ಪಡೀಲ್ ಬಳಿ ರೈಲು ಹಳಿಯ ಮೇಲೆ ಕುಸಿದ ಗುಡ್ಡ ಹಲವು ರೈಲು ಸಂಚಾರ ರದ್ದು
ಮಂಗಳೂರು ಆಗಸ್ಟ್ 23: ಮಂಗಳೂರು- ಮುಂಬೈ ಮಧ್ಯೆ ಸಂಪರ್ಕ ಕಲ್ಪಿಸುವ ಕೊಂಕಣ ರೈಲು ಮಾರ್ಗದಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ಮಂಗಳೂರು ಹೊರವಲಯದ ಪಡೀಲ್ - ಕುಲಶೇಖರ ನಡುವೆ ರೈಲು ಹಳಿಯ ಮೇಲೆ ಸುರಿಯುತ್ತಿರುವ ಭಾರೀ ಮಳೆಗೆ ಗುಡ್ಡ ಕುಸಿದ ಪರಿಣಾಮ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸುವ ಹಲವು ರೈಲುಗಳನ್ನು ರದ್ದು ಗೊಳಿಸಲಾಗಿದೆ.
ಎರಡು ದಿನಗಳಿಂದ ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಪಡೀಲ್ - ಕುಲಶೇಖರ ನಡುವೆ ಗುಡ್ಡ ಕುಸಿದು ಹಳಿಯ ಮೇಲೆ ಬಿದ್ದಿದೆ. ಹಳಿಯ ಮೇಲೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಯಿತಾದರೂ ಮಣ್ಣು ನಿರಂತರವಾಗಿ ಕುಸಿದು ಬೀಳುತ್ತಿರುವ ಕಾರಣ ಮಂಗಳೂರಿನಿಂದ ಗೋವಾ-ಮುಂಬೈ ಮಧ್ಯೆ ಸಂಚರಿಸುವ ರೈಲುಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.

ಜೆಸಿಬಿ ಯಂತ್ರ ಬಳಸಿ, ರೈಲು ಹಳಿಯ ಮೇಲೆ ಬಿದ್ದಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಶನಿವಾರ ಮುಂಜಾನೆವರೆಗೆ ಮಣ್ಣು ತೆರವುಗೊಳಿಸುವ ಕಾರ್ಯ ಪೂರ್ಣಗೊಳ್ಳಲಿದ್ದು, ರೈಲು ಸಂಚಾರ ಸುಗಮಗೊಳ್ಳಲಿದೆ ಎಂದು ಹೇಳಲಾಗಿದೆ.












Click it and Unblock the Notifications