ನಳಿನ್ ಕುಮಾರ್ ಹೆಸರಲ್ಲಿ ನಾಲ್ಕು ಕೇಸ್ ಇದೆಯೇ ವಿನಾ ಒಂದು ಕಾರಿಲ್ಲ!

ಮಂಗಳೂರು, ಮಾರ್ಚ್ 29: ನಾಮಪತ್ರ ಸಲ್ಲಿಕೆ ಸಂದರ್ಭದಲ್ಲೇ ಇಂಥ ಅಚ್ಚರಿ ಸಂಗತಿಗಳು ಗೊತ್ತಾಗುತ್ತವೆ. ಇದೀಗ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ತಮ್ಮ ಆಸ್ತಿ ವಿವರವನ್ನೂ ನೀಡಿದ್ದಾರೆ. ಆ ಪ್ರಕಾರ ನಳಿನ್ ಕುಮಾರ್ ಅವರಿಗೆ 1.45 ಕೋಟಿ ರುಪಾಯಿ ಮೌಲ್ಯದ ಚರಾಸ್ತಿ, ಸ್ಥಿರಾಸ್ತಿ ಇದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಇಷ್ಟಾದರೂ ನಳಿನ್ ಕುಮಾರ್ ಕಟೀಲ್ ಅವರ ಬಳಿ ಸ್ವಂತ ವಾಹನ ಇಲ್ಲ. ಗಮನಿಸಿ ನೋಡಿ, ಇಂಥ ಸಾಕಷ್ಟು ಉದಾಹರಣೆ ನೀವು ಓದಿರುತ್ತೀರಾ. ಪ್ರಯಾಣ ಭತ್ಯೆ, ಸವಲತ್ತು ಇತ್ಯಾದಿ ವಿಚಾರಕ್ಕೆ ಹಾಗೂ ಈ ಕಾರು ಇರುವುದಕ್ಕೂ ನೇರ ಸಂಬಂಧ ಇದೆಯಾ ಎಂದೊಮ್ಮೆ ವಿಚಾರಿಸಬೇಕು.

ನಳಿನ್ ಕುಮಾರ್ ಕಟೀಲ್ 5 ವರ್ಷಗಳ ಹಿಂದೆ 1.06 ಕೋಟಿ ರುಪಾಯಿ ಮೌಲ್ಯದ ಆಸ್ತಿ ಹೊಂದಿದ್ದರು. ಈ 5 ವರ್ಷಗಳಲ್ಲಿ ಅವರ ಆಸ್ತಿ ಮೌಲ್ಯ 39 ಲಕ್ಷ ರುಪಾಯಿ ಹೆಚ್ಚಾಗಿದೆ. ನಳಿನ್ ಕುಮಾರ್ 60 ಸಾವಿರ ರೂಪಾಯಿ ನಗದು ಹಾಗೂ ವಿವಿಧ ಬ್ಯಾಂಕ್ ಗಳ ಉಳಿತಾಯ ಖಾತೆಯಲ್ಲಿ 4.94 ಲಕ್ಷ ರುಪಾಯಿ ಹೊಂದಿದ್ದಾರೆ.

ನಳಿನ್ ಪತ್ನಿ ಶ್ರೀದೇವಿ ಸಾಲದಲ್ಲಿ ಏರಿಕೆ

ನಳಿನ್ ಪತ್ನಿ ಶ್ರೀದೇವಿ ಸಾಲದಲ್ಲಿ ಏರಿಕೆ

ಅವರ ಪತ್ನಿ ಶ್ರೀದೇವಿ 22 ಸಾವಿರ ರೂಪಾಯಿ ನಗದು ಹಾಗೂ ಬ್ಯಾಂಕ್ ಗಳ ಉಳಿತಾಯ ಖಾತೆಯಲ್ಲಿ 35,000 ರುಪಾಯಿ ನಗದು ಹೊಂದಿದ್ದಾರೆ. ಇಬ್ಬರು ಪುತ್ರಿಯರ ಖಾತೆಯಲ್ಲಿ ತಲಾ 15,633 ರುಪಾಯಿ ಇದೆ. ಐದು ವರ್ಷಗಳ ಹಿಂದೆ ನಳಿನ್ ಪತ್ನಿ ಶ್ರೀದೇವಿ 13.93 ಲಕ್ಷ ರುಪಾಯಿ ಸಾಲ ಹೊಂದಿದ್ದರು. ಈಗ ಅದು 44.32 ಲಕ್ಷ ರುಪಾಯಿಗೆ ಏರಿಕೆಯಾಗಿದೆ.

ಕುಟುಂಬದವರಿಗೂ ಪಾಲಿರುವ 10 ಎಕರೆ ಜಾಗ

ಕುಟುಂಬದವರಿಗೂ ಪಾಲಿರುವ 10 ಎಕರೆ ಜಾಗ

ನಳಿನ್ ಕುಮಾರ್ ಪುತ್ರಿಯರ ಬಳಿ ತಲಾ 84 ಸಾವಿರ ರುಪಾಯಿ ಮೌಲ್ಯದ ಚಿನ್ನಾಭರಣ ಇವೆ. ನಳಿನ್ ಕುಮಾರ್ ಬಳಿ 50 ಸಾವಿರ ರೂಪಾಯಿ ಮೊತ್ತದ ವಿಮೆ, 28 ಸಾವಿರ ರುಪಾಯಿ ಮೌಲ್ಯದ 10 ಗ್ರಾಂ ಚಿನ್ನಾಭರಣ, 6.55 ಲಕ್ಷ ರುಪಾಯಿ ಮೌಲ್ಯದ ಚರಾಸ್ತಿ ಇದೆ. ಪುತ್ತೂರು ತಾಲೂಕಿನ ಪಾಲ್ತಾಡಿಯಲ್ಲಿ 10.15 ಎಕರೆ ಜಾಗ ಹೊಂದಿದ್ದು, ಇದರಲ್ಲಿ ಅವರ ಕುಟುಂಬದವರಿಗೂ ಪಾಲಿದೆ.

ಬೋಳೂರಿನಲ್ಲಿ 88 ಲಕ್ಷ ರುಪಾಯಿ ಮೌಲ್ಯದ ಫ್ಲ್ಯಾಟ್

ಬೋಳೂರಿನಲ್ಲಿ 88 ಲಕ್ಷ ರುಪಾಯಿ ಮೌಲ್ಯದ ಫ್ಲ್ಯಾಟ್

ಇದರ ಪ್ರಸ್ತುತ ಮಾರುಕಟ್ಟೆ ದರ 80.52 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಇದರಲ್ಲಿ ನಳಿನ್ ಅವರಿಗೆ 20 ಲಕ್ಷ ರುಪಾಯಿ ಮೌಲ್ಯದ ಆಸ್ತಿ ಇದೆ. ಪತ್ನಿ ಶ್ರೀದೇವಿ ಬೋಳೂರಿನಲ್ಲಿ 88 ಲಕ್ಷ ರುಪಾಯಿ ಮೌಲ್ಯದ ಫ್ಲ್ಯಾಟ್ ಹೊಂದಿದ್ದಾರೆ. ನಳಿನ್ ಕುಮಾರ್ ಹೆಸರಿನಲ್ಲಿ ಯಾವುದೇ ವಾಹನಗಳಿಲ್ಲ.

ನಳಿನ್ ವಿರುದ್ಧ ನಾಲ್ಕು ಪ್ರಕರಣಗಳಿವೆ

ನಳಿನ್ ವಿರುದ್ಧ ನಾಲ್ಕು ಪ್ರಕರಣಗಳಿವೆ

ಆದರೆ ಅವರ ಪತ್ನಿಯ ಬಳಿ 60 ಸಾವಿರ ರುಪಾಯಿ ಬೆಲೆಯ ಮಾರುತಿ ಆಲ್ಟೋ ಕಾರು ಇದೆ. 27.16 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣ, 9 ಸಾವಿರ ರುಪಾಯಿ ಮೌಲ್ಯದ ಬೆಳ್ಳಿ, 1 ಲಕ್ಷ ರುಪಾಯಿ ಮೌಲ್ಯದ ಪೀಠೋಪಕರಣಗಳು, 1 ಲಕ್ಷ ರುಪಾಯಿ ಮೌಲ್ಯದ ಎಲೆಕ್ಟ್ರಾನಿಕ್ ವಸ್ತುಗಳು ಹಾಗೂ 30.42 ಲಕ್ಷ ರುಪಾಯಿ ಮೌಲ್ಯದ ಚರಾಸ್ತಿಯನ್ನು ಹೊಂದಿದ್ದಾರೆ. ಅಲ್ಲದೇ ನಳಿನ್ ಕುಮಾರ್ ಕಟೀಲ್ ವಿರುದ್ಧ ಪ್ರಚೋದನಾಕಾರಿ ಭಾಷಣ, ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳು ದಾಖಲಾಗಿವೆ.‌

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+