ಕಾಸರಗೋಡು: ಯುವತಿ ಸಾವಿಗೆ ಕಾರಣವಾಯ್ತು ದುಪ್ಪಟ್ಟಾ
ಕಾಸರಗೋಡು, ಮಾರ್ಚ್. 03 : ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ವೇಳೆ ಯುವತಿಯ ದುಪ್ಪಟ್ಟಾ ಗ್ರೈಂಡರ್ ಗೆ ಸಿಲುಕಿದ ಪರಿಣಾಮ ಉಸಿರುಗಟ್ಟಿ ಸಾವನ್ನಪ್ಪಿದ ಘಟನೆ ಕುಂಬಳೆಯ ಶಿರಿಯಾದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಒಳಯಂ ನಿವಾಸಿ ಸಯ್ಯದ್ ಎಂಬವರ ಪತ್ನಿ ಆಯಿಷತ್ ಮುನೈಫ್ (21) ಎಂದು ಗುರುತಿಸಲಾಗಿದೆ. ಮುನೈಫಾ ಅವರು ಗ್ರೈಂಡರ್ ನಲ್ಲಿ ಅಕ್ಕಿ ರುಬ್ಬುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ದುಪ್ಪಟ್ಟಾ ಗ್ರೈಂಡರ್ ಚಕ್ರಕ್ಕೆ ಸಿಲುಕಿದೆ.

ಗ್ರೈಂಡರ್ ವೇಗವಾಗಿ ತಿರುಗುತ್ತಿದ್ದರಿಂದ ದುಪ್ಪಟ್ಟಾ ಕುತ್ತಿಗೆಗೆ ಬಿಗಿಯಾಗಿ ಸುತ್ತಿಕೊಂಡಿದೆ. ಇದರಿಂದ ಆಯಿಷತ್ ಳ ಚಿರಾಟವನ್ನು ಕೇಳಿ ಅತ್ತೆ-ಮಾವ ಧಾವಿಸಿ ಸ್ವಿಚ್ ಆಫ್ ಮಾಡಿ ಗ್ರೈಂಡರ್ ಸ್ಥಗಿತಗೊಳಿಸಿ, ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ, ಅಷ್ಟೋತ್ತಿಗಾಗಲೇ ಆಯಿಷತ್ ಳ ಆಯುಷ ಮುಗಿದಿತ್ತು.
ಒಂದೂವರೆ ವರ್ಷದ ಹಿಂದೆಯಷ್ಟೇ ಆಯಿಷತ್ ಳಿಗೆ ವಿವಾಹವಾಗಿದ್ದು. ಎಂಟು ತಿಂಗಳ ಮಗು ಇದೆ. ತಾಯಿಯ ಮರಣದಿಂದಾಗಿ 8 ತಿಂಗಳ ಹಸುಳೆ ಈಗ ತಬ್ಬಲಿಯಾಗಿದೆ.
ಕುಂಬಳೆ ಪೊಲೀಸರು ಮೃತದೇಹದ ಮಹಜರು ನಡೆಸಿದ್ದು, ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮೃತ ದೇಹವನ್ನು ಒಪ್ಪಿಸಿದರು.












Click it and Unblock the Notifications