ಮಂಗಳೂರು : ಕಾಡುಹಂದಿ ಉರುಳಿನಲ್ಲಿ ಸಿಕ್ಕಿಬಿದ್ದ ಚಿರತೆ
ಮಂಗಳೂರು, ಫೆ. 27 : ಕಿನ್ನಿಗೋಳಿ ಸಮೀಪದ ಅಳಿಂಜೆಯಲ್ಲಿ ಕಾಡು ಹಂದಿಯನ್ನು ಹಿಡಿಯಲು ಹಾಕಿದ್ದ ಉರುಳಿಗೆ ಚಿರತೆಯೊಂದು ಸಿಕ್ಕಿಬಿದ್ದಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಧಾವಿಸಿದ್ದು, ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಅಳಿಂಜೆಯಲ್ಲಿ ಚಿರತೆ ಸಿಕ್ಕಿಹಾಕಿಕೊಂಡಿದ್ದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚಿರತೆಯನ್ನು ರಕ್ಷಿಸಿ, ಸೆರೆ ಹಿಡಿಯಲು ಅಧಿಕಾರಿಗಳು ನಿರ್ಧರಿಸಿದ್ದಾರೆ. [ಮಂಗಳೂರು : ಚಿರತೆ ಭೀತಿಯಲ್ಲೇ ಗ್ರಾಮಸ್ಥರ ಬದುಕು]

ಸ್ಥಳೀಯ ಗ್ರಾಮಸ್ಥರು ಕಾಡುಹಂದಿಯನ್ನು ಹಿಡಿಯಲು ಹಾಕಿದ್ದ ಉರುಳಿಗೆ ಗುರುವಾರ ರಾತ್ರಿ ಚಿರತೆ ಸಿಕ್ಕಿಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಅರವಳಿಕೆ ತಜ್ಞರನ್ನು ಕರೆಸಿ ನಂತರ ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆಯನ್ನು ಆರಂಭಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ.
ಪಿಲಿಕೊಳದ ಅರಿವಳಿಕೆ ತಜ್ಜರು ಮತ್ತು ವೈದ್ಯರೊಂದಿಗೆ ಮೂಡಬಿದರೆ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಚಿರತೆಗೆ ಅರಿವಳಿಕೆ ಮದ್ದು ನೀಡಿ ಅದನ್ನು ಸುರಕ್ಷಿತವಾಗಿ ಹಿಡಿದು ಬೋನಿಗೆ ಹಾಕಿದರು.

ಸುಮರು 6 ಅಡಿ ಉದ್ದ ಮತ್ತು 3 ಅಡಿ ಎತ್ತರದ ಗಂಡು ಚಿರತೆ ಇದಾಗಿದ್ದು ಪಿಲಿಕೊಳಕ್ಕೆ ರವಾನಿಸಲಾಗಿದೆ. ಕಾರ್ಯಾಚರಣೆಯಲ್ಲಿ ಪಿಲಿಕುಳದ ಡಾ.ದಿಲೀಪ್ ಡಾ.ವಿಕ್ರಮ್ ಮತ್ತು ಅರಣ್ಯ ಇಲಾಖೆಯ ಶಂಕರ್, ರಮೇಶ್ ನಾಯಕ್ ಐಯಣ್ಣ, ನಾರಾಯಣ್, ರಂಜನ್ ಮುಂತಾದವರು ಪಾಲ್ಗೊಂಡಿದ್ದರು












Click it and Unblock the Notifications