ಬಡ ಕುಟುಂಬ ಮನೆ ಕಟ್ಟಿಕೊಳ್ಳಲು ಶಾಸಕರ ನೆರವು

ಮಂಗಳೂರು, ಏ. 7 : ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬವೊಂದಕ್ಕೆ ಶಾಸಕ ಜೆ.ಆರ್.ಲೋಬೋ ಅವರು ಹಣಕಾಸಿನ ಸಹಾಯ ಮಾಡಿ ಮಾನವೀಯತೆ ತೋರಿದ್ದಾರೆ. ಮನೆಯ ನಿರ್ಮಾಣ ಕಾರ್ಯಕ್ಕಾಗಿ 70 ಸಾವಿರ ರೂ.ಗಳ ಸಹಾಯ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಸುರಿದ ಮಳೆಯಿಂದ ಮರೋಳಿಯ ದಯಾಕರ ಬಂಗೇರ ಅವರು ಮನೆ ಕಳೆದುಕೊಂಡಿದ್ದರು. ಎರಡೂ ಕಾಲುಗಳನ್ನು ಕಳೆದುಕೊಂಡ ದಯಾಕರ ಅವರ ಮನೆಯನ್ನು ರಿಪೇರಿ ಮಾಡಿಸಿಕೊಳ್ಳುವಷ್ಟು ಶಕ್ತಿ ಹೊಂದಿರಲಿಲ್ಲ. [ಸಚಿವರ ಮಾನವೀಯತೆಗೆ ಸಲಾಂ]

JR Lobo

ಮಂಗಳೂರು ನಗರ ದಕ್ಷಿಣ‌ ಕ್ಷೇತ್ರದ ಶಾಸಕ ಜೆ.ಆರ್.ಲೋಬೋ ಅವರು ನಾಲ್ಕು ದಿನಗಳ ಹಿಂದೆ ಮರೋಳಿಗೆ ಭೇಟಿ ನೀಡಿ ದಯಾಕರ ಬಂಗೇರ ಅವರ ಮನೆಯ ಪರಿಶೀಲನೆ ನಡೆಸಿದ್ದರು. ಆರ್ಥಿಕವಾಗಿ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು.

Dakshina Kannada

ಮಂಗಳವಾರ ಶಾಸಕರು ದಯಾಕರ ಬಂಗೇರ ಅವರ ಕುಟುಂಬಕ್ಕೆ 70 ಸಾವಿರ ರೂ.ಗಳ ಆರ್ಥಿಕ ಸಹಾಯವನ್ನು ಮಾಡಿ, ಮನೆಯನ್ನು ಕಟ್ಟಿಕೊಳ್ಳಲು ನೆರವು ನೀಡಿದ್ದಾರೆ. ನಗರಪಾಲಿಕೆಯಿಂದ ಕುಟೀರ ಭಾಗ್ಯ ಯೋಜನೆ ಮೂಲಕ ಸುಮಾರು 10 ರಿಂದ 15 ಸಾವಿರ ರೂ. ನೆರವು ಕೊಡಿಸುವ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+