ಲೈಂಗಿಕ ಕಿರುಕುಳ: 30 ದಿನದೊಳಗೆ ಗೂಂಡಾಗಳನ್ನ ಜೈಲಿಗಟ್ಟಿ - ಪಿಣರಾಯಿ
ಕೊಚ್ಚಿಯಲ್ಲಿ ಬಹುಭಾಷಾ ನಟಿಯ ಮೇಲಾದ ಲೈಂಗಿಕ ಕಿರುಕುಳದ ನಂತರ ಆಕ್ರೋಶಿತಗೊಂಡಿರುವ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್,'30 ದಿನಗಳೊಳಗೆ ಗೂಂಡಾಗಳನ್ನು ಜೈಲಿಗೆ ಅಟ್ಟಿ' ಎಂದು ಪೊಲೀಸ್ ಇಲಾಖೆಗೆ ಖಡಕ್ ಆದೇಶ ನೀಡಿದ್ದಾರೆ.
ಮಂಗಳೂರು, ಫೆಬ್ರವರಿ 20: ' 30 ದಿನಗಳೊಳಗೆ ಗೂಂಡಾಗಳನ್ನು ಜೈಲಿಗೆ ಅಟ್ಟಿ' ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕೇರಳ ಪೊಲೀಸ್ ಇಲಾಖೆಗೆ ಖಡಕ್ ಆದೇಶ ನೀಡಿದ್ದಾರೆ.
ಕೊಚ್ಚಿಯಲ್ಲಿ ಬಹುಭಾಷಾ ನಟಿಯೋರ್ವಳನ್ನು ತಂಡವೊಂದು ಅಪಹರಿಸಿ ಲೈಂಗಿಕ ಕಿರುಕುಳ ನೀಡಿದ ಹಿನ್ನಲೆಯಲ್ಲಿ ಎಚ್ಚೆತ್ತ ಕೇರಳ ಸರಕಾರ ಇಂತಹದ್ದೊಂದು ಮಹತ್ವದ ನಿರ್ಧಾರಕ್ಕೆ ಬಂದಿದೆ. ನಟಿಗೆ ನೀಡಿದ ಲೈಂಗಿಕ ಕಿರುಕುಳದ ಪರಿಣಾಮ ಗೂಂಡಾಗಳ ಮೇಲಾಗಿದ್ದು, ಕಾಸರಗೋಡು ಜಿಲ್ಲೆಯ 150 ರಷ್ಟು ಗೂಂಡಾಗಳು ಜೈಲು ಪಾಲಾಗುವ ಸಾಧ್ಯತೆ ಇದೆ. [ಮಲಯಾಳಂ ನಟಿ ಲೈಂಗಿಕ ದೌರ್ಜನ್ಯದ ಹಿಂದೆ ಕಾಣದ ಕೈಗಳ ಸಂಚು?]

ಅಂಕಿ ಅಂಶಗಳ ಪ್ರಕಾರ ಮಂಜೇಶ್ವರ ಠಾಣಾ ವ್ಯಾಪ್ತಿಯೊಂದರಲ್ಲೇ ಸುಮಾರು 140 ರಷ್ಟು ರೌಡಿಗಳಿದ್ದಾರೆ. 1984 ರಿಂದ 2016ರ ಸೆಪ್ಟೆಂಬರ್ ತನಕದ ಪ್ರಕರಣಗಳ ಮಾಹಿತಿ ಕಲೆಹಾಕಿ ಈ ಗೂಂಡಾಗಳ ಪಟ್ಟಿಯನ್ನು ತಯಾರಿಸಲಾಗಿದೆ. ಈ ನಡುವೆ ಇನ್ನೂ 25 ಮಂದಿಯನ್ನು ಗೂಂಡಾ ಪಟ್ಟಿಗೆ ಸೇರ್ಪಡೆಗೊಳಿಸುವಂತೆ ಈಗಾಗಲೇ ಶಿಫಾರಸು ಮಾಡಲಾಗಿದೆ.
ಈ ಹಿಂದೆ ಥೋಮ್ಸನ್ ಜೋಸ್ ಎಂಬುವವರು ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿರುವ ಗೂಂಡಾಗಳ ಪಟ್ಟಿಯನ್ನು ತಯಾರಿಸಿದ್ದರು. ರೌಡಿಗಳ ಪಟ್ಟಿಯ ಡೇಟಾ ಬ್ಯಾಂಕ್ ತಯಾರಿಸಿದ್ದರು. ಈ ಡೇಟಾ ಬ್ಯಾಂಕ್ ನಲ್ಲಿ ಎಲ್ಲಾ ರೌಡಿಗಳ ಮಾಹಿತಿಗಳು ಲಭ್ಯ ಇವೆ. [ಎಚ್ ಆರ್ ಬಿಆರ್ ಲೇಔಟ್ ನಲ್ಲಿ ಗಗನ ಸಖಿ ಮೇಲೆ ಲೈಂಗಿಕ ದೌರ್ಜನ್ಯ]
ರೌಡಿಯ ಭಾವಚಿತ್ರ, ವಿಳಾಸ, ಹಿನ್ನಲೆ, ಬೆರಳಚ್ಚು ಸೇರಿದಂತೆ ಎಲ್ಲಾ ಮಾಹಿತಿ ಇದರಲ್ಲಿದೆ. ಇದರಂತೆ ಇದೀಗ ಬಂದಿರುವ ಸುತ್ತೋಲೆ ಪ್ರಕಾರ ಈ ಪಟ್ಟಿಯಲ್ಲಿರುವವರನ್ನು ತಿಂಗಳೊಳಗೆ ಜೈಲಿಗಟ್ಟಲು ಪೊಲೀಸ್ ಇಲಾಖೆ ಪೂರ್ವ ತಯಾರಿ ನಡೆಸುತ್ತಿದೆ.












Click it and Unblock the Notifications