ಮಂಗಳೂರು ಮಹಾನಗರ ಪಾಲಿಕೆಯಿಂದ 'ಸ್ವಚ್ಛತಾ' ಆಪ್
ಮಂಗಳೂರು, ಡಿಸೆಂಬರ್. 05 : ಮಂಗಳೂರಿನ ಜನರು ನೈರ್ಮಲ್ಯ ಸಮಸ್ಯೆಯ ಕುರಿತು ದೂರು ನೀಡುವುದಕ್ಕಾಗಿ ಮಂಗಳೂರು ಮಹಾನಗರ ಪಾಲಿಕೆ ಹೊಸ ಆಪ್ ಒಂದನ್ನು ಪರಿಚಯಿಸಲು ನಿರ್ಧರಿಸಿದೆ.
ಹೌದು ನಗರದ ಜನತೆ ನೈರ್ಮಲ್ಯದ ಕುರಿತು ಎದುರಿಸುತ್ತಿರುವ ಸಮಸ್ಯೆಯನ್ನು ''ಸ್ವಚ್ಛತಾ'' ಎನ್ನುವ ಮೊಬೈಲ್ ಆಪ್ ನ ಮೂಲಕ ಮಂಗಳೂರು ಮಹಾನಗರ ಪಾಲಿಕೆಗೆ ಖುದ್ದಾಗಿ ತಿಳಿಸುವ ಎಲ್ಲ ಅವಕಾಶ ಮಾಡಿಕೊಡಲಾಗುತ್ತಿದೆ.
ಈಗಾಗಲೇ ಸತತ ಐದು ದಿನಗಳಿಂದ ಈ ಸ್ವಚ್ಛತಾ ಅಪ್ ಅನ್ನು ಪರೀಕ್ಷಿಸಲಾಗುತ್ತಿದೆ. ಪರೀಕ್ಷೆಯ ನಂತರ ಮುಂದಿನ ವಾರದೊಳಗೆ ಈ ಆಪ್ ಅನ್ನು ಪರಿಚಯಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ನೈರ್ಮಲ್ಯತೆಗೆ ಸಂಬಂಧಿಸಿದಂತೆ ಜನರ ಯಾವುದೇ ಸಮಸ್ಯೆ ಇದ್ದಲ್ಲಿ ಈ ಸ್ವಚ್ಛತಾ ಆಪ್ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಹಕಾರಿಗಲಿದೆ. ಮೂಲತಃ ಈ ಆಪ್ ಅನ್ನು ಮೊಬೈಲ್‌ನಲ್ಲಿನ ಪ್ಲೇ ಸ್ಟೋರ್‌ನಿಂದ ಡೌನ್ಲೋಡ್ ಮಾಡಿಕೊಂಡು , ಪ್ರೊಫೈಲ್ ಕ್ರಿಯೇಟ್ ಮಾಡಬೇಕು. ಬಳಿಕ ಇರುವ ಸಮಸ್ಯೆಯ ಕುರಿತು ದೂರುಗಳನ್ನು ಹೇಳಬಹುದು.
ಈ ಆಪ್ ನಾಗರಿಕರಿಗೆ ತಮ್ಮ ನಗರದ ಸಮಸ್ಯೆಯನ್ನು ಹೇಳಿಕೊಳ್ಳಲು ಇರುವ ಒಂದು ಉತ್ತಮ ಅವಕಾಶ. ಈಗಾಗಲೇ ಎಲ್ಲೆಲ್ಲೂ ಸ್ವಚ್ಛತಾ ಅಭಿಯಾನಕ್ಕಾಗಿ ಹಲಾವಾರು ಮಂದಿ ಕೈಜೋಡಿಸಿ ನಗರದ ಸ್ವಚ್ಛತೆ ಕಾಪಾಡುವಲ್ಲಿ ನೆರವಾಗಿದ್ದಾರೆ. ಇದೇ ನಿಟ್ಟಿನಲ್ಲಿ ಈ ಆಪ್ ನಿಂದ ನಗರದ ಸ್ವಚ್ಛತೆಯನ್ನು ಕಾಪಾಡಬಹುದು.
ಸ್ವಚ್ಛತಾ ಆಪ್‌ನ ವಿಶೇಷತೆ:
ಉದಾಹರಣೆಗೆ , ನಗರದಲ್ಲಿ ಎಲ್ಲಿಯಾದರೂ ಕಸದ ರಾಶಿ ಕಂಡಲ್ಲಿ ಅದನ್ನು ಈ 'ಸ್ವಚ್ಚತಾ' ಆಪ್‌ನ ಬಳಕೆದಾರರು ಪೋಟೋ ತೆಗೆದು ಕಳುಹಿಸಬೇಕು. ಈ ಸಂದರ್ಭ ಸ್ವಚ್ಛತಾ ಆಪ್ ದೂರಿನ ಸಂಖ್ಯೆಯನ್ನು ಬಳಕೆದಾರರಿಗೆ ಕಳುಹಿಸಲಾಗುವುದು.ಇದಲ್ಲದೆ, ನಗರದ ಆರೋಗ್ಯ ಇಲಾಖೆಗೆ ಈ ಸಮಸ್ಯೆಯನ್ನು 12 ಗಂಟೆ ಒಳಗಾಗಿ ಪರಿಹಾರ ಮಾಡುತ್ತದೆ.












Click it and Unblock the Notifications