Mangalore ವಿಮಾನ ನಿಲ್ದಾಣದ ಹೆಸರು Mangaluru ಆಗಿ ಬದಲಾವಣೆ
ಮಂಗಳೂರು, ನವೆಂಬರ್ 4: ಮಂಗಳೂರು ವಿಮಾನ ನಿಲ್ದಾಣದ ಹೆಸರನ್ನು ಇಂಗ್ಲೀಷ್‌ನಲ್ಲಿ Mangalore ಬದಲಾಗಿ Mangaluru ಎಂದು ಬದಲಾಯಿಸಿರುವುದಾಗಿ ವಿಮಾನ ನಿಲ್ದಾಣ ಪ್ರಾಧಿಕಾರ ಅದೇಶಿಸಿದೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎಂದು ಈಗಾಗಲೇ ನಿಲ್ದಾಣದಲ್ಲಿ ಹಾಗೂ ಸ್ವಾಗತ ಕಮಾನುಗಳಲ್ಲಿ Mangaluru ಎಂದೇ ಬದಲಾಯಿಸಲಾಗಿದೆ. ಆದರೆ ಪ್ರಾಧಿಕಾರದ ದಾಖಲೆಗಳಲ್ಲಿರುವ ಹೆಸರನ್ನೂ ಬದಲಾವಣೆ ಮಾಡಲಾಗಿದ್ದು, ಡಿಸೆಂಬರ್ 1ರಿಂದ ಅಧಿಕೃತವಾಗಿ ಜಾರಿಯಾಗಲಿದೆ.
ಈಗಾಗಲೇ ಮಂಗಳೂರು ನಗರದ ಹೆಸರನ್ನು ಮಂಗಳೂರು ಎಂದು ಬದಲಾಯಿಸಲಾಗಿದೆ. ಹಾಗಾಗಿ ವಿಮಾನ ನಿಲ್ದಾಣದ ಮಂಗಳೂರು ವಿಮಾನ ನಿಲ್ದಾಣದ ಹೆಸರಲ್ಲಿ Mangalore ಬದಲಾಗಿ Mangaluru ನಗರದಲ್ಲಿ ಎಲ್ಲಾ ಕಡೆ ಮಂಗಳೂರು ಪದ ಬಳಕೆ ಜಾರಿಯಲ್ಲಿದೆ. ದೇಶ-ವಿದೇಶದ ಪಾಲುದಾರರ ನಡುವಿನ ವ್ಯವಹಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಸರನ್ನು ಬದಲಾವಣೆ ಮಾಡಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಹೇಳಿಕೆ ಬಿಡುಗಡೆ ಮಾಡಿದೆ.

2020ರಲ್ಲಿ ಮಂಗಳೂರು ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅದಾನಿ ಗ್ರೂಫ್ ವಹಿಸಿಕೊಂಡಿದೆ. ವಿಮಾನ ಹಾರಾಟ ಹೊರತುಪಡಿಸಿ ಬೇರೆ ಎಲ್ಲಾ ನಿರ್ವಹಣೆಯ ಸಂಪೂರ್ಣ ಹೊಣೆಗಾರಿಕೆಯನ್ನು ಅದಾನಿ ಗ್ರೂಪ್ ನಿರ್ವಹಿಸುತ್ತಿದೆ.
50 ವರ್ಷಗಳವರೆಗೆ ಗುತ್ತಿಗೆ; ಮುಂದಿನ 50 ವರ್ಷಗಳ ಗುತ್ತಿಗೆಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ವಹಣೆಯ ಜವಾಬ್ದಾರಿಯನ್ನು ಅದಾನಿ ಸಂಸ್ಥೆಗೆ ನೀಡಲಾಗಿದೆ. ವಿಮಾನ ನಿಲ್ದಾಣದ ಹಣ ವಿನಿಯೋಗ, ಟರ್ಮಿನಲ್‌ನಲ್ಲಿ ವಾಣಿಜ್ಯ ಚಟುವಟಿಕೆ ಸೇರಿದಂತೆ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಅದಾನಿ ಸಂಸ್ಥೆ ನೋಡಿಕೊಳ್ಳುತ್ತಿದೆ.
ಮಂಗಳೂರು ವಿಮಾನ ನಿಲ್ದಾಣಕ್ಕೆ ಬಸ್ ಚಾಲನೆ; ಮಂಗಳೂರು ಅಂತಾರಾಷ್ಟ್ರೀಯ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಾರಿಗೆಗೆ ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ನಗರದ ಬಿಜೈನಲ್ಲಿರುವ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ಕರಾವಳಿ ಕನ್ನಡ ತೇರು ಹೆಸರಿನ ಮೂರು ವೋಲ್ವಾ ಬಸ್‌ಗಳಿಗೆ ಚಾಲನೆ ನೀಡಲಾಗಿದೆ. 2011ರಲ್ಲೇ ವಿಮಾನ ನಿಲ್ದಾಣಕ್ಕೆ ಬಸ್ ಸೇವೆ ಆರಂಭಿಸಲಾಗುತ್ತಾದರೂ, ಪ್ರಯಾಣಿಕರ ಕೊರತೆಯಿಂದ ಸ್ಥಗಿತಗೊಳಿಸಲಾಗಿತ್ತು.
ಬಸ್ ದರ ಮತ್ತು ಸಮಯ;ಮಂಗಳೂರು ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣಕ್ಕೆ ಬಸ್ ದರ 100 ರೂ. ಆಗಿದ್ದು, ಬಸ್ ರೈಲು ನಿಲ್ದಾಣದಿಂದ ಬೆಳಗ್ಗೆ 6.30, 8.45, 11.10, ಮಧ್ಯಾಹ್ನ 3, ಸಂಜೆ 5.15 ಮತ್ತು ಸಂಜೆ 7.30 ಕ್ಕೆ ತನ್ನ ಸಂಚಾರ ಪ್ರಾರಂಭಿಸುತ್ತದೆ.
ಹಿಂದಿರುಗುವ ಪ್ರಯಾಣ ಸಮಯದಲ್ಲಿ ವಿಮಾನ ನಿಲ್ದಾಣದಿಂದ ಬೆಳಿಗ್ಗೆ 7.40, 10, 12.20, 4.05, ಸಂಜೆ 6.25 ಮತ್ತು ರಾತ್ರಿ 8.45 ಕ್ಕೆ ಪ್ರಾರಂಭವಾಗಲಿದೆ. ಮಣಿಪಾಲದಿಂದ ವಿಮಾನ ನಿಲ್ದಾಣಕ್ಕೆ ಬಸ್ ದರ 300 ರೂ. ಮಣಿಪಾಲದಿಂದ ಬೆಳಗ್ಗೆ 7.15, 8.45, ಸಂಜೆ 5.15ಕ್ಕೆ ಬಸ್ ಪ್ರಯಾಣ ಆರಂಭಿಸಲಿದೆ. ವಿಮಾನ ನಿಲ್ದಾಣದಿಂದ ಮಣಿಪಾಲ್‌ಗೆ ಬಸ್ ಬೆಳಿಗ್ಗೆ 10.45, ಮಧ್ಯಾಹ್ನ 12.30 ಮತ್ತು ರಾತ್ರಿ 9.15 ಕ್ಕೆ ತನ್ನ ಪ್ರಯಾಣಿಸಲಿದೆ.












Click it and Unblock the Notifications