ಅನೈತಿಕ ಸಂಬಂಧ : ನಳಿನ್ ವಿರುದ್ಧ ಎಫ್ಐಆರ್

ಮಂಗಳೂರು, ಮೇ.13: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಅವರ ಖಾಸಗಿ ಮಾಹಿತಿ ಸೋರಿಕೆ ಪ್ರಕರಣದ ನಂತರ ಮತ್ತೊಂದು ಅಕ್ರಮ ಸಂಬಂಧ ಕೇಸ್ ಬಹಿರಂಗಗೊಂಡಿದೆ. ಸತೀಶ್ ಶೆಟ್ಟಿ ಎಂಬುವರು ನೀಡಿದ ದೂರಿನ ಅನ್ವಯ ಬಂದರು ಠಾಣೆಯಲ್ಲಿ ನಳೀನ್ ಕುಮಾರ್ ಕಟೀಲು ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದೆ.

ಮುಂಬೈ ನಿವಾಸಿ ಸತೀಶ್ ಶೆಟ್ಟಿ ಅವರು ನೀಡಿರುವ ದೂರಿನ ಪ್ರಕಾರ, ನಳಿನ್ ಕುಮಾರ್ ಕಟೀಲು ಹಾಗೂ ಸತೀಶ್ ಶೆಟ್ಟಿ ಅವರ ಪತ್ನಿ ವಿನುತಾ ಶೆಟ್ಟಿ ನಡುವೆ ಅಕ್ರಮ ಸಂಬಂಧವಿದೆ. ಕಳೆದ ಚುನಾವಣೆಯಲ್ಲಿ ಪ್ರಚಾರ ಸಂದರ್ಭದಲ್ಲಿ ನಮ್ಮ ಮನೆಗೆ ಬಂದಿದ್ದ ನಳೀನ್ ಅವರು ನನ್ನ ಪತ್ನಿ ಮೇಲೆ ಕಣ್ಣಿಟ್ಟಿದ್ದರು.

ನಂತರ, ನನ್ನ ಹಾಗೂ ನನ್ನ ಪತ್ನಿ ನಡುವೆ ವೈಮನಸ್ಯ ಬಂದಿತ್ತು. ಆ ಸಂದರ್ಭವನ್ನು ನಳಿನ್ ಚೆನ್ನಾಗಿ ಬಳಸಿಕೊಂಡಿದ್ದಾರೆ. ನಮ್ಮಿಬ್ಬರನ್ನು ಒಂದು ಮಾಡುವ ಬದಲು ನನ್ನ ಪತ್ನಿಯನ್ನು ತಮ್ಮತ್ತ ಸೆಳೆದುಕೊಂಡಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಇಬ್ಬರು ಬಂದು ನೆಲೆಸಿ, ವಿಹಾರಾರ್ಥಿಗಳಾಗಿ ಸುತ್ತಾಡಿದ್ದಾರೆ, ಈ ಬಗ್ಗೆ ನನ್ನಲ್ಲಿ ಪುರಾವೆಗಳಿವೆ ಎಂದು ಶೆಟ್ಟಿ ಹೇಳಿದ್ದಾರೆ.

FIR filed against Dakshina Kannada MP Nalin Kumar Kateel

ನಾನು ಬಿಜೆಪಿಯ ಕಟ್ಟಾ ಅಭಿಮಾನಿ, ನಳಿನ್ ಕುಮಾರ್ ಅವರಂಥವರು ಜನಪ್ರತಿನಿಧಿಯಾಗಲು ಲಾಯಕ್ಕಿಲ್ಲ, ಇಂಥವರಿಂದ ನರೇಂದ್ರ ಮೋದಿ ಅವರಿಗೆ ಕೆಟ್ಟ ಹೆಸರು. ನಳೀನ್ ಅವರನ್ನು ಪ್ರಶ್ನಿಸಿದರೆ ಅವರ ಬೆಂಬಲಿಗರು ನನ್ನನ್ನು ಕೊಲ್ಲುವ ಬೆದರಿಕೆ ಹಾಕುತ್ತಾರೆ. ಇತ್ತೀಚೆಗೆ ಮಂಗಳೂರಿನ ಸಿಟಿ ಸೆಂಟರ್ ನಲ್ಲಿ ನಳಿನ್ ಬೆಂಬಲಿಗರು ನನ್ನನ್ನು ಬೆದರಿಸಿದ್ದರು ಎಂದು ಶೆಟ್ಟಿ ವಿವರಿಸಿದ್ದಾರೆ.

ಬಿಲ್ಲವ ಹುಡುಗಿಯೊಂದಿಗೆ ಫೋನ್ ಕರೆ ಕಿರಿಕಿರಿಗೆ ಕೇಸ್ ನಲ್ಲಿ ನಳಿನ್ ಸಿಕ್ಕಿ ಹಾಕಿಕೊಂಡಿದ್ದರು. ನಳಿನ್ ಕುಮಾರ್ ಅವರ ಖಾಸಗಿ ಮಾಹಿತಿ ಸೋರಿಕೆ ಪ್ರಕರಣ ಸಂಬಂಧ ಸ್ಥಳೀಯ ನ್ಯಾಯವಾದಿ ಮತ್ತು ಬಿಜೆಪಿ ರಾಷ್ಟೀಯ ಕಾರ್ಯಕಾರಿಣಿ ಸದಸ್ಯ ಪಿ. ಪಿ ಹೆಗ್ಡೆ ಹಾಗೂ ಅಖಿಲ ಭಾರತೀಯ ಕಾರ್ಮಿಕ ಸೇನೆ ಜಿಲ್ಲಾಧ್ಯಕ್ಷ ಸುದತ್ತ ಜೈನ್ ವಿರುದ್ಧ ಬಂದರ್ ಠಾಣೆ ಪೊಲೀಸರು ಪ್ರಕರಣ ದಾಖಲಾಗಿದೆ. ಇಬ್ಬರಿಗೂ ಬಿಜೆಪಿ ಸೋಡಾಚೀಟಿ ನೀಡಿರುವುದನ್ನು ಇಲ್ಲಿ ಸ್ಮರಿಸಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+