ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಹುದಿನಗಳ ನಂತರ ಒಂದೇ ವೇದಿಕೆಯಲ್ಲಿ ಯಡಿಯೂರಪ್ಪ - ಶೋಭಾ ಕರಂದ್ಲಾಜೆ

|
Google Oneindia Kannada News

ಪ್ರಧಾನಮಂತ್ರಿಯವರ ಕೆಲವು ಗಂಟೆಗಳ ಕರ್ನಾಟಕ ಪ್ರವಾಸವನ್ನು ಕರಾವಳಿಯ ಬಿಜೆಪಿ ಘಟಕ ಭರ್ಜರಿಯಾಗಿ ಬಳಸಿಕೊಂಡಿದೆ. ಮೋದಿಯವರ ಈ ಭೇಟಿಯನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಲಾಗಿತ್ತು.

'ಕರ್ನಾಟಕ ವೆಲ್ಕಂಸ್ ಮೋದಿ' ಮತ್ತು 'ಮೋದಿ ಮೋಸ' ಈ ಎರಡು ಹ್ಯಾಷ್ ಟ್ಯಾಗ್ ಗಳು ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದ್ದವು. ಮಂಗಳೂರಿನ ಗೋಲ್ಡ್ ಫಿಂಚ್ ಹೋಟೆಲ್ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರ ದಂಡೇ ನೆರೆದಿತ್ತು.

ನರೇಂದ್ರ ಮೋದಿ 25 ಭರವಸೆಗೆ ಉತ್ತರ ಕೇಳಿದ ಸಿದ್ದರಾಮಯ್ಯ!ನರೇಂದ್ರ ಮೋದಿ 25 ಭರವಸೆಗೆ ಉತ್ತರ ಕೇಳಿದ ಸಿದ್ದರಾಮಯ್ಯ!

ಸರಕಾರೀ ಕಾರ್ಯಕ್ರಮವಾಗಿದ್ದರೂ ಅಕ್ಷರಶಃ ಇದು ಕೇಸರಿ ಪಡೆಯ ಕಾರ್ಯಕ್ರಮದಂತಿತ್ತು. ಸಭಾ ವೇದಿಕೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರ ಉಪಸ್ಥಿತಿ ವಿಶೇಷವಾಗಿತ್ತು.

Former CM Yediyurappa And Union Minister Shobha Karandlaje In Same Stage

ಯಡಿಯೂರಪ್ಪ ಮತ್ತು ಶೋಭಾ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳದೇ ಬಹುದಿನಗಳು ಕಳೆದಿದ್ದವು. ಬಿಎಸ್ವೈ ಅವರ ಪರಮಾಪ್ತ ವಲಯದಲ್ಲಿ ಕಾಣಿಸಿಕೊಂಡಿದ್ದ ಶೋಭಾ, ಬಹುತೇಕ ಒಂದು ವರ್ಷದಿಂದ ಒಟ್ಟಾಗಿ ಕಾಣಿಸಿಕೊಂಡಿರಲಿಲ್ಲ.

ಪ್ರಧಾನಿ ಮೋದಿ ನಾಡಲ್ಲಿ 4.50 ಲಕ್ಷ ಹಸುಗಳು ಸಂಕಷ್ಟಕ್ಕೆ; ಯಾಕೆ?ಪ್ರಧಾನಿ ಮೋದಿ ನಾಡಲ್ಲಿ 4.50 ಲಕ್ಷ ಹಸುಗಳು ಸಂಕಷ್ಟಕ್ಕೆ; ಯಾಕೆ?

ಶೋಭಾ ಕರಂದ್ಲಾಜೆಯವರು ಕೇಂದ್ರದ ಸಚಿವೆಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ, ದೆಹಲಿಯ ಕರ್ನಾಟಕ ಭವನದಲ್ಲಿ ಅವರಿಗೆ ಯಡಿಯೂರಪ್ಪ ಶುಭವನ್ನು ಕೋರಿದ್ದರು. ಆಗ, ಬಿಎಸ್ವೈ ಮುಖ್ಯಮಂತ್ರಿಯಾಗಿದ್ದರು. ಇದಾದ ನಂತರ ಕಳೆದ ಆಗಸ್ಟ್ ತಿಂಗಳಲ್ಲಿ ಸಾಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಎಸ್ವೈ- ಶೋಭಾ ಕರಂದ್ಲಾಜೆ ಮತ್ತು ಹರತಾಳು ಹಾಲಪ್ಪ ಜೊತೆಗೆ ಕಾಣಿಸಿಕೊಂಡಿದ್ದರು.

Former CM Yediyurappa And Union Minister Shobha Karandlaje In Same Stage

ಯಡಿಯೂರಪ್ಪನವರು ಬಿಜೆಪಿ ತೊರೆದು ಕೆಜೆಪಿ ಕಟ್ಟಿದಾಗ ಮತ್ತು ಬಿಜೆಪಿಗೆ ವಾಪಸ್ ಆದ ಸಂದರ್ಭಗಳಲ್ಲಿ ಶೋಭಾ ಕರಂದ್ಲಾಜೆಯವರು ಯಡಿಯೂರಪ್ಪನವರ ಜೊತೆಗಿದ್ದರು. ಹೆಚ್ಚಿನ ಕಾರ್ಯಕ್ರಮಗಳಲ್ಲಿ ಶೋಭಾ ಮತ್ತು ಯಡಿಯೂರಪ್ಪ ಕಾಣಿಸಿಕೊಳ್ಳುತ್ತಿದ್ದರು.

ಆದರೆ, ಇತ್ತೀಚಿನ ದಿನಗಳಲ್ಲಿ ಇಬ್ಬರೂ ನಾಯಕರು ಅಂತರ ಕಾಯ್ದುಕೊಂಡಿದ್ದರು. ಹಾಗಾಗಿ, ಮಂಗಳೂರಿನಲ್ಲಿ ಪ್ರಧಾನಿ ಮೋದಿಯವರ ಕಾರ್ಯಕ್ರಮದ ವೇದಿಕೆಯಲ್ಲಿ ಈ ಇಬ್ಬರು ನಾಯಕರು ಒಂದೇ ಕಡೆ ಕಾಣಿಸಿಕೊಂಡಿದ್ದು ಕಾರ್ಯಕ್ರಮದ ಹೈಲೆಟ್ಸ್ ಎಂದು ಹೇಳಬಹುದಾಗಿದೆ.

English summary
Former CM Yediyurappa And Union Minister Shobha Karandlaje In Same Stage. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X