ಮಂಗಳೂರಿನಲ್ಲಿ ಹಾಡು ಹಗಲೇ 27 ಸಾವಿರ ದರೋಡೆ
ಮಂಗಳೂರು, ಸೆಪ್ಟೆಂಬರ್, 14 : ಆಟೋದಲ್ಲಿದ್ದ ಪ್ರಯಾಣಿಕರ ಬ್ಯಾಗ್ ಕಸಿದು ಪರಾರಿಯಾದ ಘಟನೆ ಸೋಮವಾರ ಬೆಳಗ್ಗೆ ಬೆಂದೂರ್‍ವೆಲ್‍ನ ಎಸ್‍ಸಿಎಸ್ ಆಸ್ಪತ್ರೆ ಬಳಿ ನಡೆದಿದೆ. ಬ್ಯಾಗ್‌ನಲ್ಲಿ 27 ಸಾವಿರ ಹಣ ಮತ್ತ ಹಲವು ಚೆಕ್‌ಗಳಿದ್ದವು ಎಂದು ಬ್ಯಾಗ್ ಕಳೆದುಕೊಂಡವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳೂರಿನ ಸ್ಪೇಸ್ ಬಿಲ್ಡರ್ಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಣ್ಣ ಎಂಬುವವರು ಹಣ ಕಳೆದುಕೊಂಡವರು. ಇಂದು ಬೆಳಗ್ಗೆ 10.45ರ ಸುಮಾರಿಗೆ ಬೈಕ್‍ನಲ್ಲಿ ಬಂದ ದುಷ್ಕರ್ಮಿಗಳು ಹಣವಿದ್ದ ಬ್ಯಾಗ್ ಕಸಿದುಕೊಂಡು ಪರಾರಿಯಾಗಿದ್ದಾರೆ. [ಬೆಂಗಳೂರು : 2 ದಿನದಲ್ಲಿ 10 ಕಡೆ ಸರಗಳ್ಳರ ಕೈ ಚಳಕ]

ಬೆಂದೂರ್‍ವೆಲ್ ಸಿಗ್ನಲ್ ಬಳಿ ಆಟೋ ನಿಂತಾಗ ಬೈಕ್‍ನಲ್ಲಿ ಬಂದ ದುಷ್ಕರ್ಮಿ ಶಿವಣ್ಣ ಅವರ ಕೈಯಿಂದ ಬ್ಯಾಗ್ ಕಸಿದಿದ್ದಾನೆ. ಈ ವೇಳೆ ಆಟೋ ಚಾಲಕ ಚಂದ್ರಶೇಖರ್ ಅವರು ಕಳ್ಳನನ್ನು ಹಿಡಿಯಲು ಪ್ರಯತ್ನಿಸಿದ್ದಾರೆ. ಆಗ ಬೈಕ್‌ನಲ್ಲಿದ್ದ ಮತ್ತೊಬ್ಬ ಚಾಕು ತೋರಿಸಿ, ಆಟೋ ಚಾಲಕನಿಗೆ ಬೆದರಿಕೆ ಹಾಕಿದ್ದಾನೆ. [ನೀರು ಕೇಳಿದ್ರು, ಸರ್ಕಾರಿ ಉದ್ಯೋಗಿ ಮನೆ ದೋಚಿದ್ರು]
ಕಳ್ಳನ ಹೆಲ್ಮೆಟ್ ಹಿಡಿದು ಆಟೋ ಚಾಲಕ ಹೊಡೆಯಲು ಮುಂದಾದ ವೇಳೆ ಕಳ್ಳರು ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಇದು ಪೂರ್ವನಿಯೋಜಿತ ಕೃತ್ಯ ಎಂದು ಪೊಲೀಸರು ಹೇಳಿದ್ದಾರೆ. ಕಳ್ಳತನಕ್ಕೆ ಬಳಸಿದ ಬೈಕ್‌ಅನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದು, ತನಿಖೆ ಮುಂದುವರೆಸಿದ್ದಾರೆ.













Click it and Unblock the Notifications