ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತಿಭ್ರಮಣೆಯಾಗಿದೆ: ಪ್ರಕಾಶ್ ರೈ
ಮಂಗಳೂರು ಏಪ್ರಿಲ್ 28: ಪ್ರಧಾನಿ ನರೇಂದ್ರ ಮೋದಿಯವರಿಗೆ ಮತಿ ಭ್ರಮಣೆಯಾಗಿದೆ. ಟ್ವೀಟ್ ಮಾಡಿ ನಾನು ಕನ್ನಡಿಗ ಅನ್ನುತ್ತಾರೆ. ಆದರೆ ಗುಜರಾತ್‌ನಲ್ಲಿ ನಾನು ಗುಜರಾತಿ ಎನ್ನುತ್ತಾರೆ. ಮೋದಿ ಮಹಾನ್ ಸುಳ್ಳುಗಾರ ಎನ್ನುವುದು ಇದರಲ್ಲೇ ಗೊತ್ತಾಗುತ್ತದೆ ಎಂದು ನಟ ಪ್ರಕಾಶ್ ರೈ ಟೀಕಿಸಿದ್ದಾರೆ.
ಬಂಟ್ವಾಳದ ಬಿ.ಸಿ ರೋಡ್ ನಲ್ಲಿ ಆಯೋಜಿಸಿದ್ದ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿದ ಪ್ರಕಾಶ್ ರೈ, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಸಂಘಪರಿವಾರದ ವಿರುದ್ಧ ವಾಗ್ದಾಳಿ ಮುಂದುವರಿಸಿದರು.
ಮೋದಿಯವರು ಕನ್ನಡ ಕಲಿಯುತ್ತೇನೆ ಎಂದು ಟ್ವೀಟ್ಗೆ ಪ್ರತಿಕ್ರೀಯಿಸಿದ ಪ್ರಕಾಶ್ ರೈ, ನಮ್ಮ ಕನ್ನಡ ಶಾಲೆಗಳಲ್ಲಿ ನಿಮಗೆ ಅವಕಾಶ ಇಲ್ಲ. ವಯಸ್ಕರ ಶಿಕ್ಷಣ ಕೇಂದ್ರದಲ್ಲಿ ಬಂದು ಕನ್ನಡ ಕಲಿಯಬಹುದು ಎಂದು ವ್ಯಂಗ್ಯವಾಡಿದರು. ಅಲ್ಲದೇ, ನೀವು 2019ರಲ್ಲಿ ನೀವು ನಿರುದ್ಯೋಗಿಯಾಗುತ್ತೀರಿ. ತೀಟೆ ತೀರಿಸಿಕೊಳ್ಳಲು ಕರ್ನಾಟಕಕ್ಕೆ ಬರಬೇಕು ಅಷ್ಟೆ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್, ಸಿಪಿಎಂ ಹಾಗೂ ಇತರೆ ಪಕ್ಷಗಳಿಗೆ ಇರುವಂತೆ ಬಿಜೆಪಿಗೆ ಯಾವುದೇ ಸಿದ್ಧಾಂತವಿಲ್ಲ. ಬಿಜೆಪಿ ಹಿಂದೆ ಆರ್‌ಎಸ್‌ಎಸ್ ಇದೆ. ಆರ್‌ಎಸ್‌ಎಸ್ನ ಅಜೆಂಡಾ ಮತ್ತು ಸಿದ್ಧಾಂತವನ್ನೇ ತನ್ನ ಸಿದ್ಧಾಂತವೆಂದು ಹೇಳಿ ತಿರುಗಾಡುತ್ತಿರುವ ಬಿಜೆಪಿ ಬೆದರುಬೊಂಬೆ ಪಕ್ಷ ಎಂದು ಅವರು ಟೀಕಿಸಿದರು.












Click it and Unblock the Notifications