ಮಂಗಳೂರು : ಜಿಲ್ಲಾಧಿಕಾರಿಗಳಿಗೆ ದೂರು ಕೊಡುವುದು ಹೇಗೆ?

ಮಂಗಳೂರು, ಅಕ್ಟೋಬರ್ 01 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಲು ಇರುವ ಸಹಾಯವಾಣಿ ಸಂಖ್ಯೆ 1077 ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿಲ್ಲ ಎಂಬ ಆರೋಪಗಳಿವೆ. ಅಪರ ಜಿಲ್ಲಾಧಿಕಾರಿ ಕುಮಾರ್ ಅವರು ಸಹಾಯವಾಣಿಯನ್ನು ಜನಸ್ನೇಹಿಯಾಗಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಜನರು ಸೀ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಬಹುದಾಗಿದೆ.

ಸಹಾಯವಾಣಿ ಸಂಖ್ಯೆಗಳು ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡಬೇಕು ಎಂಬ ನಿಯಮವಿದೆ. ಆದರೆ, ಈ ನಂಬರ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂಬ ಆರೋಪವಿತ್ತು. ಈಗ ಅಪರ ಜಿಲ್ಲಾಧಿಕಾರಿಗಳು ಚುನಾವಣೆ ಸಂದರ್ಭದಲ್ಲಿ ಮಾತ್ರ ಬಳಕೆಯಾಗುತ್ತಿದ್ದ ಈ ಸಹಾಯವಾಣಿಯನ್ನು ಜನಸ್ನೇಹಿಯಾಗಿ ಮಾಡಿದ್ದಾರೆ.

dakshina kannada

ದೂರು ಮತ್ತು ಮಾಹಿತಿ : ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಜನರು ಈ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಜಿಲ್ಲೆಯಲ್ಲಿ ಯಾವುದೇ ಸಮಯದಲ್ಲಿ ಏನೇ ನಡೆದರೂ ಇದರ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ತಿಳಿಸಲು ಈ 1077 ಸಂಖ್ಯೆ ಸಹಾಯಕ್ಕೆ ಬರುತ್ತದೆ. [ಮಂಗಳೂರು ರೈಲ್ವೆ ಸಿಬ್ಬಂದಿಗಳ ಗೋಳು ಕೇಳುವವರಾರು?]

ಸಹಾಯವಾಣಿಗೆ ಬಂದ ಕರೆ ಸ್ವೀಕರಿಸಿದ ತಕ್ಷಣ ಸಮಸ್ಯೆಯನ್ನು ಕೇಳಿ ದೂರನ್ನು ಸಂಬಂಧಪಟ್ಟ ಇಲಾಖೆಗೆ ರವಾನೆ ಮಾಡುವ ಜವಾಬ್ದಾರಿ ನಿಯಂತ್ರಣ ಕೊಠಡಿಗಳಲ್ಲಿ ಕುಳಿತವರದ್ದಾಗಿರುತ್ತದೆ. ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವ ದೂರುಗಳಿದ್ದರೆ ಅವರು ಕಚೇರಿಗೆ ಬಂದ ತಕ್ಷಣ ಮಾಹಿತಿ ನೀಡಲಾಗುತ್ತದೆ.

ಸಹಾಯವಾಣಿ ಕೆಲಸವೇನು? : ಮೂಲಭೂತ ಸೌಕರ್ಯ ಕೊರತೆ, ಲಂಚ ಪ್ರಕರಣ, ಬ್ರೋಕರ್ ಗಳ ಹಾವಳಿ ಮುಂತಾದವುಗಳ ಬಗ್ಗೆ ಜನರ ದೂರು ನೀಡಬಹುದು. ಜಿಲ್ಲಾಧಿಕಾರಿಗಳು ಯಾವ ಸಂದರ್ಭಗಳಲ್ಲಿ ಸಿಗುತ್ತಾರೆ? ಎಂಬ ಮಾಹಿತಿಯನ್ನು ಪಡೆಯಬಹುದಾಗಿದೆ.

ಉಸ್ತುವಾರಿ ಯಾರು : ಸಹಾಯವಾಣಿಯಲ್ಲಿನ ಕರೆ ಸ್ವೀಕರಿಸುವ ಸಿಬ್ಬಂದಿ ದೂರುಗಳಿಗೆ ಪರಿಹಾರ ಕೊಡುವ ಕಾರ್ಯವನ್ನು ಮಾಡುತ್ತಾರೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಯೇ ಸಹಾಯವಾಣಿ ಕಾರ್ಯನಿರ್ವಹಣೆ ಮಾಡುತ್ತದೆ. ಇದರ ಉಸ್ತುವಾರಿಗೆ ತಹಶೀಲ್ದಾರ್ ಗ್ರೇಡ್‌ನವರನ್ನು ನೇಮಕ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+