Get Updates
Get notified of breaking news, exclusive insights, and must-see stories!

E Khata: ಸ್ವತ್ತಿನ ಫೋಟೋ ಮತ್ತು ಮೊಬೈಲ್ ನೆಟ್‌ವರ್ಕ್ ತಂದ ಸಮಸ್ಯೆ

ಮಂಗಳೂರು, ಮಾರ್ಚ್‌ 22: ಕರ್ನಾಟಕ ಸರ್ಕಾರ ಆರಂಭಿಸಿರುವ ಇ-ಖಾತಾ ಅಭಿಯಾನ ಹಲವು ಸಮಸ್ಯೆಗಳನ್ನು ತಂದಿದೆ. ಇ-ಖಾತಾ ಇಲ್ಲದಿದ್ದರೆ ಹೊಸ ಆಸ್ತಿ ಖರೀದಿ ಅಥವಾ ಮಾರಾಟಕ್ಕೆ ಅನುಮತಿ ಇಲ್ಲ ಎಂಬ ನಿಯಮವನ್ನು ರೂಪಿಸಿದೆ. ಇದರಿಂದಾಗಿ ಆಸ್ತಿಗಳ ಖರೀದಿ/ ಮಾರಾಟ ಕಡಿಮೆಯಾಗಿದ್ದು, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ವಾರ್ಷಿಕ ಆದಾಯ ಸಂಗ್ರಹಣೆಗೂ ಪೆಟ್ಟು ಬಿದ್ದಿದೆ. ಇ-ಖಾತಾ ಮಾಡಿಸುವಾಗ ಹಲವು ಸಮಸ್ಯೆಗಳು ಎದುರಾಗುತ್ತಿವೆ.

ಇ-ಖಾತಾಗೆ ಅರ್ಜಿ ಸಲ್ಲಿಕೆ ಮಾಡುವಾಗ ಮಾಲೀಕರ ಫೋಟೋ ಮತ್ತು ಸ್ವತ್ತಿನ ಫೋಟೋ ಮತ್ತು ಮಾಲೀಕರ ಗುರುತಿನ ದಾಖಲೆ ಸೇರಿದಂತೆ ವಿವಿಧ ದಾಖಲೆಗಳನ್ನು ಸಲ್ಲಿಸಬೇಕು. ಆದರೆ ಸ್ವತ್ತಿನ ಫೋಟೋ ತೆಗೆಯುವ ವಿಚಾರದಲ್ಲಿ ಈಗ ಸಮಸ್ಯೆಗಳು ಉಂಟಾಗಿದೆ. ಈ ಕುರಿತು ಕಂದಾಯ ಸಚಿವರ ಗಮನ ಸೆಳೆಯಲಾಗಿದೆ.

E-khata Application And Property Photo Issue Letter To Minister

ಈ ಕುರಿತು ಡಿ. ವೇದವ್ಯಾಸ ಕಾಮತ್‌ ಶಾಸಕರು, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಕಂದಾಯ ಸಚಿವ ಕೃಷ್ಣ ಬೈರೇಗೌಡರಿಗೆ ಪತ್ರವನ್ನು ಬರೆದಿದ್ದಾರೆ. ರಾಜ್ಯ ಸರ್ಕಾರವು ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯ ಮಾಡಿದ ನಂತರ ಮಂಗಳೂರು ನಗರ ವ್ಯಾಪ್ತಿಯಲ್ಲಿ ಅವ್ಯವಸ್ಥೆಯ ಆಗರದಿಂದಾಗಿ ಸಾರ್ವಜನಿಕರು ತೀವ್ರ ಸಮಸ್ಯೆ ಅನುಭವಿಸುವಂತಾಗಿದ್ದು ಕೂಡಲೇ ಇದನ್ನು ಬಗೆಹರಿಸುವಂತೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ ಎಂದು ಹೇಳಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಸಮರ್ಪಕವಾಗಿ ಪೂರ್ವಸಿದ್ಧತೆ ಮಾಡದೇ ಆಸ್ತಿ ನೋಂದಣಿಗೆ ಇ-ಖಾತಾ ಕಡ್ಡಾಯಗೊಳಿಸಿರುವುದೇ ಈ ಎಲ್ಲಾ ಸಮಸ್ಯೆಗೆ ಕಾರಣವೆಂದು ಖರೀದಿದಾರರು, ಮಾರಾಟಗಾರರು ಆರೋಪಿಸುತ್ತಿದ್ದು ನೋಂದಣಿಗಾಗಿ ದಿನನಿತ್ಯ ಕಛೇರಿಗಳಿಗೆ ಅಲೆದಾಡುವಂತಾಗಿದ್ದು ಇ-ಖಾತಾ ಮಾಡಿಸಲು ಜನರು ಪರದಾಡುತ್ತಿರುವ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ ಎಂದು ತಿಳಿಸಿದ್ದಾರೆ.

ಮಾರಾಟ ಹಾಗೂ ಖರೀದಿಯ ಸಮಸ್ಯೆ ಮಾತ್ರವಲ್ಲದೇ, ಆಸ್ತಿಗಳ ನಕ್ಷೆಯಲ್ಲೂ ದೋಷವುಂಟಾಗಿದೆ. ಯಾವುದೋ ವಾರ್ಡ್ ನಂಬರ್ ನಮೂದಿಸಿದರೆ ಇನ್ಯಾವುದೋ ವಾರ್ಡ್ ನಂಬರ್ ನಮೂದಾಗುತ್ತಿದೆ. ನನ್ನ ಕ್ಷೇತ್ರದಲ್ಲೂ ಇಂತಹ ವ್ಯತ್ಯಾಸಗಳು ಕಂಡು ಬಂದಿದ್ದು ಸಾರ್ವಜನಿಕರು ವಿನಾಕಾರಣ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಕೂಡಲೇ ನಗರದಲ್ಲಿ ಉಂಟಾಗಿರುವ ಇ-ತಂತ್ರಾಂಶದ ಸಮಸ್ಯೆಯನ್ನು ಬಗೆಹರಿಸುವಂತೆ ಆಗ್ರಹಿಸಿದ್ದೇನೆ ಎಂದು ಶಾಸಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ.

ಶಾಸಕರ ಪತ್ರದ ವಿವರ: ಇ-ಖಾತಾ ತಂದ ನಂತರ ಆನ್‌ಲೈನ್‌ ವ್ಯವಸ್ಥೆಯಲ್ಲಿ ಪ್ರಸ್ತುತ ಆನ್‌ಲೈನ್ ವ್ಯವಸ್ಥೆಯಲ್ಲಿ ಆಸ್ತಿ ಮಾರಾಟ ಅಥವಾ ಕ್ರಯಸಾಧನ ಮಾಡಲು ಆಗುತ್ತಿಲ್ಲ. ಇದರಿಂದ ಹಕ್ಕಿನ ಬದಲಾವಣೆ ಮಾಡಲು ಅಥವಾ ಕ್ರಯ ಮಾಡಲು ಆಗುತ್ತಿಲ್ಲ. ಇದೇ ರೀತಿ ಮೂಲ ಹಕ್ಕಿನ ಕ್ರಯ ಸಾಧನ ಪತ್ರ, ಹಕ್ಕು ಬಿಡುಗಡೆ ಪತ್ರ, ನಗರ ಪ್ರದೇಶಗಳ ಕೃಷಿ ಭೂಮಿಯ ಕ್ರಯ ಸಾಧನ ಪತ್ರ ಹೀಗೆ ಇ-ಖಾತಾ ದಾಖಲೆಗಳನ್ನು ಮಾಡುವ ಪ್ರಾಥಮಿಕ ಹಂತದಲ್ಲಿ ಮೊಬೈಲ್ ಮೂಲಕ ಆಸ್ತಿಯ ಸ್ಥಳಸೂಚಿ ಸೆರೆಹಿಡಿಯುವ ಸಮಯದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಅಥವಾ ತಾಂತ್ರಿಕ ಸಮಸ್ಯೆ ಉಂಟಾದಲ್ಲಿ ಅದನ್ನು ಬಗೆಹರಿಸಲು ಯಾವುದೇ ಅವಕಾಶವಿರುವುದಿಲ್ಲ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Take a Poll

ನೋಂದಣಿ ಮಾಡುವಾಗ ನೋಂದಣಿ ಶುಲ್ಕ ಮತ್ತು ಮುದ್ರಾಂಕ ಶುಲ್ಕ ಕರ್ನಾಟಕ ರಾಜ್ಯ ನೋಂದಣಿ ಪತ್ರದಲ್ಲಿರುವ ಸ್ಥಳಸೂಚಿ ವಾರ್ಡ್/ ಬ್ಲಾಕ್/ ಸ್ಟ್ರೀಟ್ ಆಧಾರದಲ್ಲಿ ಶುಲ್ಕವು ನಿಗದಿಯಾಗುತ್ತದೆ. ಒಂದು ವೇಳೆ ಸರಿಯಾದ ನಿವೇಶನದ ಸ್ಥಳ ಸೂಚಿ ನಿಗದಿಯಾಗಿದ್ದರೂ, ಸಾಫ್ಟ್‌ವೇರ್‌ ನ್ಯೂನ್ಯತೆಯಿಂದ ಸ್ಥಳಸೂಚಿ ರಸ್ತೆಯ ನಂಬರ್ ಇನ್ಯೂವುದೋ ಬೇರೆ ವಾರ್ಡ್ ರಸ್ತೆಯ ನಂಬ‌ರ್‌ ದಾಖಲಾಗಿ, ಆಸ್ತಿಯು ಸಬ್‌ರಿಜಿಸ್ಟ್ರೇಶನ ಕಛೇರಿಯಲ್ಲಿ ನೊಂದಣಿಯಾದ ನಂತರದ ಪ್ರಕಾರ ಇ-ಖಾತಾ ನೊಂದಣಿ ಸಂಬಂಧಿಸಿದ ಇಲಾಖೆಯವರು ಇ-ಖಾತೆ ಮಾಡುವ ಸಂದರ್ಭದಲ್ಲಿ ಆಸ್ತಿಯ ಸ್ಥಳಸೂಚಿ ಸೆರೆಹಿಡಿಯುವ ಸಮಯದಲ್ಲಿ ಬೇರೆ ರಸ್ತೆ/ ವಾರ್ಡ್‌ನ ಹೆಸರು ನಮೂದಾಗುತ್ತಿದ್ದು, ಇದರಿಂದ ಸಂಬಂಧಿಸಿದ ನಗರ ಪಾಲಿಕೆಯಲ್ಲಿ ಇ-ಖಾತಾ ಪಡೆಯಲು ತೊಂದರೆಯಾಗುತ್ತಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಅಥವಾ ತಿದ್ದುಪಡಿ ಮಾಡಲು ವಿನಾ ಕಾರಣ ಸಾರ್ವಜನಿಕರು ತುಂಬಾ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇಂತಹ ಇ-ಖಾತಾಯಿಂದ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಸಾರ್ವಜನಿಕರಿಗೆ ತುರ್ತಾಗಿ ಇ-ತಂತ್ರಾಂಶದ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಈ ಮೂಲಕ ತಮ್ಮಲ್ಲಿ ಕೋರುತ್ತೇನೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+