ಚಿತ್ರಗಳಲ್ಲಿ ಕರಾವಳಿಯಲ್ಲಿ ಮಳೆಯ ಅಬ್ಬರ

ಮಂಗಳೂರು, ಆ.1 : ಕರಾವಳಿ ಭಾಗದಲ್ಲಿ ಗುರುವಾರದಿಂದ ಉತ್ತಮ ಮಳೆಯಾಗುತ್ತಿದೆ. ಮಂಗಳೂರು ಮತ್ತು ಉಡುಪಿಯಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. ಮಂಗಳೂರಿನಲ್ಲಿ ಗುರುವಾರ ಸಂಜೆ ಮಳೆಯಿಂದಾಗಿ ಮನೆಯೊಂದು ಕುಸಿದುಬಿದ್ದಿದೆ. ಕಡಬದಲ್ಲಿ ಹೊಸಮಠ ಸೇತುವೆ ಮುಳುಗಡೆಯಾಗಿದೆ. ಶುಕ್ರವಾರವೂ ಮಳೆ ಮುಂದುವರೆದಿದೆ.

ಗುರುವಾರ ಬೆಳಗ್ಗೆಯಿಂದ ಉಡುಪಿ, ಮಂಗಳೂರು, ಪುತ್ತೂರು, ಬಂಟ್ವಾಳ, ಸುರತ್ಕಲ್ ನಲ್ಲಿ ಉತ್ತಮ ಮಳೆಯಾಗುತ್ತಿದೆ. ಮಂಗಳೂರು ನಗರದಲ್ಲಿ ಬಿಟ್ಟೂ ಬಿಟ್ಟೂ ಮಳೆ ಸುರಿಯುತ್ತಿದ್ದರೆ, ಸುಳ್ಯ, ಪುತ್ತೂರು, ಮೂಡುಬಿದಿರೆ, ಸುರತ್ಕಲ್, ಕಿನ್ನಿಗೋಳಿ, ಬಂಟ್ವಾಳದಲ್ಲಿ ಉತ್ತಮವಾಗಿ ಮಳೆಯಾಗುತ್ತಿದೆ. [ಮಳೆಯ ಆರ್ಭಟ : ಜಲಾಶಯದಲ್ಲಿ ಎಷ್ಟು ನೀರಿದೆ?]

ಕೊಲ್ಲೂರಿನಲ್ಲಿ 14, ಸಿದ್ದಾಪುರದಲ್ಲಿ 10, ಬೆಳ್ತಂಗಡಿ ಮತ್ತು ಧರ್ಮಸ್ಥಳದಲ್ಲಿ 7 ಸೆಂ.ಮೀ.ಮಳೆ ಗುರುವಾರ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಕಡಬದಲ್ಲಿ ಸುರಿದ ಭಾರೀ ಮಳೆಗೆ ಬುಧವಾರ ರಾತ್ರಿ ಹೊಸಮಠ ಸೇತುವೆ ಮುಳುಗಡೆಯಾಗಿದ್ದು, ಗುರುವಾರ ಬೆಳಗ್ಗೆ ತೆರವುಗೊಂಡಿತ್ತು. ಸಂಜೆ ಪುನಃ ಮುಳುಗಡೆಯಾಗಿದೆ. ಮಂಗಳೂರಿನ ಮಳೆಯ ಚಿತ್ರಗಳು ಇಲ್ಲಿವೆ.

ಕರಾವಳಿಯಲ್ಲಿ ಉತ್ತಮ ಮಳೆ

ಕರಾವಳಿಯಲ್ಲಿ ಉತ್ತಮ ಮಳೆ

ಕರಾವಳಿ ಭಾಗದಲ್ಲಿ ಗುರುವಾರದಿಂದ ಉತ್ತಮ ಮಳೆ ಸುರಿಯುತ್ತಿದೆ. ಮಂಗಳೂರಿನಲ್ಲಿ ಮಳೆಯಿಂದಾಗಿ ಮನೆಯೊಂದು ಕುಸಿದುಬಿದ್ದಿದೆ. ಕಡಬದಲ್ಲಿ ಹೊಸಮಠ ಸೇತುವೆ ಮುಳುಗಡೆಯಾಗಿದೆ. ಶುಕ್ರವಾರವೂ ಮಳೆ ಮುಂದುವರೆದಿದ್ದು ಉಡುಪಿ ಜಿಲ್ಲೆಯಲ್ಲಿ ಆರು ಗ್ರಾಮಗಳು ಜಲಾವೃತವಾಗಿವೆ.

ಎಲ್ಲಿ ಎಷ್ಟು ಮಳೆ ಸುರಿದಿದೆ?

ಎಲ್ಲಿ ಎಷ್ಟು ಮಳೆ ಸುರಿದಿದೆ?

ಗುರುವಾರ ಕೊಲ್ಲೂರಿನಲ್ಲಿ 14, ಸಿದ್ದಾಪುರದಲ್ಲಿ 10, ಬೆಳ್ತಂಗಡಿ ಮತ್ತು ಧರ್ಮಸ್ಥಳದಲ್ಲಿ 7 ಸೆಂ.ಮೀ.ಮಳೆ ಗುರುವಾರ ಸುರಿದಿದೆ. ಕಡಬದಲ್ಲಿ ಸುರಿದ ಭಾರೀ ಮಳೆಗೆ ಬುಧವಾರ ರಾತ್ರಿ ಹೊಸಮಠ ಸೇತುವೆ ಮುಳುಗಡೆಯಾಗಿತ್ತು. ಗುರುವಾರ ಬೆಳಗ್ಗೆ ತೆರವುಗೊಂಡಿತ್ತು. ಸಂಜೆ ಪುನಃ ಮುಳುಗಡೆಯಾಗಿದೆ.

ಬ್ಯಾಂಕಿಗೆ ನುಗ್ಗಿದ ನೀರು

ಬ್ಯಾಂಕಿಗೆ ನುಗ್ಗಿದ ನೀರು

ಬಿ.ಸಿ.ರೋಡ್ ನಲ್ಲಿ ಸುರಿದ ಭಾರೀ ಮಳೆಗೆ ಭಾರತೀಯ ಸ್ಟೇಟ್ ಬ್ಯಾಂಕ್ ಕಚೇರಿಗೆ ಗುರುವಾರ ರಾತ್ರಿ ನೀರು ನುಗ್ಗಿದೆ.

ಬೆಳ್ತಗಂಡಿಯಲ್ಲಿ ರಸ್ತೆ ಜಲಾವೃತ

ಬೆಳ್ತಗಂಡಿಯಲ್ಲಿ ರಸ್ತೆ ಜಲಾವೃತ

ಬೆಳ್ತಂಗಡಿಯಲ್ಲಿ ಸುರಿದ ಭಾರೀ ಮಳೆಗೆ ರಸ್ತೆಗಳು ಜಲಾವೃತವಾಗಿದೆ.

ಮಂಗಳೂರಿನಲ್ಲಿ ಮನೆ ಕುಸಿತ

ಮಂಗಳೂರಿನಲ್ಲಿ ಮನೆ ಕುಸಿತ

ಮಂಗಳೂರಿನ ಉಳಿಬೆಟ್ಟು ಗ್ರಾಮದಲ್ಲಿ ಮಳೆಯಿಂದಾಗಿ ಮನೆಯೊಂದು ಕುಸಿದು ಬಿದ್ದಿದೆ. ಈ ವೇಳೆ ಮನೆಯಲ್ಲಿ ಯಾರು ಇರಲಿಲ್ಲ. ಆದ್ದರಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಕುಸಿದ ಬಿದ್ದ ಶೆಡ್

ಕುಸಿದ ಬಿದ್ದ ಶೆಡ್

ಉಳಿಬೆಟ್ಟು ಗ್ರಾಮದಲ್ಲಿಯೇ ಟ್ರಾಕ್ಟರ್ ಶೆಡ್ ಮಳೆಯಿಂದಾಗಿ ಕುಸಿದುಬಿದ್ದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+