ಮೂವರು ಅಂತರರಾಜ್ಯ ವಾಹನ ಕಳ್ಳರು ಪೊಲೀಸ್ ಬಲೆಗೆ: 15 ದ್ವಿಚಕ್ರವಾಹನ ವಶ
ಮಂಗಳೂರು, ನವೆಂಬರ್. 14:ಅಂತರರಾಜ್ಯ ಮೋಟಾರ್ ವಾಹನ ಕಳ್ಳತನದ 15 ಪ್ರಕರಣಗಳನ್ನು ಭೇದಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ 3 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, 20 ಲಕ್ಷ ರೂಪಾಯಿ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರನ್ನು ಕಾಸರಗೋಡಿನ ಶಾಹಿರ್ (23 ), ಮೊಹಮ್ಮದ್ ಆದೀಲ್ (26) , ಅಬ್ದುಲ್ ಮುನಾವರ್ (21) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳನ್ನು ತನಿಖೆಗೆ ಒಳಪಡಿಸಿದಾಗ ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಬುಲೆಟ್ ಸೇರಿದಂತೆ ಒಟ್ಟು 15 ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡಿರುವುದಾಗಿ ತಿಳಿಸಿದ್ದಾರೆ.

ಉಳ್ಳಾಲ ಠಾಣಾ ವ್ಯಾಪ್ತಿಯ 4 ಪ್ರಕರಣಗಳಲ್ಲಿ ಒಟ್ಟು 4 ಬುಲೆಟ್ ಮೋಟಾರ್ ಸೈಕಲ್ ಗಳು, ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯ 6 ಪ್ರಕರಣಗಳಲ್ಲಿ ಒಟ್ಟು 5 ಬುಲೆಟ್ ಮೋಟಾರ್ ಸೈಕಲ್ ಮತ್ತು 1 ಸ್ಕೂಟರ್, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಒಂದು ಬುಲೆಟ್ ಮತ್ತು 1 ಬೈಕ್ , ಉರ್ವ ಪೊಲಿಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ 2 ಬುಲೆಟ್ ಹಾಗೂ ಪೂರ್ವ ಪೊಲಿಸ್ ಠಾಣಾ ವ್ಯಾಪ್ತಿಯ 1 ಪ್ರಕರಣದಲ್ಲಿ 1 ಬೈಕ್ ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದಂತಾಗಿದೆ.












Click it and Unblock the Notifications