• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಮಂಗಳೂರಿನಲ್ಲಿ ಫ್ಲಾಷ್ ಮಾಬ್

|

ಮಂಗಳೂರು, ಏಪ್ರಿಲ್ 12: ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕೆಂದು ಕೇಸರಿ ಪಡೆ ಪಣ ತೊಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಮಾತ್ರವಲ್ಲದೇ, ಮೋದಿ ಅಭಿಮಾನಿಗಳು ಶ್ರಮಿಸುತ್ತಿದ್ದಾರೆ. ದೇಶದಾದ್ಯಂತ ಹಲವಾರು ಕಾರ್ಯಕ್ರಮಗಳು, ಅಭಿಯಾನಗಳು ಆರಂಭವಾಗಿವೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಘಟಕ ಕೂಡ ಸಾಕಷ್ಟು ಕಸರತ್ತು ಮಾಡುತ್ತಿದ್ದು, ಈ ನಿಟ್ಟಿನಲ್ಲಿ ವಿಶಿಷ್ಟ ಅಭಿಯಾನಗಳನ್ನು ಆರಂಭವಾಗಿವೆ. ಬಂದರು ನಗರಿ ಮಂಗಳೂರಿನಲ್ಲೂ ಇಂತಹ ವಿಶಿಷ್ಟ ಅಭಿಯಾನವನ್ನು ಮೋದಿ ಅಭಿಮಾನಿಗಳ ಯುವಪಡೆಯೊಂದು ಮಾಡುತ್ತಿದೆ.

ಮೋದಿ ಆಗಮನ: ಕರಾವಳಿ ಬಿಜೆಪಿ ನಾಯಕರಲ್ಲಿ ಹೆಚ್ಚಿದ ರಣೋತ್ಸಾಹ

ಮಂಗಳೂರು ನಗರದ ಬಸ್ ನಿಲ್ದಾಣ, ಕದ್ರಿ ಪಾರ್ಕ್ ಹಾಗೂ ನಗರದ ಸಿಟಿ ಸೆಂಟರ್ ಮಾಲ್ ನಲ್ಲಿ ಫ್ಲಾಷ್ ಮಾಬ್ ನೃತ್ಯ ಆಯೋಜಿಸಲಾಗಿತ್ತು.ನಗರದ ಎಸ್ ಡಿ ಎಂ ಕಾನೂನು ಮಹಾ ವಿದ್ಯಾಲಯದ ವಿದ್ಯಾರ್ಥಿಗಳು ಈ ಫ್ಲಾಷ್ ಮಾಬ್ ಆಯೋಜಿಸಿದ್ದರು.

ನರೇಂದ್ರ ಮೋದಿ ಕುರಿತ 7 ನಿಮಿಷಗಳ ಹಾಡಿಗೆ ಫ್ಲಾಷ್ ಮಾಬ್ ತಂಡ ಹೆಜ್ಜೆ ಹಾಕಿದೆ. ಫ್ಲಾಷ್ ಮಾಬ್ ಗೆ ಜನರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿರುವ ತಂಡದ ನಾಯಕ ಜೀವನ್, ಮೋದಿ ಮತ್ತೆ ದೇಶದ ಪ್ರಧಾನಿಯಾಗಬೇಕೆಂಬ ನಿಟ್ಟಿನಲ್ಲಿ ಈ ಅಭಿಯಾನ ನಡೆಸುತ್ತಿದ್ದೇವೆ. ಹೋದ ಕಡೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ತಿಳಿಸಿದ್ದಾರೆ.

English summary
Lok Sabha Elections 2019:For Namo again flash mob dance performed in city center mall in Mangaluru. SDM College student performed this flash mob in support of Modi again.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X