ಮಂಗಳೂರು: ಕಾಮದ ಕಣ್ಣಿಂದ ನೋಡಿದ್ದಕ್ಕೆ ಕೊಲೆಯಾಗಿ ಹೋದ

ಮಂಗಳೂರು, ಫೆ. 11: ಕಾಮದ ಕಣ್ಣಿಂದ ಬೇರೆಯವರ ಹೆಂಡತಿಯನ್ನು ನೋಡಿದವ ಕೊಲೆಯಾಗಿ ಹೋಗಿದ್ದಾನೆ. ಬಟ್ಟೆ ತೊಳೆಯುತ್ತಿದ್ದವಳನ್ನು ಅಶ್ಲೀಲ ದೃಷ್ಟಿಯಲ್ಲಿ ನೋಡಿದ ವ್ಯಕ್ತಿ ಆಕೆಯ ಗಂಡನಿಂದಲೇ ಹತ್ಯೆಯಾಗಿದ್ದಾನೆ.

ಪತ್ನಿಯನ್ನು ಅಶ್ಲೀಲವಾಗಿ ನೋಡುತ್ತಿದ್ದ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ. ಪಣಂಬೂರು ತೋಟಬೆಂಗರೆಯ ಫೇರಿಯದ ಸಾಗರಕಿರಣ ರಾಣಿ ಬಲೆ ಟೆಂಟ್ ಕಟ್ಟಡದ ಬಳಿ ಫೆ. 3ರಂದೇ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.[ಮಂಗಳೂರು : ಕೇಶವ ಶೆಟ್ಟಿ ಕೊಂದಿದ್ದ ಸತೀಶ್ ಬಂಧನ]

mangaluru

ಮುಖ್ಯ ಆರೋಪಿ ಅಮಿತ ಕೋಟ್ಯಾನ್‌ ಮತ್ತು ಆತನ ಸ್ನೇಹಿತ ಫ್ರಾನ್ಸಿಸ್ ನನ್ನು ಬಂಧಿಸಲಾಗಿದೆ. ಕೊಲೆಯಾದ ವ್ಯಕ್ತಿಯನ್ನು ತಿರುವನಂತಪುರದ ಮೂಲದ ಆಂಟನಿ (45) ಎಂದು ಗುರುತಿಸಲಾಗಿದೆ.
ಅಪರಿಚಿತ ಗಂಡಸಿನ ಶವ ಕಂಡುಬಂದ ಹಿನ್ನಲೆಯಲ್ಲಿ ಶೇಖರ್ ಸುವರ್ಣ ಎಂಬುವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಈ ಬಗ್ಗೆ ತನಿಖೆ ನಡೆಸಿದ ಪೊಲೀಈಸರಿಗೆ ಒಂದೊಂದೆ ಮಾಹಿತಿ ಸಿಕ್ಕಿತ್ತು.[ಮಂಗಳೂರು : ಎಂಆರ್ ಪಿಎಲ್ ಮುಂದೆ ಶವವಾದ ಗ್ರಾಮಸ್ಥರು!]

ತೋಟಬೆಂಗರೆಯ ನಿವಾಸಿ ಅಮಿತ ಕೋಟ್ಯಾನ್ ಜತೆಯಲ್ಲಿ ಆಂಟನಿ ಮೀನುಗಾರಿಕೆ ಕೆಲಸ ಮಾಡುತ್ತಿದ್ದ. ಆರೋಪಿ ಪತ್ನಿ ಬಟ್ಟೆ ತೊಳೆಯುವಾಗ, ಮೀನು ಮಾರುತ್ತಿದ್ದ ಸಮಯದಲ್ಲಿ ಆಂಟನಿ ಆಕೆಯನ್ನು ಕೆಟ್ಟ ದೃಷ್ಟಿಯಿಂದ ನೋಡಿದ್ದ. ಇದನ್ನು ತಿಳಿದ ಅಮಿತ ಕೋಟ್ಯಾನ್ ತನ್ನ ಸ್ನೇಹಿತ ಫ್ರಾನ್ಸಿಸ್ ಜತೆಗೂಡಿ ಕೊಲೆಮಾಡಿದ್ದಾನೆ. ಮನೆಯ ಹಿಂಬದಿಗೆ ಆಂಟನಿಯನ್ನು ಕರೆದುಕೊಂಡು ಹೋಗಿ ಹಲ್ಲೆ ಮಾಡಿದ್ದರು. ನಂತರ ಸಮೀಪದಲ್ಲೇ ಇದ್ದ ಪೇರಳೆ ಮರದ ಬುಡದಲ್ಲಿ ಕಲ್ಲುಗಳಿಂದ ಜಜ್ಜಿ ಹತ್ಯೆಗೈದಿದ್ದರು.

ಈ ಬಗ್ಗೆ ಸಕಲ ಮಾಹಿತಿ ಕಲೆಹಾಕಿದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೊಲೆಪಾತಕರಿಗೆ ಸದ್ಯ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+