ಮಂಗಳೂರಲ್ಲಿ ಎಗ್ಗುಸಿಗ್ಗಿಲ್ಲದೆ ಸಾಗಿದೆ ಸಿಗರೇಟು ಸ್ಮಗ್ಲಿಂಗ್
ಮಂಗಳೂರು, ಜನವರಿ 07 : ಕರಾವಳಿಯಲ್ಲಿ ಹೆಚ್ಚುತ್ತಿದೆ ಅಕ್ರಮ ಸಿಗರೇಟ್ ಮಾರಾಟ. ಬೀದಿಬೀದಿಗಳಲ್ಲಿ ಸಿಗರೇಟ್ ಸ್ಮಗ್ಲಿಂಗ್ ಜಾಲ ಸಕ್ರಿಯವಾಗಿದ್ದರೂ ಕೇವಲ ಬೆರಳೆಣಿಕೆಯಷ್ಟೇ ಪ್ರಕರಣಗಳು ಮಾತ್ರ ದಾಖಲಾಗಿವೆ. ಇದಕ್ಕೆ ಮೂಲ ಕಾರಣ ಏನು?
ಕರಾವಳಿಯಲ್ಲಿ ವಿದೇಶಿ ಬ್ರ್ಯಾಂಡೆಡ್ ಸಿಗರೇಟ್‌ನ ಅಕ್ರಮ ಮಾರಾಟ ಜಾಲ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಕೋಟ್ಯಾಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಆಶ್ಚರ್ಯವೆಂದರೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕವೇ ಅತೀ ಹೆಚ್ಚು ಸಾಗಾಟ ದಂಧೆ ನಡೆಯುತ್ತಿದೆ. ಆದರೆ ಕಸ್ಟಮ್ ಅಧಿಕಾರಿಗಳಿಗೆ ಬೆರಳೆಣಿಕೆಯಷ್ಟೇ ಆರೋಪಿಗಳು ಸಿಕ್ಕಿರುವುದು ನಿಜಕ್ಕೂ ವಿಪರ್ಯಾಸ.
ವಿಶ್ವದಲ್ಲೇ ಸಿಗರೇಟು ವ್ಯವಹಾರದಲ್ಲಿ ಭಾರತದ್ದೇ ಸಿಂಹಪಾಲು. ಅತ್ಯಾಕರ್ಷಕ ಪ್ಯಾಕ್‌ಗಳಲ್ಲಿಬರುವ ಈ ಸಿಗರೇಟ್‌ಗಳು ಯುವಕ-ಯುವತಿಯರನ್ನೇ ಹೆಚ್ಚಾಗಿ ಸೆಳೆಯುತ್ತಿವೆ. ತಾವು ಇಂಪೋರ್ಟೆಡ್ ಸಿಗರೇಟು, ಸೇದುತ್ತಿದ್ದೇವೆ ಎಂದು ಹೆಮ್ಮೆಯಿಂದ ಹೊಗೆ ಬಿಡುವ ಯುವ ಜನರಿಗೆ ಇವುಗಳಿಂದಾಗುವ ಮಾರಕ ಪರಿಣಾಮಗಳ ಅರಿವಿಲ್ಲ.

ಸಿಗರೇಟು ಸೇವಿಸುವುದು ಫ್ಯಾಷನ್
ಸಾರ್ವಜನಿಕವಾಗಿ ಸಿಗರೇಟ್ ಸೇವನೆಗೆ ನಿಷೇಧವಿದ್ದರೂ ಸಿಗರೇಟ್ ಸೇವಿಸುವ ಗ್ರಾಹಕರಿಗೇನೂ ಕೊರತೆ ಇಲ್ಲ. ಅಲ್ಲದೆ, ಸಾರ್ವಜನಿಕ ಸ್ಥಳಗಳಲ್ಲಿ, ಕಾಲೇಜುಗಳ ಎದುರಿನಲ್ಲಿ ಹುಡುಗ ಹುಡುಗಿಯರೆನ್ನದೆ ಸಿಗರೇಟು ಸೇವಿಸುವುದು ಫ್ಯಾಷನ್ ಎಂಬಂತಾಗಿದೆ.

ವಿದೇಶಿ ಬ್ರಾಂಡ್ ಅಂದ್ರೆ ಅದೇನೋ ಪ್ರೀತಿ
ಜನರಿಗೆ ವಿದೇಶಿ ಸಿಗರೇಟ್ ಅಂದರೆ ಅದೇನೋ ಪ್ರೀತಿ. ಇದೇ ಭಾವನೆಯನ್ನು ಅರಿತ ಕಳ್ಳ ಸಾಗಾಟಕಾರರು ಈ ದಂಧೆಗೆ ಕೈ ಹಾಕಿದ್ದಾರೆ. ರಾಜ್ಯದ ಕರಾವಳಿ ಪ್ರದೇಶ ಅಕ್ರಮ ವಿದೇಶಿ ಸಿಗರೇಟ್ ಸರಬರಾಜಿಗೆ ಹೇಳಿ ಮಾಡಿಸಿದ ತಾಣವಾಗಿದೆ. ಇದಲ್ಲದೆ ನೆರೆಯ ಕೇರಳದಲ್ಲೂ ಅಕ್ರಮ ಸಿಗರೇಟ್ ಪೂರೈಕೆ ಜಾಲದ ಲಿಂಕಿಗೆ ದುಬೈ ಹಾಗೂ ಇತರ ಅರಬ್ ರಾಷ್ಟ್ರಗಳೇ ಮೂಲಸ್ಥಾನವಾಗಿದೆ.

ಅರಬ್ ರಾಷ್ಟ್ರಗಳಿಂದ ಅಕ್ರಮ ಸಿಗರೇಟ್ ರಫ್ತು
ಅರಬ್ ರಾಷ್ಟ್ರಗಳಿಂದ ರಫ್ತಾಗುವ ಈ ಅಕ್ರಮ ಸಿಗರೇಟು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಮಂಗಳೂರಿಗೆ ಬಂದರೂ ಅದು ನೇರವಾಗಿ ಹೋಗುವುದು ನೆರೆಯ ಕೇರಳ ರಾಜ್ಯಕ್ಕೆ. ಹಾಗೆಯೇ ಕೇರಳದಿಂದ ಮತ್ತೆ ರಸ್ತೆ ಮಾರ್ಗವಾಗಿ ಈ ಸಿಗರೇಟ್ ಕರಾವಳಿ ಭಾಗಕ್ಕೆ ಪೂರೈಕೆಯಾಗುತ್ತಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಸಿಗರೇಟು ಪತ್ತೆಯಾದ ಪ್ರಕರಣಗಳ ವಿವರ
2013ರ ಅಕ್ಟೋಬರ್‌ನಲ್ಲಿ 10 ಲಕ್ಷ ರು. ಮೌಲ್ಯದ ಸಿಗರೇಟು ವಶ
2015ರ ಅಕ್ಟೋಬರ್‌ನಲ್ಲಿ 1.20 ಲಕ್ಷ ರು. ಮೌಲ್ಯದ ಸಿಗರೇಟು ವಶ
2016ರ ಜನವರಿಯಲ್ಲಿ 4.19 ಲಕ್ಷ ರು. ಮೌಲ್ಯದ ಸಿಗರೇಟು ವಶ
2016ರ ಏಪ್ರಿಲ್‌ನಲ್ಲಿ 2.44 ಲಕ್ಷ ರು. ಮೌಲ್ಯದ ಸಿಗರೇಟು ವಶ
2016ರ ಸಪ್ಟೆಂಬರ್‌ನಲ್ಲಿ 4.25 ಲಕ್ಷ ರು. ಮೌಲ್ಯದ ಸಿಗರೇಟು ಪತ್ತೆ
-
Viral Video: ಶಿಕ್ಷಕಿ ಬಿಟ್ಟುಹೋಗುವ ಸುದ್ದಿ ಕೇಳಿ ಕಣ್ಣೀರಿಟ್ಟ ಮಕ್ಕಳ ಮನಮುಟ್ಟುವ ವಿಡಿಯೋ ವೈರಲ್ -
ಶೀಘ್ರದಲ್ಲೇ ದ್ವಿತೀಯ PUC ಫಲಿತಾಂಶ ಪ್ರಕಟ: ರಿಸಲ್ಟ್ ಡೇಟ್, ಚೆಕ್ ಮಾಡುವ ವಿಧಾನ ಸೇರಿ ಸಂಪೂರ್ಣ ಮಾಹಿತಿ ಇಲ್ಲಿದೆ -
April 3 Horoscope: ಇಂದು ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ? ಸಂಪೂರ್ಣ ವಿವರ -
ಮಾಂಗಲ್ಯ ಧಾರಣೆಗೆ 5 ನಿಮಿಷ ಬಾಕಿ ಇರುವಾಗ ಮದುವೆ ನಿಲ್ಲಿಸಿದ ವಧು! ವರನ ನಡೆಗೆ ನೆಟ್ಟಿಗರು ಫಿದಾ -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
Rashmika Mandanna: ಮದುವೆಯಾಗಿ ಒಂದೇ ತಿಂಗಳಿಗೆ ಈಗ ನಾವು ಮೂವರು ಎಂದ ರಶ್ಮಿಕಾ ಮಂದಣ್ಣ, ನೆಟ್ಟಿಗರು ಏನಂದ್ರು -
B-Khata: ಬಿ-ಖಾತಾ ಪರಿವರ್ತನೆಯಲ್ಲಿ ಹೊಸ ಸಮಸ್ಯೆ: 8 ಲಕ್ಷ ಆಸ್ತಿಗಳಲ್ಲಿ ಕೇವಲ 818ಕ್ಕೆ ಮಾತ್ರ ಎ-ಖಾತಾ -
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Bengaluru property: ಬೆಂಗಳೂರಿನಲ್ಲಿ ಕಡಿಮೆ ಬೆಲೆಗೆ ಪ್ರಾಪರ್ಟಿ ಸಿಗುವ 10 ಪ್ರದೇಶಗಳು, ಬಡವರೂ ಭೂಮಿ ಖರೀದಿಸಬಹುದು -
Bengaluru vs Hyderabad: ಬೆಂಗಳೂರು ಹಿಂದಿಕ್ಕಿದ ಹೈದರಾಬಾದ್, ಸಿಲಿಕಾನ್ ಸಿಟಿಗೆ ಹಿನ್ನಡೆಯಾದ 2 ವಿಷಯಗಳು -
Udaan Yatri Cafe: ಏರ್ಪೋರ್ಟ್ನಲ್ಲಿ ದುಬಾರಿ ಊಟಕ್ಕೆ ಬ್ರೇಕ್: 17 ಕಡೆ ಉಡಾನ್ ಕೆಫೆ ಆರಂಭ -
ಖಾಸಗಿ ಬಸ್ಗಳಿಗಾಗಿ ಹುಬ್ಬಳ್ಳಿ-ಮುಂಬೈ ಮಾರ್ಗದಲ್ಲಿ NWKRTC ಸಂಚಾರ ಸ್ಥಗಿತ? ನೆಟ್ಟಿಗರ ಆಕ್ರೋಶ












Click it and Unblock the Notifications