಲೈ 25: ಮಂಗಳೂರಿನ ಹದಗೆಟ್ಟ ರಸ್ತೆ, ಅದರ ಮೇಲೆ ಸಾಗುವ ಜನರ ಪರಿಸ್ಥಿತಿಯನ್ನು ಅಣುಕಿಸುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವಕರ ತಂಡ ಒಂದು ಹರಿಬಿಟ್ಟಿರುವ ಈ ಮಿಲ್ಕ್ ಶೇಕ್ ಚಾಲೆಂಜ್ ವಿಡಿಯೋ ಮಂಗಳೂರಿನ ರಸ್ತೆಗಳ ಪರಿಸ್ಥಿತಿಯನ್ನು ವಿವರಿಸುತ್ತದೆ ಮಾತ್ರವಲ್ಲ, ಹಾಸ್ಯದ ಮೂಲಕ ಸರ್ಕಾರ ಹಾಗು ಜಿಲ್ಲಾಡಳಿತಕ್ಕೆ ಚಾಟಿಏಟು ಕೂಡ ನೀಡಿದೆ.

ಮಂಗಳೂರು ಎಂದೊಡನೆ ಕಣ್ಣೆದುರಿಗೆ ತೆಂಗು ಕಂಗುಗಳ ನಡುವೆ ಭಾಸವಾಗುವ ಸುಂದರ ಬೀಚ್ ಗಳು, ಪೌರಾಣಿಕ ಇತಿಹಾಸ ಸಾರುವ ಸಂಪ್ರದಾಯಿಕ ದೇವಾಲಯ, ಚಿತ್ತಾಕರ್ಷಕ ಚರ್ಚ್ ಗಳು , ರುಚಿಕರ ಮೀನಿನ ವಿವಿಧ ಖಾದ್ಯಗಳು ಬರುತ್ತದೆ. ಆದರೆ ಮಂಗಳೂರಿನ ರಸ್ತೆಗಳ ಬಗ್ಗೆ ನೆನೆದರೆ ನರಕ ದರ್ಶನವಾಗುವುದಂತೂ ಖಂಡಿತ. ಮಂಗಳೂರಿನ ರಸ್ತೆಗಳ ಬಗ್ಗೆ ಯೋಚಿಸಿದರೆ ಗಾಢ ನಿದ್ರೆಯಲ್ಲೂ ಬೆಚ್ಚಿ ಬೀಳುವ ಪರಿಸ್ಥಿತಿ ಬಂದಿದೆ.

ಮಂಗಳೂರಿನಲ್ಲಿ ನರಕದ ದರ್ಶನ ಮಾಡಿಸುವ ರಸ್ತೆಗಳ ಬಗ್ಗೆ ಯುವಕರ ತಂಡ ಒಂದು ಫನ್ನಿ ವಿಡಿಯೋ ಒಂದನ್ನು ಚಿತ್ರಿಸಿದೆ. ಮಂಗಳೂರಿನ ಕುಳಾಯಿ ಯಿಂದ ಕುಳೂರು ವರೆಗಿನ ರಸ್ತೆ ಎಷ್ಟು ಹದಗೆಟ್ಟಿದೆ ಎಂಬದನ್ನು ಈ ಯುವಕರ ತಂಡ ಈ ವಿಡಿಯೋ ದಲ್ಲಿ ತೋರಿಸಿದೆ.

Mangaluru road condition mocked Milk shake challenge video viral

ಮಂಗಳೂರಿನ ಕುಳಾಯಿಯಿಂದ ಕುಳೂರುವರೆಗೆನ ರಸ್ತೆಯಲ್ಲಿ ವಾಹನ ಚಲಾಯಿಸುವುದು ಒಂದು ಸಾಹಸವೇ ಸರಿ. ಕುಳೂರು -ಕುಳಾಯಿ ರಸ್ತೆ ಮೃತ್ಯು ಕೂಪವಾಗಿ ಪರಿಣಮಿಸಿದ್ದು, ಅದರಲ್ಲೂ ಕುಳೂರಿನ ಸೇತುವೆ ಮೇಲೆ ವಾಹನ ಚಲಾಯಿಸಿದರಂತೂ ಮುಗಿದೇ ಹೋಯಿತು. ಬೆನ್ನು ಮೂಳೆ ಮುರಿಯುವುದು ಗ್ಯಾರಂಟಿ .

ಈಗಾಗಲೇ ವಯಸ್ಸಾಗಿರುವ 65 ವರ್ಷ ಹಳೆಯ ಸೇತುವೆ ಮೇಲೆ ರಸ್ತೆಯ ಡಾಂಬರ್ ಸಂಪೂರ್ಣ ಕಿತ್ತು ಹೋಗಿದೆ. ಈ ರಸ್ತೆಯ ಪರಿಸ್ಥಿತಿಯ ಮೇಲೆ ಯುವಕರ ತಂಡ ವಿಡಿಯೋ ಚಿತ್ರಿಕರಿಸಿದೆ. ಇಲ್ಲಿಯ ಪರಿಸ್ಥಿತಿಯನ್ನು ಅಣಕಿಸುವ ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Mangaluru road condition mocked Milk shake challenge video viral

ಮಿಲ್ಕ್ ಶೇಕ್ ಚಾಲೆಂಜ್ #milkshakechallenge ಹಾಗೂ ಎಡ್ಡೆ ರೋಡ್ ಬೋಡು #yedderoadbodu ಎಂದು ಈ ವಿಡಿಯೋಗೆ ಟೈಟಲ್ ನೀಡಿ ಹರಿಬಿಡಲಾಗಿದೆ.

ಈ ವಿಡಿಯೋದಲ್ಲಿ ಮಂಗಳೂರಿನ ಯುವಕರ ತಂಡ ಕಾರಿನಲ್ಲಿ ಮಿಲ್ಕ್ ಶೇಕ್ ಮಾಡುವ ಬಗೆಯನ್ನು ತುಂಬಾ ವ್ಯಂಗ್ಯವಾಗಿ ವಿವರಿಸಿದೆ. ಮಿಲ್ಕ್ ಶೇಕ್ ಮಾಡಲು ತಗಲುವ ಹಾಲು, ಸಕ್ಕರೆ, ಮಿಲ್ಕ್ ಶೇಕ್ ಪ್ಲೇವರ್ ಹಾಕಿ ಶೇಕ್ ಮಾಡದೆ ಕೂಳೂರು ಬ್ರಿಡ್ಜ್ ದಾಟುವುದರಲ್ಲಿ ಮಿಲ್ಕಶೇಕ್ ತಯಾರಾಗುವ ಬಗೆಯನ್ನು ಯುವಕರ ತಂಡ ತೋರಿಸಿದೆ.

Mangaluru road condition mocked Milk shake challenge video viral

ಈ ರಸ್ತೆಯ ಮೇಲೆ ಸಾಗಿದರೆ ಮಿಲ್ಕ್ ಶೇಕ್ ಅನ್ನು ಶೇಕ್ ಮಾಡುವ ಅವಶ್ಯಕತೆ ಇಲ್ಲ. ರಸ್ತೆಗುಂಡಿಯ ಮೇಲೆ ಸಾಗುವಾಗ ತಾನಾಗಿಯೇ ಮಿಲ್ಕ್ ಶೇಕ್ ರೆಡಿಯಾಗುತ್ತದೆ ಎಂದು ಈ ತಂಡ ರಸ್ತೆ ಪರಿಸ್ಥಿತಿಯನ್ನು ಅಣುಕಲಿಸಿದೆ. ರಸ್ತೆಯ ಪರಿಸ್ಥಿತಿಯನ್ನು ಅಣಕಿಸುವ ಯುವಕರ ಈ ಪ್ರಯತ್ನ ಸರ್ಕಾರದ ಕಣ್ಣು ತೆರೆಸಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+