ಕರಾವಳಿಯಲ್ಲಿ ಮತ್ತೆ ಗರಿಗೆದರಿದ ಶೈಕ್ಷಣಿಕ ಪ್ರವಾಸೋದ್ಯಮ

ಮಂಗಳೂರು, ಮೇ 19: ರಾಜ್ಯದಲ್ಲಿ ಎಸ್ ಎಸ್ ಎಲ್ ಸಿ , ಪಿಯುಸಿ, ಸಿಬಿಎಸ್‌ಇ ಪರೀಕ್ಷೆಗಳು ಮುಗಿದು ಫಲಿತಾಂಶ ಪ್ರಕಟವಾಗಿದೆ. ಮಕ್ಕಳು ಒಂದೆಡೆ ರಜಾ ಕಾಲದ ಮಜಾ ಅನುಭವಿಸುತ್ತಿದ್ದರೆ, ಇನ್ನೊಂದೆಡೆ ಭವಿಷ್ಯದ ಬಗ್ಗೆ ಕಲ್ಪನೆಗಳು ಮನದಲ್ಲಿ ಮೂಡುತ್ತಿವೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಇದೀಗ ಮುಂದಿನ ಶಿಕ್ಷಣದ ಬಗ್ಗೆ , ಸೇರಲಿಚ್ಛಿಸುವ ಕೋರ್ಸ್ ಗಳ ಬಗ್ಗೆ ಗಂಭೀರ ಚರ್ಚೆಗಳು ಪಾಲಕರು ಮತ್ತು ಮಕ್ಕಳ ನಡುವೆ ಆರಂಭವಾಗಿವೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳತ್ತ ಪಾಲಕರು ಮುಖ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಪ್ರವಾಸೋದ್ಯಮ ಆರಂಭಗೊಂಡಿದೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ರಾಜ್ಯದಲ್ಲಿ ಉತ್ತಮ ಶಿಕ್ಷಣಕ್ಕೆ ಹಾಗೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರಸಿದ್ಧಿ ಪಡೆದಿವೆ. ಈ ಹಿನ್ನೆಲೆಯಲ್ಲಿ ಹೆತ್ತವರು ಮಕ್ಕಳಿಗೆ ಇಲ್ಲಿ ಶಿಕ್ಷಣ ಕೊಡಿಸಲು ಮುಂದಾಗುತ್ತಿದ್ದಾರೆ.

Edu tourism boom in coastal districts

ಈ ಭಾಗದ ಶಾಲೆ-ಕಾಲೇಜುಗಳಲ್ಲಿ ಮಕ್ಕಳ ದಾಖಲಾತಿ ಪ್ರಕ್ರಿಯೆ ಆರಂಭವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಮಾತ್ರವಲ್ಲದೆ, ಪಕ್ಕದ ಕೇರಳ ರಾಜ್ಯದಿಂದಲೂ ಇಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿದೆ. ಇದು ಜಿಲ್ಲೆಯ ಒಟ್ಟು ಪ್ರವಾಸೋದ್ಯಮಕ್ಕೆ ಚುರುಕು ನೀಡಿದೆ. ಇನ್ನೂ ಒಂದು ತಿಂಗಳ ಕಾಲ ಈ ಶೈಕ್ಷಣಿಕ ಪ್ರವಾಸೋದ್ಯಮ ಮುಂದುವರಿಯಲಿದೆ.

ಮಂಗಳೂರಿನ ಎಕ್ಸ್‌ಪರ್ಟ್, ಶ್ರೀನಿವಾಸ್ ಕಾಲೇಜು, ಸಹ್ಯಾದ್ರಿ ಕಾಲೇಜು, ಬೋಸ್ಕೋಸ್, ವಿಕಾಸ್ ಪ.ಪೂ., ಪೊದಾರ್, ಸಂತ ಅಲೋಶಿಯಸ್, ಸಂತ ಆಗ್ನೆಸ್, ಮೂಡುಬಿದಿರೆಯ ಆಳ್ವಾಸ್, ಉಜಿರೆ ಎಸ್‌ಡಿಎಂ ಕಾಲೇಜುಗಳಿಗೆ, ಉಡುಪಿಯ ನಿಟ್ಟೆ, ಎಂಜಿಎಂ, ಪೂರ್ಣಪ್ರಜ್ಞಾ ಕಾಲೇಜು, ವೈಕುಂಠ ಬಾಳಿಗ ಕಾನೂನು ಕಾಲೇಜು, ಕುಂದಾಪುರದ ಭಂಡಾರ್‌ಕಾರ್ಸ್‌ ಕಾಲೇಜು, ಎಕ್ಸಲೆಂಟ್ ಕಾಲೇಜು ಸೇರಿದಂತೆ ಹಲವು ಶಿಕ್ಷಣ ಸಂಸ್ಥೆಗಳಿಗೆ ರಾಜ್ಯದ ಇತರ ಜಿಲ್ಲೆಗಳಿಂದ ಹಾಗೂ ರಾಜ್ಯಗಳಿಂದ ಜನರು ಭೇಟಿ ನೀಡುತ್ತಿದ್ದಾರೆ.

ಮಂಗಳೂರು ಸೇರಿದಂತೆ ಉಡುಪಿ ಲಾಡ್ಜ್-ಹೋಟೆಲ್ ರೂಮ್ ಫುಲ್ ಆಗಿವೆ. ಶಾಲೆ-ಕಾಲೇಜುಗಳನ್ನು ಮೊದಲೇ ಗೊತ್ತು ಮಾಡಿ ಅಲ್ಲಿಗೆ ಮಕ್ಕಳನ್ನು ದಾಖಲಾತಿ ಮಾಡಿಸಲು ಹೆತ್ತವರು ಬರುತ್ತಿದ್ದಾರೆ. ಹೀಗೆ ಬರುವವರು ಹೋಟೆಲ್‌ಗಳು, ಲಾಡ್ಜ್‌ಗಳಲ್ಲಿ ವಾಸ ಮಾಡುತ್ತಾರೆ. ಇದರಿಂದಾಗಿ ನಗರದ ಲಾಡ್ಜ್-ಹೋಟೆಲ್‌ಗಳ ಕೊಠಡಿಗಳು ಬಹುತೇಕ ಭರ್ತಿಯಾಗಿವೆ.

"ನಗರದ ಲಾಡ್ಜ್ ಗಳನ್ನು ಹಲವರು 3 ರಿಂದ ವಾರದ ಅವಧಿಗೆ ಬುಕ್ ಮಾಡಿದ್ದಾರೆ. ತಮ್ಮ ಉದ್ದೇಶಿತ ಕೆಲಸ ಮುಗಿದ ಬಳಿಕ ಬೀಚ್-ದೇವಸ್ಥಾನಗಳಿಗೆ ತೆರಳಿ ಇಲ್ಲಿಂದ ಹೊರಡುತ್ತಾರೆ. ಶಾಲೆಗಳು ಆರಂಭವಾಗುವಾಗ ಮತ್ತೆ ಇಲ್ಲಿಗೆ ಬರುತ್ತಾರೆ" ಎನ್ನುತ್ತಾರೆ ಲಾಡ್ಜ್ ನ ಸಿಬ್ಬಂದಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+