ಮಂಗಳೂರು: ಕೋಟ್ಯಾಂತರ ರೂ. ಮೌಲ್ಯದ ಅಕ್ರಮ ಚಿನ್ನ ವಶ, 4 ಬಂಧನ
ಮಂಗಳೂರು, ಫೆಬ್ರವರಿ 12: ಮಂಗಳೂರಿನ ಕಸ್ಟಮ್ಸ್ ವಿಭಾಗದ ಡಿ.ಆರ್.ಐ ಅಧಿಕಾರಿಗಳು ಮಹತ್ವದ ಕಾರ್ಯಚರಣೆ ನಡೆಸಿ ಭಾರೀ ಪ್ರಮಾಣದ ಅಕ್ರಮ ಚಿನ್ನ ಸಾಗಾಟ ಯತ್ನವನ್ನು ವಿಫಲಗೊಳಿಸಿದ್ದಾರೆ.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ 4 ಮಂದಿ ಆರೋಪಿಗಳನ್ನು ಬಂಧಿಸಿ ಬರೋಬ್ಬರಿ 4 ಕೆಜಿ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
ಮಂಗಳೂರು ವಿಮಾನದ ಮೂಲಕ ಭಾರೀ ಚಿನ್ನದ ಸ್ಮಗ್ಲಿಂಗ್ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಕಸ್ಟಮ್ಸ್ ವಿಭಾಗದ ಡಿ.ಆರ್.ಐ ಅಧಿಕಾರಿಗಳಿಗೆ ಬಂದು ತಲುಪಿತ್ತು. ಹೀಗಾಗಿ ಅಧಿಕಾರಿಗಳು ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುವ ಪ್ರಯಾಣಿಕರ ಚಲನವಲನದ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.

ಇದೇ ಸಂದರ್ಭದಲ್ಲಿ ದುಬೈನಿಂದ ಸ್ಪೈಸ್ ಜೆಟ್ ವಿಮಾನದ ಮೂಲಕ ಮಂಗಳೂರಿಗೆ ಬಂದಿಳಿದ ಕಾಸರಗೋಡು ಮೂಲದ ಹಸನ್ ಹಾಗೂ ಸಮೀರಾ ದಂಪತಿಯ ವರ್ತನೆಯ ಬಗ್ಗೆ ಸಂದೇಹ ವ್ಯಕ್ತಪಡಿಸಿದ ಡಿ.ಆರ್.ಐ ಅಧಿಕಾರಿಗಳು ಅವರನ್ನು ತನಿಖೆಗೆ ಒಳಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಹಸನ್ ಹಾಗೂ ಸಮೀರಾ ತಮ್ಮಮ ಸೊಂಟದಲ್ಲಿ ಬೆಲ್ಟ್ ನಂತಹ ವಸ್ತುವನ್ನು ಸುತ್ತಿಕೊಂಡಿರುವುದು ಅಧಿಕಾರಿಗಳ ಕಣ್ಣಿಗೆ ಬಿದ್ದಿದೆ. ಈ ಬೆಲ್ಟನ್ನು ತೆಗೆದು ಪರಿಶೀಲನೆ ನಡೆಸಿದಾಗ ಅದರಲ್ಲಿ ಕಂದು ಬಣ್ಣದ ರಬ್ಬರ್ ನಂತಹ ವಸ್ತು ಇರುವುದು ಕಂಡು ಬಂದಿದೆ. ಈ ಕುರಿತು ಅನುಮಾನ ವ್ಯಕ್ತಪಡಿಸಿದ ಅಧಿಕಾರಿಗಳು ಆ ಕಂದು ಬಣ್ಣದ ವಸ್ತುವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಚಿನ್ನವನ್ನು ಮಿಶ್ರಣ ಮಾಡಿರುವ ಲೇಪ ಪತ್ತೆಯಾಗಿದೆ .

ಈ ಹಿನ್ನೆಲೆಯಲ್ಲಿ ಹಸನ್ ಹಾಗೂ ಸಮೀರಾ ಅವರನ್ನು ಬಂಧಿಸಿ ಅವರಿಂದ 2 ಕೆ.ಜಿ ಚಿನ್ನವನ್ನು ಡಿ.ಆರ್.ಐ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ . ವಶಪಡಿಸಿ ಕೊಂಡ ಚಿನ್ನದ ಒಟ್ಟು ಮೌಲ್ಯ 66 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ರೈಲ್ವೆ ಮೂಲಕ ಅಕ್ರಮ ಚಿನ್ನ ಸಾಗಾಟವಾಗುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದ ಡಿ.ಆರ್.ಐ ಅಧಿಕಾರಿಗಳ ತಂಡ ಮಂಗಳೂರು ಮೂಲಕ ಹಾದು ಹೋಗುವ ರೈಲುಗಳ ಪ್ರಯಾಣಿಕರ ಮೇಲೆ ನಿಗಾ ವಹಿಸಿತ್ತು. ಮಂಗಳೂರು ಮೂಲಕ ಹಾದು ಹೋಗುವ ಮರು ಸಾಗರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಕರನ್ನು ಅಧಿಕಾರಿಗಳು ಪರಿಶೀಲನೆಗೆ ಒಳಪಡಿಸಿದ್ದಾರೆ.
ಈ ಸಂದರ್ಭದಲ್ಲಿ ಕೇರಳದ ಕೋಯಿಕೋಡ್ ಗೆ ಪ್ರಯಾಣಿಸುತ್ತಿದ್ದ ಮೊಯುದ್ದೀನ್ ಹಾಗೂ ಶಂಶುದ್ದೀನ್ ಎಂಬವರಿಂದ 16 ಚಿನ್ನದ ಬಿಸ್ಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಚಿನ್ನದ ಬಿಸ್ಕೆಟ್ ಗಳನ್ನು ಈ ಇಬ್ಬರು ದುಬೈನಿಂದ ನೇಪಾಳದ ಮೂಲಕ ಭಾರತಕ್ಕೆ ತಂದಿದ್ದರು ಎಂದು ಹೇಳಲಾಗಿದೆ.

ಮುಂಬಯಿಯ ಪನ್ವೇಲ್ ನಲ್ಲಿ ಮರು ಸಾಗರ್ ಎಕ್ಸ್‌ಪ್ರೆಸ್ ರೈಲು ಏರಿದ ಈ ಇಬ್ಬರು ಕೇರಳದ ಕೋಯಿಕೋಡ್ ಗೆ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದರು ಎಂದು ಹೇಳಲಾಗಿದೆ. ಈ ಇಬ್ಬರಿಂದ 1.8 ಕೆಜಿ ತೂಕದ ಚಿನ್ನ ವಶಪಡಿಸಿಕೊಳ್ಳಲಾಗಿದ್ದು , ವಶಪಡಿಸಿಕೊಂಡ ಚಿನ್ನದ ಒಟ್ಟು ಮೌಲ್ಯ 56 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ 4 ಮಂದಿ ಆರೋಪಿಗಳನ್ನು ಡಿ.ಆರ್.ಐ ಅಧಿಕಾರಿಗಳು ಬಂಧಿಸಿ ಒಟ್ಟು 1 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಅಕ್ರಮ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.
-
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Heat Wave Karnataka: ಕರಾವಳಿ ಬಿಸಿ ಕಾವಲಿಯ ಮೇಲೆ ಮಾಲಿನ್ಯದ ಥಡ್ಕಾ: ರಾಜಾರಾಂ ತಲ್ಲೂರು ಬರಹ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
Gold Price Update: ಆಭರಣಪ್ರಿಯರೇ ಗಮನಿಸಿ, ಇಂದು ಚಿನ್ನದ ಬೆಲೆ ಏರಿಕೆ- ಬೆಳ್ಳಿ ಸ್ಥಿರ, ಮಾರುಕಟ್ಟೆ ದರ ವಿವರ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications