ಜನಾರ್ದನ ಪೂಜಾರಿಗೆ ಶೋಕಾಸ್ ನೋಟೀಸ್, ಉತ್ತರ ಕೊಡ್ತಿನಿ ಅಂದ್ರು
ಮಂಗಳೂರು, ಡಿಸೆಂಬರ್, 22 : ಪಕ್ಷ ವಿರೋಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿರುವ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿಯವರಿಗೆ ಎಐಸಿಸಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ.
ಜನಾರ್ದನ ಪೂಜಾರಿ ಅವರು ಸುದ್ದಿಗೊಷ್ಠಿಗಳಲ್ಲಿ ರಾಜ್ಯ ಸಚಿವರ ಹಾಗೂ ಸಿಎಂ ವಿರುದ್ಧ ಬಹಿರಂಗ ಹೇಳಿಕೆ ನೀಡಿ ಪಕ್ಷದ ಮುಖಂಡರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಈ ಬಗ್ಗೆ ಒಂದು ವಾರದೊಳಗೆ ಉತ್ತರ ನೀಡುವಂತೆ ಕಾರಣ ಕೇಳಿ ಎಐಸಿಸಿ ಶೋಕಾಸ್ ನೋಟೀಸ್ ಜಾರಿ ಮಾಡಿದೆ.

ನೋಟೀಸ್ ಜಾರಿ ಮಾಡಿದ್ದರ ಬಗ್ಗೆ ನಮ್ಮ 'ಒನ್ ಇಂಡಿಯಾ' ಜನಾರ್ದನ ಪೂಜಾರಿಯವರನ್ನು ಸಂಪರ್ಕಿಸಿ ಪ್ರತಿಕ್ರಿಯೆ ಕೇಳಿತು. ಈ ವೇಳೆ 'ನನ್ನ ಕೈಗೆ ನೋಟೀಸ್ ಸಿಕ್ಕಿಲ್ಲ. ನೋಟೀಸ್ ಸಿಗಲಿ ತಕ್ಕ ಉತ್ತರ ನೀಡುತ್ತೇನೆ' ಎಂದು ಹೇಳಿದ್ದಾರೆ.












Click it and Unblock the Notifications