ಮಂಗಳೂರು: ನೀವು ಕಳೆದುಕೊಂಡ ಮೊಬೈಲ್‌ ಫೋನ್‌ ಪತ್ತೆ ಆಗಬೇಕೆ..?, ಹಾಗಾದ್ರೆ ಈ ವಿಧಾನವನ್ನು ಅನುಸರಿಸಿ

ಮಂಗಳೂರು, ಜೂನ್‌, 05: ಮೊಬೈಲ್ ಫೋನ್ ಕಳೆದುಕೊಂಡು ಕೆಲವರು ಸಾಕಷ್ಟು ಕಿರಿಕಿರಿ ಅನುಭವಿಸುತ್ತಾರೆ. ಇದೀಗ ಪೊಲೀಸರು ಸಿಇಐಆರ್ ಪೋರ್ಟಲ್ ಸಹಕಾರದಿಂದ ಕಳೆದುಹೋದ ಮೊಬೈಲ್ ಅನ್ನು ಸುಲಭವಾಗಿ ಪತ್ತೆಹಚ್ಚುವ ಮಾದರಿಯನ್ನು ಕಂಡುಕೊಂಡಿದ್ದಾರೆ. ಇದೀಗ ಈ ಮಾದರಿಯ ತಂತ್ರಜ್ಞಾನದ ಸಹಕಾರದಿಂದ ಪತ್ತೆಮಾಡಿರುವ 93 ಫೋನ್‌ಗಳನ್ನು ಮಂಗಳೂರು ಪೊಲೀಸ್ ಕಮಿಷನರ್ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್‌ನ ವಿವಿಧ ಠಾಣಾ ವ್ಯಾಪ್ತಿಯಲ್ಲಿ ಕಳವಾಗಿದ್ದ 93 ಮೊಬೈಲ್ ಫೋನ್‌ಗಳನ್ನು ಸಿಇಐಆರ್ ಪೋರ್ಟಲ್ ತಂತ್ರಜ್ಞಾನದ ಸಹಕಾರದಿಂದ ಪತ್ತೆಹಚ್ಚಲಾಗಿದೆ. ಈ ಫೋನ್‌ಗಳನ್ನು ಪೊಲೀಸ್ ಕಮಿಷನರ್ ಕುಲದೀಪ್ ಕುಮಾರ್ ಆರ್.ಜೈನ್ ವಾರಸುದಾರರಿಗೆ ಹಸ್ತಾಂತರಿಸಿದರು‌.

ಇಲ್ಲಿಯವರೆಗೆ ಮಂಗಳೂರು ನಗರದಲ್ಲಿ ಕಳೆದುಹೋದ, ಸುಲಿಗೆಯಾದ 2,133 ಮೊಬೈಲ್ ಫೋನ್‌ಗಳ ಪತ್ತೆಗೆ ಸಿಇಐಆರ್ ಪೋರ್ಟ್‌ಲ್‌ನ ಐಎಂಇಐ ಬ್ಲಾಕ್‌ಗೆ ಕೋರಿಕೆ ಸಲ್ಲಿಕೆಯಾಗಿತ್ತು. ಇವುಗಳಲ್ಲಿ 524 ಫೋನ್‌ಗಳು ಪತ್ತೆಯಾಗುವ ಮಾಹಿತಿಯಿದೆ. ಸದ್ಯ 240 ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದು, ಈಗಾಗಲೇ 147 ಫೋನ್‌ಗಳನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ‌. ಹಾಗೆಯೇ ಭಾನುವಾರವೂ ಕೂಡ 93 ಮೊಬೈಲ್ ಫೋನ್‌ಗಳನ್ನು ವಾರಸುದಾರರಿಗೆ ನೀಡಲಾಯಿತು.

ಕಳೆದುಹೋದ ಮೊಬೈಲ್ ಫೋನ್‌ಗಳು ದುರುಪಯೋಗವಾಗದಂತೆ ಅನ್ ಬ್ಲಾಕ್ ಮಾಡಲು CEIR ಪೋರ್ಟಲ್ ಅನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿದೆ. ಈ ಮೂಲಕ ಮೊಬೈಲ್‌ ಕಳೆದುಕೊಂಡವರು ಹತ್ತಿರದ ಪೊಲೀಸ್ ಠಾಣೆಯಲ್ಲಿ ಅಥವಾ ಸ್ವತಃ ತಾವೇ ಕೆಎಸ್‌ಪಿ ಆ್ಯಪ್‌ನಲ್ಲಿ ದೂರು ಸಲ್ಲಿಸಬಹುದಾಗಿದೆ.

ಬಳಿಕ (www.celr.gov.in) ಪೋರ್ಟಲ್‌ನಲ್ಲಿ ಕಳೆದು ಹೋಗಿರುವ ಮೊಬೈಲ್ ವಿವರ ಹಾಗೂ ದೂರಿನ ವಿವರಗಳನ್ನು ನಮೂದಿಸಿ ಸ್ವತಃ ಅರ್ಜಿದಾರರೇ ಬ್ಲಾಕ್ ರಿಕ್ವೆಸ್ಟ್‌ಗೆ ನೇರವಾಗಿ ಸಲ್ಲಿಸಬಹುದು. ಅಲ್ಲದೆ ಸ್ಥಳೀಯ ಪೊಲೀಸ್ ಠಾಣೆಗಳಲ್ಲೂ ಬ್ಲಾಕ್ ರಿಕ್ವೆಸ್ಟ್‌ಗೆ ದೂರು ನೀಡಬಹುದು. ಈ ಮೂಲಕ ಪೊಲೀಸರು ಇದರ ಜಾಡುಹಿಡಿದು ಮೊಬೈಲ್ ಫೋನ್‌ಗಳನ್ನು ಪತ್ತೆಹಚ್ಚಿ ವಾರಸುದಾರರಿಗೆ ಹಸ್ತಾಂತರಿಸಲಿದ್ದಾರೆ.

Mangaluru: Follow This Simple Steps to Find Your Lost Mobile Phone

ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಕಮೀಷನರ್ ಕುಲದೀಪ್ ಜೈನ್, ಮೊಬೈಲ್ ಕಳೆದುಕೊಂಡವರು ಯಾವುದೇ ಕಾರಣಕ್ಕೂ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ. ಸಿಇಐರ್ ಪೋರ್ಟಲ್‌ನಲ್ಲಿ ಐಎಂಇಐ ಬ್ಲಾಕ್ ಮಾಡಿ ಮೊಬೈಲ್ ಪತ್ತೆ ಹಚ್ಚಬಹುದಾಗಿದೆ. ಈಗಾಗಲೇ ಕಳವಾಗಿರುವ 2,133 ಮೊಬೈಲ್ ಫೋನ್‌ಗಳ ಪತ್ತೆಗೆ ಕೋರಿಕೆ ಸಲ್ಲಿಸಲಾಗಿದೆ. ಶೀಘ್ರದಲ್ಲೇ ಎಲ್ಲಾ ಮೊಬೈಲ್‌ಗಳನ್ನು ವಾರೀಸುದಾರರಿಗೆ ಹಿಂದುರುಗಿಸಲಾಗುವುದು ಎಂದು ಹೇಳಿದರು.

ಇನ್ನು ಮೊಬೈಲ್ ಕಳೆದುಕೊಂಡಿದ್ದ ಯುವತಿ ನವ್ಯಾ ಮಾತನಾಡಿ, ಮೊಬೈಲ್‌ ಕಳವಾಗಿ ಬಹಳ ನೊಂದಿದ್ದೆ. ಮೊದಲ ಸಂಬಳದಿಂದ ಖರೀದಿಸಿದ ಮೊಬೈಲ್ ಅದಾಗಿತ್ತು. ಮೊಬೈಲ್ ಮತ್ತೆ ಕೈ ಸೇರುವ ನಿರೀಕ್ಷೆಯೇ ಇರಲಿಲ್ಲ. ಮೊಬೈಲ್ ಅನ್ನು ಮರಳಿ ನೀಡಿರುವುದಕ್ಕೆ ಕಮೀಷನರ್‌ಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಕಳುವಾಗಿದ್ದ 130 ಮೊಬೈಲ್‌ಗಳ ಪತ್ತೆ

ಮಂಡ್ಯ ಜಿಲ್ಲೆಯಲ್ಲಿ ಕಳುವಾಗಿದ್ದ 759 ಮೊಬೈಲ್‌ಗಳ ಪೈಕಿ 130 ಮೊಬೈಲ್‌ಗಳನ್ನು ಪತ್ತೆ ಹಚ್ಚಿ ವಾರಸುದಾರರಿಗೆ ವಿತರಿಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಇತ್ತೀಚೆಗಷ್ಟೇ ತಿಳಿಸಿದ್ದರು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ಧಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟೆಲಿಕಾಂ ಕಾಯ್ದೆಯಡಿ 2022ರ ಸೆಪ್ಟಂಬರ್ 6ರಂದು ಸೆಂಟ್ರಲ್ ಎಕ್ಯೂಪ್‌ಮೆಂಟ್ ಐಡೆಂಟಿಟಿ ರಿಜಿಸ್ಟ್ರರ್ (ಸಿಇಐಆರ್) ತಂತ್ರಾಂಶದ ಸಹಾಯದಿಂದ ಕಳೆದ ಒಂದು ತಿಂಗಳ ಅವಧಿಯಲ್ಲಿ ಕಳವು ಅಥವಾ ಕಾಣೆಯಾಗಿದ್ದ ಸುಮಾರು 23 ಲಕ್ಷ ರೂಪಾಯಿ ವೌಲ್ಯದ ವಿವಿಧ ಮಾದರಿಯ 130 ಮೊಬೈಲ್‌ಗಳನ್ನು ಸದರಿ ತಂತ್ರಾಂಶದಿಂದ ನಮ್ಮ ಸೈಬರ್‌ಕ್ರೈಂ ಪೊಲೀಸರು ವಶಪಡಿಸಿಕೊಂಡು ವಾರಸುದಾರರಿಗೆ ಹಿಂತಿರುಗಿಸುತ್ತಿದ್ದಾರೆ ಎಂದು ತಿಳಿಸಿದರು.

ಇನ್ನು ಮುಂದೆ ಯಾರೇ ಮೊಬೈಲ್ ಕಳೆದುಕೊಂಡಲ್ಲಿ ಮೊಬೈಲ್‌ಗೆ ಸಂಬಂಧಿಸಿದ ದಾಖಲಾತಿ, ಪೊಲೀಸ್ ದೂರಿನ ಪ್ರತಿ ಪಡೆದು ವೆಬ್‌ಸೈಟ್‌ನಲ್ಲಿ ಲಾಗಿನ್ ಆಗಿ ಆನ್‌ಲೈನ್ ದೂರು ದಾಖಲಿಸಬಹುದು ಎಂದು ತಿಳಿಸಿದರು. ಅಷ್ಟೇ ಅಲ್ಲದೆ ಮಂಡ್ಯದ ಸಿಇಎನ್ ಅಪರಾಧ ಪೊಲೀಸರು ಹಾಗೂ ಸಿಬ್ಬಂದಿಯವರ ಕ್ರಿಯಾಶೀಲ ಕಾರ್ಯಾಚರಣೆಯನ್ನು ಶ್ಲಾಘಿಸಿದರು.

295 ಮೊಬೈಲ್‌ಗಳ ಪತ್ತೆ

ಅಲ್ಲದೆ ವಿವಿಧಡೆ ಕಳ್ಳತನವಾಗಿದ್ದ ಸುಮಾರು 295 ಮೊಬೈಲ್‌ಗಳನ್ನು ಹೊಸ ತಂತ್ರಜ್ಞಾನದ ಮೂಲಕ ಪತ್ತೆ ಮಾಡುವಲ್ಲಿ ಗದಗ ಜಿಲ್ಲಾ ಪೊಲೀಸರು ಕೂಡ ಇತ್ತೀಚೆಗಷ್ಟೇ ಯಶಸ್ವಿಯಾಗಿದ್ದರು. ಪತ್ತೆಹಚ್ಚಿದ ಮೊಬೈಲ್‌ಗಳನ್ನು ಸೋಮವಾರ ಪುನಃ ಆಯಾ ಮಾಲೀಕರಿಗೆ ಒಪ್ಪಿಸಿದರು. ಕಳೆದುಕೊಂಡಿದ್ದ ಮೊಬೈಲ್‌ಗಳು ಮತ್ತೆ ತಮ್ಮ ಕೈಸೇರುತ್ತಿದ್ದಂತೆಯೇ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದರು. ಇದೇ ವೇಳೆ ಪೊಲೀಸ್ ಸಿಬ್ಬಂದಿಗೆ ಮಾಲೀಕರು ಧನ್ಯವಾದ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+