ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಾರ್ಮಾಡಿ ಘಾಟ್‌ನಲ್ಲಿ ಟ್ಯಾಂಕರ್ ಸಂಚಾರ ನಿಷೇಧ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮಂಗಳೂರು, ಜ.14 : ಚಾರ್ಮಾಡಿ ಘಾಟ್‌ನಲ್ಲಿ 10 ಚಕ್ರದ ಟ್ಯಾಂಕರ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಎನ್‌ಎಂಪಿಟಿಯಿಂದ ಸಾಗುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಬೆಳಗ್ಗೆ 6ರಿಂದ 10ಗಂಟೆ ವರೆಗೆ ವಿಶೇಷ ಅವಕಾಶ ನೀಡಲಾಗಿದೆ.

ಶಿರಾಡಿ ಘಾಟ್‌ನಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿರುವುದರಿಂದ ಹೆಚ್ಚು ಜನರು ಚಾರ್ಮಾಡಿ ಘಾಟ್ ಅವಲಂಬಿಸಿದ್ದಾರೆ. ಆದರೆ, ಘಾಟ್‌ನಲ್ಲಿ 10 ಚಕ್ರದ ಟ್ಯಾಂಕರ್‌ಗಳು ಸಂಚರಿಸುವುದರಿಂದ ಉಳಿದ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗುತ್ತಿತ್ತು. [ಚಾರ್ಮಾಡಿ ರಸ್ತೆಗೆ ತುರ್ತು ದುರಸ್ತಿ ಭಾಗ್ಯ]

Heavy vehicles

ಆದ್ದರಿಂದ ಚಾರ್ಮಾಡಿ ಘಾಟ್‌ನಲ್ಲಿ 10 ಚಕ್ರದ ಟ್ಯಾಂಕರ್‌ಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಿ ಜಿಲ್ಲಾದಿಕಾರಿ ಎ.ಬಿ.ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ. ಎನ್‌ಎಂಪಿಟಿಯಿಂದ ಸಾಗುವ ವಾಹನಗಳಿಗೆ ಮಾತ್ರ ಸಂಚಾರಕ್ಕೆ ಬೆಳಗ್ಗೆ 6ರಿಂದ 10ಗಂಟೆ ವರೆಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. [ಶಿರಾಡಿ ಘಾಟ್ ಬಂದ್, ಪರ್ಯಾಯ ಮಾರ್ಗಗಳು]

ಟ್ಯಾಂಕರ್‌ಗಳಿಗೆ ಪರ್ಯಾಯ ಮಾರ್ಗ : ಚಾರ್ಮಾಡಿ ಘಾಟ್‌ನಲ್ಲಿ ಸಂಚರಿಸುತ್ತಿದ್ದ 10 ಚಕ್ರದ ಟ್ಯಾಂಕರ್‌ಗಳು ಮಂಗಳೂರು-ಪುತ್ತೂರು-ಸುಳ್ಯ-ಮಡಿಕೇರಿ-ಮೈಸೂರು ಮೂಲಕ ಬೆಂಗಳೂರು ತಲುಪಬಹುದಾಗಿದೆ. ಅಲ್ಲದೇ ಚಾರ್ಮಾಡಿ ಘಾಟ್‌ನಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ವಾಹನಗಳ ವೇಗವನ್ನು ಗಂಟೆಗೆ 40 ಕಿ.ಮೀ. ನಂತೆ ಸೀಮಿತಗೊಳಿಸಿ ಆದೇಶ ಹೊರಡಿಸಲಾಗಿದೆ.

ಎರಡೂ ಕಡೆ ಕ್ರೇನ್ ವ್ಯವಸ್ಥೆ : ಮಂಗಳೂರು-ಬೆಂಗಳೂರು ನಡುವೆ ಕೆಎಸ್‌ಆರ್‌ಟಿಸಿಯ 300 ಮತ್ತು 250 ಖಾಸಗಿ ಬಸ್ಸುಗಳು ಸಂಚರಿಸುತ್ತಿವೆ. ಅಪಘಾತ ಉಂಟಾದರೆ ತಕ್ಷಣ ಕಾರ್ಯಾಚರಣೆ ನಡೆಸಲು ಅನುಕೂಲವಾಗುವಂತೆ ಚಾರ್ಮಾಡಿ ಘಾಟ್‌ನ ಮೇಲೆ ಮತ್ತು ಕೆಳಗೆ ಎರಡು ಕ್ರೇನ್‌ಗಳನ್ನು ಸಿದ್ಧವಾಗಿಟ್ಟುಕೊಳ್ಳುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಡಿಸಿ ಸೂಚಿಸಿದ್ದಾರೆ.

English summary
Heavy vehicles banned on Charmadi Ghat road. District administration has given special permission for heavy vehicles belonging to the NMPT to ply on the road from 6 to 10 am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X