ಪೆರಾಡಿಯಲ್ಲಿ ತಂದೆಯಿಂದಲೇ ಅತ್ಯಾಚಾರ: ಅಪ್ರಾಪ್ತ ಮಗಳು ಗರ್ಭಿಣಿ, ತಾಯಿ ಸಾವು
ಮಂಗಳೂರು, ಆಗಸ್ಟ್.05: ತಂದೆಯೇ ಮಗಳ ಮೇಲೆ ಅತ್ಯಾಚಾರ ನಡೆಸಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಬೆಳ್ತಂಗಡಿ ತಾಲೂಕಿನ ವೇಣೂರು ಬಳಿಯ ಪೆರಾಡಿಯಲ್ಲಿ ಈ ಘಟನೆ ಸಂಭವಿಸಿದೆ.
ಗಂಡ ಮಗಳ ಮೇಲೆ ಅತ್ಯಾಚಾರ ನಡೆಸುತ್ತಿರುವ ವಿಚಾರ ತಿಳಿದ ಹೆಂಡತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡು ದಿನಗಳ ಹಿಂದೆ ತಾಯಿ ಸಾವಿಗೆ ಶರಣಾಗಿರುವುದು ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ತಂದೆ ನಡೆಸಿದ ನಿರಂತರ ಅತ್ಯಾಚಾರದಿಂದ ಅಪ್ರಾಪ್ತ ಮಗಳು ಈಗ ಗರ್ಭಿಣಿಯಾಗಿದ್ದು, ಗರ್ಭಿಣಿ ಪುತ್ರಿ 9ನೇ ತರಗತಿ ಓದುತ್ತಿರುವುದು ತಿಳಿದು ಬಂದಿದೆ. ಆರೋಪಿ ತಂದೆ ಸದ್ಯ ತಲೆಮರೆಸಿಕೊಂಡಿದ್ದಾನೆ.

ಅತ್ಯಾಚಾರ ಆರೋಪದಡಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications