Get Updates
Get notified of breaking news, exclusive insights, and must-see stories!

ಎಂಡೋಸಲ್ಫಾನ್ ಸಂತ್ರಸ್ತ ಬಾಲಕನೋರ್ವ ಮೃತ

ಮಂಗಳೂರು, ಆಗಸ್ಟ್ 18: ಎಂಡೋಸಲ್ಫಾನ್ ಸಂತ್ರಸ್ತ ಬಾಲಕನೋರ್ವ ಮೃತಪಟ್ಟ ಘಟನೆ ಕಾಸರಗೋಡು ನೀರ್ಚಾಲುನಲ್ಲಿ ಎಂಬಲ್ಲಿ ನಡೆದಿದೆ. ಮೃತಪಟ್ಟ ಬಾಲಕನನ್ನು ಅಹ್ಮದ್ ಹಫೀಝ್(8) ಎಂದು ಗುರುತಿಸಲಾಗಿದ್ದೆ. ಹಫೀಝ್ ಕಳೆದ ನಾಲ್ಕೂವರೆ ವರ್ಷಗಳಿಂದ ಈ ರೋಗಕ್ಕೆ ತುತ್ತಾಗಿದ್ದ ಎನ್ನಲಾಗಿದೆ.

ಹಫೀಝ್ ತಲೆಯ ರಕ್ತನಾಳದಲ್ಲಿ ಅಡಚಣೆಯಿರುವುದು ವೈದ್ಯಕೀಯ ತಪಾಸಣೆಯ ವೇಳೆ ತಿಳಿದುಬಂದಿತ್ತು, ಇದರ ನಿವಾರಣೆಗಾಗಿ ನಾಲ್ಕು ಬಾರಿ ಶಸ್ತ್ರಚಿಕಿತ್ಸೆ ನಡೆಸಿದರೂ ಬಾಲಕ ಸಂಪೂರ್ಣವಾಗಿ ಗುಣಮುಖನಾಗಿರಲಿಲ್ಲ.

Endosulfan victim of age 8 breathes his last at Kasargod

ಬಾಲಕನ ಚಿಕಿತ್ಸೆಗಾಗಿ ಹೆತ್ತವರು ಭಾರೀ ಮೊತ್ತ ವ್ಯಯಿಸಿದ್ದು ಅಲ್ಲದೆ ವಿವಿಧ ಸಂಘ-ಸಂಸ್ಥೆಗಳು ನೆರವು ನೀಡಿದ್ದವು. ಇತ್ತೀಚೆಗೆ ಮುಳ್ಳೇರಿಯ-ಬದಿಯಡ್ಕ-ಸ್ವರ್ಗ ರೂಟ್ ನಲ್ಲಿ ಹೊಸದಾಗಿ ಸಂಚಾರ ಆರಂಭಿಸಿದ ನವದುರ್ಗಾ ಬಸ್‌ನ ಮೊದಲ ದಿನದ ಸಂಗ್ರಹ ಹಾಗೂ ಕಾಞಂಗಾಡ್-ಪಾಣತ್ತೂರು ರೂಟ್‌ನಲ್ಲಿ ಸಂಚರಿಸುವ ಮೂಕಾಂಬಿಕಾ ಬಸ್‌ನ ಒಂದು ದಿನದ ಕಲೆಕ್ಷನ್ ಹಣವನ್ನು ಈ ಬಾಲಕನಿಗೆ ಚಿಕಿತ್ಸೆಗಾಗಿ ನೀಡಲಾಗಿತ್ತು.

ಜುಲೈಯಲ್ಲಿ ನಡೆದ ಎಂಡೋಸಲ್ಫಾನ್ ಶಿಬಿರದಲ್ಲಿ ಬಾಲಕನನ್ನು ತಪಾಸಣೆ ನಡೆಸಲಾಗಿತ್ತು. ಬಳಿಕ ಬದಿಯಡ್ಕ ಪಂಚಾಯತ್‌ನ ಎರಡನೆ ವಾರ್ಡ್ ಎಂಡೋಸಲ್ಫಾನ್ ಸಂತ್ರಸ್ತರ ಪಟ್ಟಿಯಲ್ಲಿ ಅಹ್ಮದ್ ಹಫೀಝ್ ಹೆಸರನ್ನು ಸೇರ್ಪಡೆಗೊಳಿಸಲಾಗಿತ್ತು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+