ಕಸ್ತೂರಿ ರಂಗನ್ ವರದಿ; ಮಂಗಳೂರಿನ ಈ ಹಳ್ಳಿಗಳಿಗೆ ಡೇಂಜರ್!
ಬೆಂಗಳೂರು, ಜುಲೈ19: ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸುವ ಕೇಂದ್ರ ಪರಿಸರ ಇಲಾಖೆಯ ಐದನೇ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಗೆ ರಾಜ್ಯ ಸರ್ಕಾರ ಮತ್ತು ಶಾಸಕರು ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನ ಮಾಡಿದರೆ ಸಾವಿರಾರು ಹಳ್ಳಿಗಳ ಜನರ ಜೀವನ ಹಾಳಾಗುತ್ತದೆ. ಮಂಗಳೂರಿನ ಜಿಲ್ಲೆಯ ಯಾವ ಹಳ್ಳಿ ಈ ವ್ಯಾಪ್ತಿಗೆ ಬರಲಿದೆ ಎಂಬುದರ ವಿವರಣೆ ಇಲ್ಲಿದೆ.
ಕೇಂದ್ರ ಪರಿಸರ ಇಲಾಖೆ ಜುಲೈ 4ರಂದು ಅಧಿಸೂಚನೆಯನ್ನು ಹೊರಡಿಸಿ ಆಕ್ಷೇಪಣೆಯನ್ನು ಸಲ್ಲಿಸಲು 60 ದಿನಗಳ ಕಾಲಾವಕಾಶವನ್ನು ನೀಡಿದೆ. ಕಸ್ತೂರಿ ರಂಗನ್ ವರದಿಯನ್ನು ಆಧರಿಸಿ ಹೊರಡಿಸಿರುವ ಆದೇಶವನ್ನು ಅಧಿಸೂಚನೆಯನ್ನು ಅನುಸರಿಸಿದರೆ ರಾಜ್ಯದ ಕರಾವಳಿ, ಮಲೆನಾಡು, ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ವಾಸಿಸುವ ಜನ ಜೀವನವೇ ಅಸ್ತವ್ಯಸ್ತವಾಗಿಬಿಡುತ್ತದೆ.
ಕೇಂದ್ರ ಸರ್ಕಾರಕ್ಕೆ ಗಾಡ್ಗಿಳ್ ವರದಿಯು 2010ರಲ್ಲಿ ಸಲ್ಲಿಕೆಯಾಗಿತ್ತು. ಗಾಡ್ಗಿಳ್ ವರದಿಯಲ್ಲಿ ಅವೈಜ್ಞಾನಿಕವಾಗಿದೆ ಎಂದು ಇಸ್ರೋ ವಿಜ್ಞಾನಿ ಕಸ್ತೂರಿ ರಂಗನ್ ನೇತೃತ್ವದ ಸಮಿತಿಯನ್ನು ರಚನೆಯನ್ನು ಮಾಡಲಾಗಿತ್ತು. ಕಸ್ತೂರಿ ರಂಗನ್ ಸಮಿತಿಯ ಅಧ್ಯಯನವನ್ನು ಮಾಡಿ ಪಶ್ಚಿಮ ಘಟ್ಟವನ್ನು ಸೂಕ್ಷ್ಮ ಪ್ರದೇಶ ಎಂದು ಪರಿಗಣಿಸಲು ವರದಿಯನ್ನು ನೀಡಿತ್ತು. ಅದರಂತೆ ಗುಜರಾತ್ ತಮಿಳುನಾಡಿ, ಮಹಾರಾಷ್ಟ್ರ, ಗೋವಾ, ಕರ್ನಾಟಕ ವ್ಯಾಪ್ತಿಯನ್ನು ಹೇಳಿತ್ತು. ಅದರಂತೆ ರಾಜ್ಯದ 20668 ಚದರ ಕಿ.ಮೀ ಒಳಗೊಂಡಿದೆ. ಅಂದರೆ ಕರುನಾಡಿನ ಸಾವಿರಾರು ಹಳ್ಳಿಯ ಜನರ ಬದುಕು ಬೀದಿಗೆ ಬೀಳುವಂತಾಗುತ್ತದೆ.

ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಹಳ್ಳಿಗಳಿಗೆ ಅಪಾಯ
ಬೆಳ್ತಂಗಡಿಯ ನರಾವಿ, ಮಳವಂತಿಗೆ, ಕುತ್ಲೂರು, ಸುಲ್ಕೇರಿಮೊಗ್ರು, ಶಿರ್‍ಲಾಲು, ನವರಾ, ಸವನಾಲು, ಚಾರ್‍ಮಡಿ, ಸುಲ್ಕೇರಿ, ನವೂರು, ನೆರಿಯಾ, ನದ, ಪುಡಿವೆಟ್ಟು, ಶಿಶಿಲಾ, ಕಲಂಜಾ, ಶಿಬಾಜೆ, ರೆಖ್ಯಾ ಹಳ್ಳಿಗಳು ಪರಿಸರ ಸೂಕ್ಷ್ಮ ವಲಯ ವ್ಯಾಪ್ತಿಗೆ ಬರಲಿದೆ.

ಮಂಗಳೂರಿನ ಪುತ್ತೂರು ತಾಲೂಕಿನ ಹಳ್ಳಿಗಳು ಡೇಂಜರ್
ಕೌಕರ್‍ಡಿ, ಗೋಲಿದಟ್ಟು, ಶಿರಾಡಿ, ಅಲಂತಾಲಯ, ಶಿರಿಬಾಗಿಲು, ಬಲ್ಯಾ, ಕೊಬಾರು, ಬಿಳಿನೆಲೆ, ದೊಲ್ಪಾಡಿ ಗ್ರಾಮಗಳು ಕಸ್ತೂರಿ ರಂಗನ್ ವರದಿಯಲ್ಲಿವೆ.

ಮಂಗಳೂರಿನ ಸುಳ್ಯ ತಾಲೂಕಿನ ಹಳ್ಳಿಗಳಿವು
ಬಲ್ಪ, ಏನೆಕಲ್ಲು, ಸುಬ್ರಮಣ್ಯ, ಸುಬ್ರಮಣ್ಯ, ನಲ್ಕೂರು, ಕುತ್ಕುಂಜ, ಇನಕೀಡು, ದೇವಚಲ್ಲ, ಹರಿಹರಪಲ್ಲತಡ್ಕ, ಬಲಗೋಡು, ಮಾದಪ್ಪಾಡಿ, ಉಬಾರಡ್ಕ ಮಿಟ್ಟುರ್, ಕಲ್ಮಕರು, ಅರನ್ತೋಡು, ಅಲೆಟ್ಟಿ, ಸಂಪಜೆ, ತೊಡಿಕನ ಎಂಬ ಹಳ್ಳಿಗಳು ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಗುರುತಿಸಲಾಗಿದೆ. ಕಸ್ತೂರಿ ರಂಗನ್ ವರದಿಯನ್ನು ಅನುಷ್ಟಾನಗೊಳಿಸಿದರೆ ಈ ಹಳ್ಳಿಗರ ಅಭಿವೃದ್ಧಿಗೆ ಹಿನ್ನಡೆ ಆಗುವ ಅಪಾಯವಿದೆ.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications