• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮತಯಾಚನೆಗೂ ಷರತ್ತು ವಿಧಿಸಿ ಮನೆಮುಂದೆ ಬ್ಯಾನರ್ ಹಾಕಿದ ಸುಳ್ಯದ ವೈದ್ಯ

|

ಮಂಗಳೂರು ಮಾರ್ಚ್ 30: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮತದಾರ ರೋಬ್ಬರು ಮತಯಾಚನೆಗೆ ಬರುವವರಿಗೆ ಕೆಲವು ಷರತ್ತು ಗಳನ್ನು ವಿಧಿಸಿದ ಅಪರೂಪದ ಪ್ರಸಂಗ ಸುಳ್ಯದಲ್ಲಿ ಬೆಳಕಿಗೆ ಬಂದಿದೆ. ತಾವು ಹೇಳುವ ಷರತ್ತು ಗಳಿಗೆ ಒಪ್ಪುವುದಾದರೆ ಮಾತ್ರ ಮನೆ ಅಂಗಳ ಪ್ರವೇಶಿಸಿ ಎಂದು ಬರೆಯಲಾದ ಬ್ಯಾನರ್ ಒಂದನ್ನು ಸುಳ್ಯದ ವೈದ್ಯರೊಬ್ಬರು ತಮ್ಮ ಮನೆ ಮುಂದೆ ನೇತು ಹಾಕಿದ್ದಾರೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಸುಳ್ಯದ ಖ್ಯಾತ ಮಕ್ಕಳ ತಜ್ಞ ಡಾ ಬಿ ಎನ್ ಶ್ರೀಕೃಷ್ಣ ತಮ್ಮ ನಿವಾಸದ ಮುಂದೆ 'ನಾನು ಹೇಳುವ ಷರತ್ತುಗಳಿಗೆ ನೀವು ಒಪ್ಪುವುದಾದರೆ ಮಾತ್ರ ಮನೆಗೆ ಬಂದು ಮತ ಕೇಳಿ' . ಇಲ್ಲದಿದ್ದರೆ ಬರುವ ಅಗತ್ಯ ವಿಲ್ಲ ಎಂದು ಹೇಳುವಂತೆ ಬ್ಯಾನರ್ ನೇತುಹಾಕಿದ್ದಾರೆ. ಡಾ ಶ್ರೀ ಕೃಷ್ಣ ವರ ಬ್ಯಾನರ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ದಕ್ಷಿಣ ಕನ್ನಡ 13, ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ 12 ಅಭ್ಯರ್ಥಿಗಳು ಕಣದಲ್ಲಿ

ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಸಾರ್ವಜನಿಕವಾಗಿಯೇ ತನ್ನ ನಿಲುವನ್ನು ಬಹಿರಂಗಪಡಿಸಿದ್ದ ಡಾ ಸ್ರೀ ಕೃಷ್ಣ , ಈ ಬಾರಿ ಮನೆಯ ಮುಂದೆ ನೇತು ಹಾಕಿರುವ ಬ್ಯಾನರ್ ಮೂಲಕ ಮತ್ತೆ ಗಮನ ಸೆಳೆದಿದ್ದಾರೆ.

ಮತ ಕೇಳಲು ಬರುವ ರಾಜಕೀಯ ಪಕ್ಷಗಳ ಅಭ್ಯರ್ಥಿ ಅಥವಾ ಪಕ್ಷದ ಕಾರ್ಯಕರ್ತರಿಗೆ ಡಾ ಬಿ ಎನ್ ಶ್ರೀ ಕೃಷ್ಣ ವಿಧಿಸಿದ ಷರತ್ತುಗಳು ಹೀಗಿವೆ.

ಕರಾವಳಿಯಲ್ಲಿ ಕೇಸರಿ ಪಡೆಗೆ ಮೋದಿ ಹೆಸರಿನಲ್ಲಿ ಮತ ಕೇಳುವ ಅನಿವಾರ್ಯತೆ!

ಪಕ್ಷದ ಚುನಾವಣಾ ಪ್ರಣಾಳಿಕೆಯ ಅನುಷ್ಠಾನ, ರಾಷ್ಟ್ರ ರಕ್ಷಣೆ ಮತ್ತು ಹಿತಾಸಕ್ತಿ ಬಗೆಗಿನ ಬದ್ಧತೆ, ಸಂಸ್ಕೃತಿ ಮತ್ತು ಪರಂಪರೆಗೆ ಬದ್ಧತೆ, ದ್ವಂದ್ವ ನೀತಿ ಸಲ್ಲ, ಅಪರಾಧಿಗಳು, ಉಗ್ರರು, ದೇಶದ್ರೋಹಿಗಳು, ಭ್ರಷ್ಟಾಚಾರಿಗಳನ್ನು ಬೆಂಬಲ ಇಲ್ಲ, ಭ್ರಷ್ಟಾಚಾರ ಇಲ್ಲ, ದುಷ್ಟದ್ರವ್ಯ ಮುಟ್ಟಲಾರೆ, ಎಲ್ಲರ ಕಡೆಗೂ ಸಮಾನ ದೃಷ್ಟಿ, ಪಕ್ಷಪಾತ ರಹಿತ ಧೋರಣೆ, ಸ್ವಚ್ಛತಾ ಅಭಿಯಾನದಲ್ಲಿ ಕ್ರಿಯಾತ್ಮಕ ಭಾಗವಹಿಸುವಿಕೆ, ಗೋ ರಕ್ಷಣೆ, ಗೋಹತ್ಯೆ ನಿಷೇಧ, ಜನಸೇವೆಯ ಸೋಗಿನಲ್ಲಿ ದ್ವಂದ್ವ ನೀತಿ ಇಲ್ಲ, ಜನರ ಬೇಡಿಕೆ ಮತ್ತು ಭಾವನೆಗಳಿಗೆ ಸ್ಪಂದನೆ.

ಇಷ್ಟು ಷರತ್ತು ಗಳಿಗೆ ನಾನು ಮತ್ತು ನನ್ನ ಪಕ್ಷ ಬದ್ಧ ಎನ್ನುವ ಭರವಸೆ ನೀಡುವವರು ಮಾತ್ರ ಮತ ಕೇಳಲು ಮನೆಗೆ ಬರಬಹುದು ಎಂದು ಡಾ ಬಿ ಎನ್ ಶ್ರೀ ಕೃಷ್ಣ ಬ್ಯಾನರ್‌ನಲ್ಲಿ ಹೇಳಲಾಗಿದೆ.ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿಯೂ ಡಾ ಶ್ರೀ ಕೃಷ್ಣ ಬ್ಯಾನರ್ ಒಂದನ್ನು ಮನೆಯ ಮುಂದೆ ನೇತುಹಾಕಿದ್ದರು .

ದಕ್ಷಿಣ ಕನ್ನಡದಲ್ಲಿ ಬಿಜೆಪಿ ಕಟ್ಟಿಹಾಕಲು ಕೈ-ತೆನೆ ಜಂಟಿ ಚುನಾವಣಾ ಸಮಿತಿ ರಚನೆ

ಅದರಲ್ಲಿ ರಾಜ್ಯಕ್ಕೆ ಸಂಬಂಧಪಟ್ಟ ವಿಷಯಗಳಿಗೆ ಆದ್ಯತೆ ನೀಡಿದ್ದರು. ಕನ್ನಡ ಭಾಷೆ, ಸಂಸ್ಕೃತಿಗೆ ಬದ್ಧನಾಗಿರಬೇಕು, ದ್ವಂದ್ವ ನೀತಿ ಅನುಸರಿಸಲಾರೆ, ಕನ್ನಡ ಮಾಧ್ಯಮದಲ್ಲೇ ಮಕ್ಕಳಿಗೆ ಪ್ರಾಥಮಿಕ ಶಾಲಾ ಶಿಕ್ಷಣ ಕೊಡಿಸುತ್ತೇನೆ ಮತ್ತಿತರ ಷರತ್ತುಗಳನ್ನು ಒಪ್ಪಬೇಕು ಎಂದು ಆ ಬ್ಯಾನರ್‌ನಲ್ಲಿ ಮುದ್ರಿಸಿ ಮನೆ ಮುಂದೆ ನೇತುಹಾಕಿದ್ದರು.

English summary
Famous pediatrician doctor Shri Krishna from Sullia warns the candidates who come to houses seeking for vote through a eye catching banner on his gate.here is the details ,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X