ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್‌ಡಿಪಿಐ ಬೆಂಬಲಿತರಿಗೆ ಗ್ರಾಮ ಪಂಚಾಯತಿ ಅಧಿಕಾರ

|
Google Oneindia Kannada News

ಮಂಗಳೂರು, ಫೆಬ್ರವರಿ 10: ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿನ ಪಾವೂರು ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಯಗಳಿಸಿದ್ದ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಈಗ ಪಂಚಾಯತಿ ಅಧಿಕಾರವನ್ನು ಹಿಡಿದಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಪಾವೂರು ಗ್ರಾಮ ಪಂಚಾಯತಿಯಲ್ಲಿ ಮೊದಲ ಬಾರಿಗೆ ಎಸ್‌ಡಿಪಿಐ ಬೆಂಬಲಿತ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದಿದ್ದರು.

ಬೆಳಗ್ಗೆ ಬಿಜೆಪಿ ಸೇರಿದ್ದ ಸದಸ್ಯೆ ಸಂಜೆ ಮರಳಿ ಕಾಂಗ್ರೆಸ್‌ಗೆ; ಆಪರೇಷನ್‌ ಕಮಲ ಠುಸ್ ಬೆಳಗ್ಗೆ ಬಿಜೆಪಿ ಸೇರಿದ್ದ ಸದಸ್ಯೆ ಸಂಜೆ ಮರಳಿ ಕಾಂಗ್ರೆಸ್‌ಗೆ; ಆಪರೇಷನ್‌ ಕಮಲ ಠುಸ್

ಒಟ್ಟು 15 ಸ್ಥಾನಗಳುಳ್ಳ ಪಾವೂರು ಗ್ರಾಮ ಪಂಚಾಯತಿಯಲ್ಲಿ ಅಧ್ಯಕ್ಷ ಸ್ಥಾನ ಪಡೆಯಲು ಮ್ಯಾಜಿಕ್ ನಂಬರ್ 8 ಆಗಿದೆ. ಇದರಲ್ಲಿ ಎಸ್‌ಡಿಪಿಐ ಬೆಂಬಲಿತ 6 ಸದಸ್ಯರು, ಕಾಂಗ್ರೆಸ್ ಬೆಂಬಲಿತ 5 ಸದಸ್ಯರು, ಬಿಜೆಪಿ ಬೆಂಬಲಿತ 2 ಸದಸ್ಯರು ಹಾಗೂ ಜೆಡಿಎಸ್ ಬೆಂಬಲಿತ 2 ಸದಸ್ಯರಿದ್ದಾರೆ.

Mangaluru: Gram Panchayat Powers To SDPI Backed Members

ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನ ಪಡೆಯಲು ಅಂತಿಮವಾಗಿ ಜೆಡಿಎಸ್ 2 ಸದಸ್ಯರು ಎಸ್‌ಡಿಪಿಐನ 6 ಸದಸ್ಯರಿಗೆ ಬೆಂಬಲ ನೀಡುವ ಮೂಲಕ ಎಸ್‌ಡಿಪಿಐ ಬೆಂಬಲಿತ ಸದಸ್ಯರು ಪಾವೂರು ಗ್ರಾಮ ಪಂಚಾಯತಿಯಲ್ಲಿ ಅಧಿಕಾರ ಹಿಡಿದಿದ್ದಾರೆ.

ಗ್ರಾಮ ಪಂಚಾಯತಿ ಅಧ್ಯಕ್ಷೆಯಾಗಿ ಖಮರುನ್ನಿಸಾ ಹಾಗೂ ಉಪಾಧ್ಯಕ್ಷರಾಗಿ ಅನ್ಸಾರ್ ಇಲೋನಿ ಆಯ್ಕೆಯಾಗಿದ್ದಾರೆ.

English summary
SDPI-backed candidates who won the Pavoor Gram Panchayat elections in Dakshina Kannada district are now holding the power of the panchayat.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X