• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಡ್ಯ ಜೆಡಿಎಸ್‌ಗೆ, ಅಭ್ಯರ್ಥಿ ಯಾರೆಂದು ಗೊತ್ತಿಲ್ಲ : ಸಿದ್ದರಾಮಯ್ಯ

|

ಮಂಗಳೂರು, ಮಾರ್ಚ್ 10 : 'ಮಂಡ್ಯದಲ್ಲಿ ಹಾಲಿ ಸಂಸದರಿಗೆ ಬಿಡುವ‌ ಬಗ್ಗೆ ಮಾತುಕತೆಯಾಗಿದೆ . ಆದ್ದರಿಂದ, ಮಂಡ್ಯ ಜೆಡಿಎಸ್ ಪಾಲಾಗುತ್ತೆ' ಎಂದು ಮಾಜಿ ಮುಖ್ಯಮಂತ್ರಿ ಸಿದ್ದಾರಾಮಯ್ಯ ಸ್ಪಷ್ಟ ಪಡಿಸಿದರು.

ಭಾನುವಾರ ಮಂಗಳೂರಿನಲ್ಲಿ ಮಾತನಾಡಿದ ಅವರು, 'ಲೋಕಸಭಾ ಚುನಾವಣೆ ಇವತ್ತೇ ಘೋಷಣೆ ಆಗುವ ಸಾಧ್ಯತೆ ಇದೆ. ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸ್ಪರ್ಧೆಯ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, 'ಮಂಡ್ಯದಲ್ಲಿ ಹಾಲಿ ಸಂಸದರಿಗೆ ಬಿಡುವ‌ ಬಗ್ಗೆ ಮಾತುಕತೆಯಾಗಿದೆ. ಆದ್ದರಿಂದ ಜೆಡಿಎಸ್ ಪಾಲಾಗುತ್ತೆ' ಎಂದು ಹೇಳಿದರು.

ಸುಮಲತಾ ಬೆನ್ನಿಗೆ ಕಾಂಗ್ರೆಸ್ ಮುಖಂಡರು: ಮಂಡ್ಯಗೆ ಡಿಕೆಶಿ ಎಂಟ್ರಿ

'ಆದರೆ ಜೆಡಿಎಸ್‌ ಪಕ್ಷದಲ್ಲಿ ಯಾರು ಕ್ಯಾಂಡಿಡೇಟ್ ಆಗುತ್ತಾರೆ ಎಂದು ಗೊತ್ತಿಲ್ಲ. ಲೋಕಸಭಾ ಚುನಾವಣೆಯನ್ನು ಒಟ್ಟಾಗಿ ಎದುರಿಸುತ್ತೇವೆ' ಎಂದು ಸಿದ್ದರಾಮಯ್ಯ ತಿಳಿಸಿದರು.

ಡಿ.ಸಿ.ತಮ್ಮಣ್ಣ ಹೇಳಿಕೆಗೆ ತಿರುಗೇಟು ಕೊಟ್ಟ ಸುಮಲತಾ

ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ಸೇರ್ಪಡೆ ವದಂತಿ ವಿಚಾರ ವಾಗಿ ಮಾತನಾಡಿದ ಅವರು, 'ಎಷ್ಟು ಸಮಯದಿಂದ ಈ ವದಂತಿ ಇದೆ ? ಆರು ತಿಂಗಳಿಂದ ಈ ಸುದ್ದಿ ಇದೆ, ಸುದ್ದಿಯಾಗಿಯೇ ಇದೆ. ಅದು ನಿಮ್ಮಲ್ಲೇ ಮಾಧ್ಯಮದವರಲೇ ಇದೆ, ನೀವೇ ಇಟ್ಕೊಳ್ಳಿ' ಎಂದರು.

ಹುತಾತ್ಮ ಯೋಧ ಗುರು ಪತ್ನಿ ಲೋಕಸಭೆ ಚುನಾವಣೆ ಕಣಕ್ಕೆ?

ಉಡುಪಿಯಲ್ಲಿ ಕಾಂಗ್ರೆಸ್ ಪರಿವರ್ತನಾ ಯಾತ್ರೆ ನಿಮಿತ್ತ ಆಗಮಿಸಿದ ಸಿದ್ದರಾಮಯ್ಯ ಮಂಗಳೂರು ವಿಮಾನ ನಿಲ್ದಾಣದಿಂದ ನೇರವಾಗಿ ಉಡುಪಿಗೆ ತೆರಳಿದರು.

English summary
The coordination committee chairman Siddaramaiah said that Mandya is JD(S) seat we don't know who will contest for 2019 Lok Sabha elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X