ಮಂಗಳೂರು: ಕ್ಯಾನ್ಸರ್ ರೋಗಿಗಾಗಿ ಮತ್ತೆ ಕೂದಲು ದಾನ ಮಾಡಿದ ದೇಶದ ಅತೀ ಕಿರಿಯ ಕೇಶದಾನಿ
ಮಂಗಳೂರು, ಜನವರಿ 02: ತನ್ನ ಎರಡೂವರೆ ವರ್ಷದಲ್ಲೇ ಕೂದಲು ದಾನ ಮಾಡಿದ್ದ ಮಂಗಳೂರಿನ ಅರ್ನವ್ ಪ್ರಭು ಈ ಮತ್ತೆ ಕೇಶದಾನ ಮಾಡಿದ್ದಾನೆ. ಒಂಭತ್ತರ ಹರೆಯದ ಅರ್ನವ್ ತನ್ನ 24 ಇಂಚಿನ ಕೇಶವನ್ನು ಕ್ಯಾನ್ಸರ್ ರೋಗಿಗೆ ದಾನವಾಗಿ ನೀಡಿದ್ದಾನೆ. ಅರ್ನವ್ ಹೆತ್ತವರಾದ ಶ್ರೀಲತಾ ದಂಪತಿ ಮಗನ ಕೂದಲನ್ನು ಈ ಬಾರಿಯೂ ದಾನ ಮಾಡಲು ನಿರ್ಧರಿಸಿದ್ದು, ಅದರಂತೆಯೇ ಕೂದಲು ದಾನ ಮಾಡಿದ್ದಾರೆ.
ಹೆಣ್ಣುಮಕ್ಕಳ ರೀತಿಯೇ ಕೇಶರಾಶಿಯನ್ನು ಹೊಂದಿದ್ದ ಮಂಗಳೂರಿನ ಅರ್ನವ್ ತನ್ನ ಒಂಭತ್ತನೆಯ ಹರೆಯದಲ್ಲಿ ಎರಡನೇ ಭಾರಿ ಕೇಶ ದಾನ ಮಾಡಿದ್ದ, ಮಂಗಳೂರಿನ ಅಳಕೆ ಪ್ರದೇಶದ ಶ್ರೀಲತಾ ದಂಪತಿಯ ಜೇಷ್ಠ ಪುತ್ರ ಅರ್ನವ್ ಪ್ರಭುವಿನಿಂದ ಈ ಮೊದಲು ಎರಡು ವರ್ಷ ಎಂಟನೇ ತಿಂಗಳು ಇರುವಾಗ ಕೇಶದಾನ ಮಾಡಲಾಗಿತ್ತು.

ಇದೀಗ ಆರ್ನರ್ವ್‌ಗೆ ಒಂಭತ್ತು ವರ್ಷ ತುಂಬಿದ್ದು ಮತ್ತೊಮ್ಮೆ ಕೇಶದಾನ ಮಾಡಿದ್ದಾರೆ. ಆರ್ನವ್ ಕೂದಲು ಯಾವುದೇ ರಾಸಯಾನಿಕ ದ್ರವ್ಯಗಳನ್ನು ಬಳಸದೇ ಆರೋಗ್ಯವಂತ ಕೂದಲಾಗಿದ್ದು, ಈ ಬಾರಿ 24 ಇಂಚಿನ ಕೇಶವನ್ನು ಪೋಷಕರು ದಾನ ಮಾಡಿದ್ದಾರೆ.
ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಮಗುವಿನ ಉಪನಯನ ಸಂಧರ್ಭದಲ್ಲಿ ಮೊದಲ ಕೂದಲನ್ನು ಯಾಗಕ್ಕೆ ಅರ್ಪಣೆ ಮಾಡಬೇಕೆಂಬ ಪದ್ಧತಿಯಿದೆ. ಅರ್ನವ್ ಎರಡೂವರೆ ವರ್ಷ ಇರುವಾಗ ಕೂದಲನ್ನು ಅರ್ಪಣೆ ಮಾಡಬೇಕೆಂದು ಹೆತ್ತವರು ಭಾವಿಸಿದರೂ ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಬಳಿಕ ಸಮಯ ಕೂಡಿ ಬಂದಿರಲಿಲ್ಲ.

ಹೀಗಾಗಿ ಒಂಭತ್ತು ವರ್ಷದ ತನಕ ಅರ್ನರ್ವ್ನ ಕೂದಲನ್ನು ಜೋಪಾನದಿಂದ ಕಾಪಾಡುತ್ತಾ ಬಂದಿದ್ದರು. ಈ ಬಾರಿ ಪದ್ಧತಿ ಪ್ರಕಾರ ಕೇಶ ಅರ್ಪಣೆ ಮಾಡುವ ಸಂಧರ್ಭದಲ್ಲಿ ಹಿರಿಯರ ಮನವೊಲಿಸಿ ಸ್ವಲ್ಪ ಕೂದಲನ್ನು ಮಾತ್ರ ಅಗ್ನಿಗೆ ಸಮರ್ಪಿಸಿ ಉಳಿದ ಕೂದಲನ್ನು ದಾನ ಮಾಡಲಾಗಿದೆ. ಯುವ ಶಕ್ತಿ ಕಡೆಶಿವಾಲಯದ ಸೇವಾಪಥ ಸಂಸ್ಥೆಯ ಮೂಲಕ ಅರ್ನರ್ವ್ ಕೇಶದಾನ ಮಾಡಲಾಗಿದೆ.
"ಅರ್ನವ್ ಕೂದಲು ಬಹಳ ಸಾಫ್ಟ್ ಆಗಿತ್ತು. ಯಾವುದೇ ಶ್ಯಾಂಪೂ, ಹೇರ್ ಕಂಡೀಷನರ್ ಬಳಸಿಲ್ಲ. ಮೊದಲ ಬಾರಿ ಕೂದಲು ದಾನ ಮಾಡುವಾಗ ಅರ್ನವ್ ಕೂದಲು 15.5 ಇಂಚು ಕೂದಲಿತ್ತು. ಈ ಬಾರಿ ನಾಲ್ಕು ವರ್ಷಗಳ ಬಳಿಕ ಕೇಶದಾನ ಮಾಡಿದ್ದು, ಈ ಬಾರಿ ಕೂದಲು 24 ಇಂಚು ಇತ್ತು. ಮಗನ ಕೇಶದಾನಕ್ಕಾಗಿ ಕೂದಲು ಉದ್ದ ಬಿಡುಲು ಶಾಲೆಯ ಮುಖ್ಯೋಪಾಧ್ಯಾಯಿನಿಯರು ಸಹಕಾರ ನೀಡಿದ್ದರು. ಶಿಕ್ಷಕರೂ ಕೂಡ ಶಾಲೆಯಲ್ಲಿ ಜಡೆ ಬಿಚ್ಚಿದ ಸಂದರ್ಭದಲ್ಲಿ ಕಟ್ಟುತ್ತಿದ್ದರು. ಕ್ಯಾನ್ಸರ್ ರೋಗಿಗಳನ್ನು ಕಣ್ಣಾರೆ ಕಂಡು ಅವರ ಮನಸ್ಸಿನ ದುಃಖವನ್ನು ಅರಿತು ಕೇಶದಾನ ಮಾಡಲು ಮುಂದಾಗಿದ್ದೆವು" ಎಂದು ಅರ್ನವ್‌ನ ತಾಯಿ ಶ್ರೀಲತಾ ಹೇಳಿದ್ದಾರೆ.
ಉದ್ದ ಕೂದಲಿನ ಮಗನಿಗೆ ಶಾರಾದೆಯ ವೇಶ, ಹೆಣ್ಣು ಮಕ್ಕಳ ಅಲಂಕಾರ ಮಾಡಿ ಹೆತ್ತವರು ಸಂಭ್ರಮಿಸಿದ್ದಾರೆ. ಅರ್ನವ್ ಕೂದಲು ಹೆಣ್ಣುಮಕ್ಕಳ ಕೂದಲಿಗಿಂತಲೂ ಅಂದವಾಗಿ ಬೆಳೆದಿತ್ತು. ಇದೀಗ ಮಗನ ಉದ್ದನೇಯ ಕೂದಲು ಕ್ಯಾನ್ಸರ್ ರೋಗಿಯ ಸಹಾಯವಾಗೋದಕ್ಕೆ ಹೆತ್ತವರು ಹೆಮ್ಮೆ ಪಟ್ಟಿದ್ದಾರೆ. ದೇಶದ ಅತೀ ಕಿರಿಯ ಕೇಶದಾನಿ ಎಂಬ ಪ್ರಸಿದ್ಧಿಗೆ ಅರ್ನವ್ ಪಾತ್ರನಾಗಿದ್ದಾನೆ.












Click it and Unblock the Notifications