ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ಜನವರಿ 27ರಿಂದ ಮತ್ಸ್ಯ ಮೇಳ, ಇಲ್ಲಿದೆ ವಿವರ

|
Google Oneindia Kannada News

ಮಂಗಳೂರು, ಜನವರಿ, 19: ಮಂಗಳೂರು ಅಂದರೆ ಮೊದಲಿಗೆ ನೆನಪಾಗುವುದೇ ಮೀನುಗಳು. ಇಲ್ಲಿನ ಮೀನುಗಳು ಬರೀ ಕರ್ನಾಟಕ ರಾಜ್ಯದಲ್ಲಿ ಮಾತ್ರವಲ್ಲದೇ ಇತರ ರಾಜ್ಯಗಳವರಗೂ ಪ್ರಖ್ಯಾತಿ ಪಡೆದಿವೆ. ಹಾಗೆಯೇ ಇಲ್ಲಿಗೆ ಬಂದಂತಹ ಪ್ರವಾಸಿಗರು ಮೀನು ಊಟ ಸವಿಯದೇ ಹಿಂತಿರುಗುವುದಿಲ್ಲ. ಇಲ್ಲಿನ ಮೀನುಗಾರಿಕೆ ಕಾಲೇಜು, ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ ಹಾಗೂ ಮೀನುಗಾರಿಕೆ ಇಲಾಖೆಯ ಸಹಯೋಗದಲ್ಲಿ ಮೀನುಗಾರಿಕೆ ಕಾಲೇಜಿನ ಆವರಣದಲ್ಲಿ ಫೀಶ್‌ ಫೆಸ್ಟಿವಲ್‌ 2023 ಅನ್ನು ಆಯೋಜಿಸಲಾಗಿದೆ.

ಜನವರಿ 27 ರಿಂದ ಫಿಶ್‌ ಫೆಸ್ಟಿವಲ್‌

ಜನವರಿ 27 ರಿಂದ 28ರವರಗೆ ಈ ಹಬ್ಬ ನಡೆಯಲಿದ್ದು, ಬೆಳಗ್ಗೆ 10ರಿಂದ ಸಂಜೆಯವರೆಗೆ ಫಿಶ್‌ ಫೆಸ್ಟಿವಲ್‌ ಅನ್ನು ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಮೀನುಗಾರಿಕೆ ಕಾಲೇಜಿನ ಆವರಣದಲ್ಲಿ ಜನವರಿ 27ರ ಸಂಜೆ 5 ಗಂಟೆಗೆ ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ ಅವರು ಉದ್ಘಾಟಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಬರೋಬ್ಬರಿ ಆರು ತಿಂಗಳ ಬಳಿಕ ಮಿರಾಲ್ ಪ್ರಿನ್ಸೆನ್ಸ್‌ ಹಡಗಿನಿಂದ ತೈಲ ತೆರವು..!ಬರೋಬ್ಬರಿ ಆರು ತಿಂಗಳ ಬಳಿಕ ಮಿರಾಲ್ ಪ್ರಿನ್ಸೆನ್ಸ್‌ ಹಡಗಿನಿಂದ ತೈಲ ತೆರವು..!

Fish festival in Mangaluru from january 27th

ಈಗಾಗಲೇ ಹಲವು ಜಿಲ್ಲೆಗಳ ಉತ್ಸವವನ್ನು ಅದ್ಧೂರಿಯಾಗಿ ನಡೆದಿವೆ. ಚಿಕ್ಕಬಳ್ಳಾಪುರ ಉತ್ಸವ ಈಗಾಗಲೇ ಮುಗಿದಿದ್ದು, ಚಿಕ್ಕಮಗಳೂರು ಉತ್ಸವಕ್ಕೆ ಜನವರಿ 18ಕ್ಕೆ ಚಾಲನೆ ನೀಡಲಾಗಿದೆ. ಹಾಗೆಯೇ ಜನವರಿ 21ರಂದು ಬಳ್ಳಾರಿ ಉತ್ಸವವು ಕೂಡ ಆರಂಭವಾಗಲಿದೆ. ಅದರಂತೆಯೇ ನಾವು ಏನು ಕಡಿಮೆಯಿಲ್ಲವೆಂಬಂತೆ ಮಂಗಳೂರಿನಲ್ಲಿ ಜನವರಿ 27ರಿಂದ ಫಿಶ್‌ ಫೆಸ್ಟಿವಲ್‌ ಅನ್ನು ಆಯೋಜನೆ ಮಾಡಿದ್ದಾರೆ.

Fish festival in Mangaluru from january 27th

ಬೀದರ್‌ನ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಕೆ.ಸಿ. ವೀರಣ್ಣ, ಹೈದರಾಬಾದ್‌ನ ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುವರ್ಣ, ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ವಿಸ್ತರಣ ನಿರ್ದೇಶಕ ಡಾ. ಎನ್‌.ಎ. ಪಾಟೀಲ್‌, ಕರ್ನಾಟಕ ಮೀನುಗಾರಿಕೆ ನಿರ್ದೇಶಕ ರಾಮಾಚಾರ್ಯ ಮುಖ್ಯ ಅತಿಥಿಗಳಾಗಿ ಭಾಗಯಾಗಲಿದ್ದಾರೆ. ಮಂಗಳೂರು ಮೀನುಗಾರಿಕೆ ಕಾಲೇಜಿನ ಡೀನ್‌ ಡಾ. ಶಿವಕುಮಾರ್‌ ಮಗದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Fish festival 2023: Fish festival in Mangaluru from january 27th to 28, Here see details of Fish festival, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X