ತಾಯಿ ಹೆಸರಲ್ಲಿ ಸೇವೆ ಮಾಡಿ ಫೇಮಸ್ ಆದ ಮಂಗಳೂರು ಕ್ಯಾಬ್ ಚಾಲಕ

ಮಂಗಳೂರು, ಮೇ 26: ನಾವು ಇತ್ತೀಚಿನ ಕೆಲವು ದಿನಗಳಿಂದ ಕ್ಯಾಬ್ ಡ್ರೈವರ್‍ಗಳು ಒಂಟಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತನೆ ಮಾಡುವುದು, ಅತ್ಯಾಚಾರ ಅಥವಾ ಸಾಮಾನ್ಯ ಜನರಿಂದ ಸುಲಿಗೆ ಮಾಡುವ ಬಗ್ಗೆ ಮಾಧ್ಯಮಗಳಲ್ಲಿ ಕೇಳಿರುತ್ತೇವೆ. ಇದಕ್ಕೆ ವಿರುದ್ದವೆಂಬಂತೆ ಮಂಗಳೂರಿನ ಕ್ಯಾಬ್ ಚಾಲಕನೊಬ್ಬ ತನ್ನ ನಿಸ್ವಾರ್ಥ ಸೇವೆ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ಎನಿಸಿಕೊಂಡಿದ್ದಾರೆ.

ಮಂಗಳೂರು ನಗರದಲ್ಲಿ ಓಲಾ ಕ್ಯಾಬ್ ಓಡಿಸುತ್ತಿರುವ ಸುನಿಲ್ ಎಂಬಾತನಿಗೆ ಆನ್‍ಲೈನ್ ಮೂಲಕ ಬಾಡಿಗೆಗೆ ಕರೆಬರುತ್ತದೆ. ಅದರಂತೆ ನಗರದ ಅಶೋಕನಗರದಲ್ಲಿರುವ ಕಾವ್ಯಾ ಎಂಬ ಗ್ರಾಹಕರ ಮನೆಗೆ ಆಗಮಿಸಿ, ಅಲ್ಲಿ ಅನಾರೋಗ್ಯ ಪೀಡಿತರಾದ ಕಾವ್ಯಾ ಅವರ ತಂದೆಯನ್ನು ನಗರದ ಪ್ರಮುಖ ಆಸ್ಪತ್ರೆಗೆ ದಾಖಲಿಸುತ್ತಾರೆ. ಈ ವೇಳೆ ಕಾರು ಬಾಡಿಗೆ 140 ಆಗಿತ್ತು. ಇದನ್ನು ನೀಡಲು ಕಾವ್ಯಾ ಅವರ ತಾಯಿ ಮುಂದಾದಾಗ ಬಾಡಿಗೆ ಹಣ ತೆಗೆದುಕೊಂಡಿಲ್ಲ.

Mangaluru Ola cab driver's heart-warming gesture wins the internet media

ಕೊನೆಗೆ ಒತ್ತಾಯ ಮಾಡಿ ಪೆಟ್ರೋಲ್ ಹಣವನ್ನು ನೀಡುತ್ತೇನೆ ಎಂದರೂ ನಿರಾಕರಿಸುತ್ತಾರೆ. ಆಗ ಕಾವ್ಯಾ ತಾಯಿ ಯಾಕೆ ಹಣ ಸ್ವೀಕರಿಸುತ್ತಿಲ್ಲ ಎಂಬ ಪ್ರಶ್ನೆಗೆ " ನಾನ್ನ ಕಾರಿನಲ್ಲಿ ಬಡ ರೋಗಿಗಳಿಗೆ ಆಸ್ಪತ್ರೆಗೆ ಸಾಗಿಸುವ ಬಾಡಿಗೆಗೆ ಹಣ ಪಡೆಯುವುದಿಲ್ಲ. ಇದನ್ನು ನನ್ನ ಉಚಿತ ಸೇವೆ ಎನ್ನುತ್ತಾರೆ. ಈ ಸುನಿಲ್ ಅವರ ನಿಸ್ವಾರ್ಥ ಸೇವೆಯ ಬಗ್ಗೆ ಕಾವ್ಯಾ ಫೇಸ್‍ಬುಕ್‍ನಲ್ಲಿ ಶೇರ್ ಮಾಡುತ್ತಾರೆ. ಕಳೆದ ಮಂಗಳವಾರದಂದು ಹಾಕಿದ ಪೋಸ್ಟ್‍ನಿಂದಾಗಿ ಸುನಿಲ್‍ಗೆ ದೇಶದೆಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

Mangaluru Ola cab driver's heart-warming gesture wins the internet media

ತಾಯಿ ಹೆಸರಲ್ಲಿ ಸೇವೆ ಮಾಡುವ ಸುನೀಲ್
ಈ ಬಗ್ಗೆ ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯಿಸಿದ ಸುನಿಲ್ "ಎರಡು ವರ್ಷದಿಂದ ಕ್ಯಾಬ್ ಓಡಿಸುತ್ತಿದ್ದೇನೆ. ಎಂಟು ತಿಂಗಳ ಹಿಂದೆ ನನ್ನ ತಾಯಿ ಸಾವನ್ನಪ್ಪಿದ್ದಾರೆ. ಅವರ ನೆನಪಿಗೋಸ್ಕರ ಈ ಸೇವೆ ಮಾಡುವ ಮೂಲಕ ಜನಸೇವೆ ಮಾಡುತ್ತಿದ್ದೇನೆ ಎಂದಿದ್ದಾರೆ. ತಾಯಿ ಕಳೆದುಕೊಂಡಾಗಿನಿಂದ ಯಾವುದೇ ರೋಗಿಗಳಿಗೂ ನಾನು ಬಾಡಿಗೆ ತೆಗೆದುಕೊಳ್ಳುವುದಿಲ್ಲ. ಅದರಂತೆ ಮಾಮೂಲಿ ಎಂಬಂತೆ ಕಾವ್ಯ ಎಂಬವರಿಂದ ಹಣ ಪಡೆದಿಲ್ಲ ಎನ್ನುತ್ತಾರೆ.

Mangaluru Ola cab driver's heart-warming gesture wins the internet media

40 ಸಾವಿರಕ್ಕೂ ಹೆಚ್ಚು ಲೈಕ್!
ಕಾವ್ಯಾ ಅವರು ಸುನಿಲ್ ಬಗ್ಗೆ ಹಾಕಿದ ಪೋಸ್ಟ್‍ಗೆ ಒಂದೇ ದಿನದಲ್ಲಿ 40 ಸಾವಿರ ಲೈಕ್‍ಗಳು ಬಂದಿವೆ. ಜೊತೆಗೆ ಫೇಸ್‍ಬುಕ್ ಸೇರಿ ಇತರ ಜಾಲತಾಣಗಳಿಂದ 2,200 ಮಂದಿ ಶೇರ್ ಮಾಡಿಕೊಂಡಿದ್ದಾರೆ.

ಅಭಿನಂದನೆಗಳ ಮಹಾಪೂರ
ಫೇಸ್‍ಬುಕ್ ಸೇರಿ ಇತರ ಸಾಮಾಜಿಕ ಜಾಲತಾಣದಲ್ಲಿ ಶೇರ್ ಆದ ಈ ವಿಷಯ ಗೊತ್ತಾಗಿದ್ದು ನನಗೆ ಕರೆ ಬಂದಾಗಲೇ. ಈಗಾಗಲೇ ದೇಶದೆಲ್ಲೆಡೆಯಿಂದ ಸಾವಿರಾರು ಕರೆಗಳ ಮೂಲಕ ಶುಭಾಶಯ ಹರಿದು ಬರುತ್ತಿದೆ. ಇದರಿಂದ ತುಂಬಾ ಖುಷಿಗೊಂಡಿದ್ದೇನೆ. ನನಗೆ ಯಾವುದೇ ಪ್ರಚಾರ ಬೇಕಾಗಿಲ್ಲ. ಯಥಾಪ್ರಕಾರ ನನ್ನ ಈ ಕಾಯಕ ಮುಂದುವರೆಯುತ್ತದೆ ಎನ್ನುತ್ತಾರೆ 28 ವರ್ಷದ ಸುನಿಲ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+