ನಳಿನ್ ವಿರುದ್ಧದ ಎಫ್ ಐಆರ್ ನಲ್ಲಿ ಏನಿದೆ?
ಮಂಗಳೂರು, ಮೇ.14: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಅವರ ವಿರುದ್ಧ ಸತೀಶ್ ಶೆಟ್ಟಿ ಎಂಬುವರು ನೀಡಿದ ದೂರಿನ ಅನ್ವಯ ಬಂದರು ಠಾಣೆಯಲ್ಲಿ ನಳೀನ್ ಕುಮಾರ್ ಕಟೀಲು ಅವರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ನಳೀನ್ ಕುಮಾರ್ ಕಟೀಲು ಹಾಗೂ ನನ್ನ ಪತ್ನಿ ವಿನುತಾ ಶೆಟ್ಟಿ ನಡುವೆ ಅಕ್ರಮ ಸಂಬಂಧವಿದೆ ಎಂದು ಉಡುಪಿ ಮೂಲದ ಮುಂಬೈ ನಿವಾಸಿ ಸತೀಶ್ ಶೆಟ್ಟಿ ಅವರು ಆರೋಪಿಸಿದ್ದಾರೆ. ಸಂಸದ ನಳಿನ್ ಕುಮಾರ್ ಹಾಗೂ ವಿನುತಾ ಶೆಟ್ಟಿ ಇಬ್ಬರೂ ಆರೋಪವನ್ನು ತಳ್ಳಿ ಹಾಕಿದ್ದಾರೆ. ಇಷ್ಟು ದಿನ ಸುಮ್ಮನಿದ್ದು ಈಗ ದೂರು ನೀಡಲು ಮುಖ್ಯ ಕಾರಣ, ನರೇಂದ್ರ ಮೋದಿ ಹಾಗೂ ಬಿಜೆಪಿ ಮರ್ಯಾದೆ ಪ್ರಶ್ನೆ ಹಾಗೂ ನನ್ನ ಜೀವಕ್ಕೆ ಅಪಾಯವಿದೆ ಹೀಗಾಗಿ ಪೊಲೀಸರ ಮೊರೆ ಹೊಕ್ಕಿದ್ದೇನೆ ಎಂದು ಸತೀಶ್ ಹೇಳಿದ್ದಾರೆ. ಎಫ್ಐಆರ್ ಮುಖ್ಯಾಂಶ ಮುಂದಿದೆ ಓದಿ: [ಚಿತ್ರಗಳು: ಐಸಾಕ್ ರಿಚರ್ಡ್, ಮಂಗಳೂರು]

ಎಫ್ ಐಆರ್ ಮುಖ್ಯಾಂಶಗಳು ಹೀಗಿವೆ
* ಸತೀಶ್ ಶೆಟ್ಟಿ ಅವರಿಂದ ದೂರು ಸ್ವೀಕರಿಸಿದ ನಂತರ ಸಿಆರ್ ಪಿಸಿ ಸೆಕ್ಷನ್ 154 ಅನ್ವಯ ಎಫ್ ಐಆರ್ ದಾಖಲಿಸಲಾಗಿದೆ.
* ಮಂಗಳೂರು ನಗರದ ಸೆಂಟ್ರಲ್ ಸಬ್ ಡಿವಿಷನ್ ಉತ್ತರ ಪೊಲೀಸ್ ಠಾಣೆ(ಬಂದರು ಠಾಣೆ)ಯಲ್ಲಿ ಪ್ರಕರಣ ದಾಖಲಾಗಿದೆ.
* ಆರೋಪಿ ನಂ.1 ನಳಿನ್ ಕುಮಾರ್ ಕಟೀಲು, ಕಾರ್ಕಳ
* ಎ 2 ವಿನುತಾ ಶೆಟ್ಟಿ ಶಿರ್ವ ಪಡುಬೆಳ್ಳೆ, ಉಡುಪಿ
* ಎ 3 ರಂಜಿತ್, ವಿನುತಾ ಅವರ ಸೋದರ
* ಎ 4 ಅನಾಮಿಕರೊಬ್ಬರು(ಜೀವ ಬೆದರಿಕೆ ಒಡ್ಡಿದವರು)
* ಆರೋಪಿಗಳ ಮೇಲೆ ಐಪಿಸಿ 1860(ಸೆಕ್ಷನ್ 143,147,149,341,506,497,120ಬಿ) ಅನ್ವಯ ಪ್ರಕರಣ ದಾಖಲಾಗಿದೆ.

ಸತೀಶ್ ಶೆಟ್ಟಿ ದೂರಿನ ಸಾರಾಂಶ ಹೀಗಿದೆ
ಪಿರ್ಯಾದಿದಾರ ಸತೀಶ್ ಶೆಟ್ಟಿ ಮಹಾರಾಷ್ಟ್ರ ಜಿಲ್ಲೆ ಥಾಣಾ ತಾಲೂಕಿನ ಮೀರಾ ರೋಡ್ ಪೂರ್ವದಲ್ಲಿ ವಾಸವಾಗಿದ್ದಾರೆ. ಕಳೆದ 5 ವರ್ಷಗಳ ಹಿಂದೆ ಉಡುಪಿ ಜಿಲ್ಲೆ ಶಿರ್ವಾ ಪಡುಬೆಳ್ಳಿಯ ವಿನುತಾ ಶೆಟ್ಟಿ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ ಅವಳಿ ಗಂಡು ಮಕ್ಕಳಿದ್ದಾರೆ.
ಇವರ ಹೆಂಡತಿ ಊರಿಗೆ ಹೋದವಳು ವಾಪಾಸ್ ಬಾರದೇ ಪತಿಯ ಮೇಲೆ ವರದಕ್ಷಿಣೆ ಕೇಸ್ ದಾಖಲು ಮಾಡಿದ್ದಾರೆ. ಮಕ್ಕಳನ್ನು ದೂರ ಮಾಡಿದ್ದಾರೆ.ಈ ಬಗ್ಗೆ ವಿಚಾರಿಸಿದಾಗ ಅವಳು(ವಿನುತಾ) ರಾತ್ರಿ ವೇಳೆ ಮಂಗಳೂರು, ಬೆಂಗಳೂರು ಹೊಟೆಲ್ ನಲ್ಲಿ ವಾಸ್ತವ್ಯ ಹೂಡಿ ವ್ಯಭಿಚಾರ ನಡೆಸುತ್ತಿರುವುದು ಕಂಡು ಬಂದಿದೆ. ಇದಕ್ಕೆ ಅಕ್ಷೇಪಿಸಿದಾಗ ಆಕೆ ಹಾಗೂ ಆಕೆಯ ಸೋದರ ರಂಜಿತ್ ಬೆದರಿಕೆ ಕರೆ ಮಾಡಿದ್ದಾರೆ.. ಮುಂದುವರೆದು...

ನಳಿನ್-ವಿನುತಾ ಜತೆ ಸಂಬಂಧವಿದೆ: ಸತೀಶ್
ವಿನುತಾ ಹಾಗೂ ನಳಿನ್ ಕುಮಾರ್ ಕಟೀಲ್ ಅವರ ನಡುವೆ ತಡರಾತ್ರಿ ಮೊಬೈಲ್ ದೂರವಾಣಿ ಕರೆಗಳು ವಿನಿಮಯವಾಗಿದೆ. ಇಬ್ಬರ ನಡುವೆ ಲೈಂಗಿಕ ಸಂಪರ್ಕ ಕೂಡಾ ಇತ್ತು ಎಂಬುದಾಗಿ ತಿಳಿಯಿತು. ಬೆಂಗಳೂರಿನ ಕೆಲವು ಹೋಟೆಲ್ ನಲ್ಲೂ ಕೂಡಾ ಜತೆಗೆ ವಾಸ್ತವ್ಯ ಇದ್ದರೆಂದು ತಿಳಿಯಿತು.
ವಿನುತಾ ಅವರನ್ನು ನಳಿನ್ ಪತ್ನಿಯಂತೆ ಕಾಣುತ್ತಿದ್ದಾರೆ, ಈ ಕೃತ್ಯಕ್ಕೆ ನಳಿನ್ ಪ್ರೇರಣೆಯಿದ್ದು, ಆರೋಪಿಗಳ ಮೇಲೆ ಕ್ರಮ ಜರುಗಿಸುವಂತೆ ಕೋರಿ ಮನವಿ

ನಳಿನ್ ಬಂಟರಿಂದ ಜೀವ ಬೆದರಿಕೆ
ಮೇ.11 ರಂದು ನಾನು ನನ್ನ ತಾಯಿ ಜತೆ ಕಟೀಲ್ ದೇವಸ್ಥಾನದಲಿ ಪೂಜೆ ಮುಗಿಸಿ ಮಂಗಳೂರಿನ ಸಿಟಿ ಸೆಂಟರ್ ಗೆ ಹೋಗುವಾಗ ಮಧ್ಯಾಹ್ನ 2 ಗಂಟೆಯಿಂಅದ್ 3.30 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತರು ಸುತ್ತುವರಿದು ನಿಲ್ಲಿಸಿ, ನಳಿನ್ ಹಾಗೂ ವಿನುತಾ ಸಂಬಂಧದ ಬಗ್ಗೆ ಮಾತಾಡಿದ್ದಲ್ಲಿ ನಿನ್ನ ಹಾಗೂ ತಾಯಿ ಜೀವ ತೆಗೆಯುತ್ತೇವೆ ಎಂದು ಬೆದರಿಸಿದರು.

ನಾನು ಬಂಟ ಸಮುದಾಯದವನು : ಸತೀಶ್
ನಾನು ಕಾಸರಗೋಡು ಮೂಲದ ಬಂಟ ಸಮುದಾಯದವನು, ನಮ್ಮದು ಸುಸಂಸ್ಕೃತ ಕುಟುಂಬ, ನನ್ನ ತಂದೆ ಚಂದ್ರಶೇಖರ್ ಶೆಟ್ಟಿ ಅವರು ಆರೆಸ್ಸೆಸ್ ಸ್ವಯಂ ಸೇವಕರಾಗಿದ್ದವರು, ಸಂಘ ಪರಿವಾರ ಹಾಗೂ ಮೋದಿ ಅವರ ಮಾನ ಮರ್ಯಾದೆ ಉಳಿಸಲು ಇಂಥ ಕೆಟ್ಟ ರಾಜಕಾರಣಿಗಳ ಬಣ್ಣ ಬಯಲು ಮಾಡಬೇಕಾಗಿ ಬಂದಿದೆ.
ನನ್ನ ಪತ್ನಿ ವಿನುತಾ ಈಗ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಾಳೆ. ಇದನ್ನು ಸಹಿಸಲು ಸಾಧ್ಯವಿಲ್ಲ, ಬಾಗೇ ಗೌಡ, ಶಬ್ಬಿರ್, ನಳಿನ್ ಅವರ ಸಹಾಯಕ ರಜಾಕ್ ಅವರು ಪಿಂಪ್ ಗಳಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ತನಿಖೆಯಾಗಲಿ, ಹುಬ್ಬಳ್ಳಿ, ಬೆಂಗಳೂರು(ಜಯನಗರ 2ನೇ ಬ್ಲಾಕ್), ಉಡುಪಿ ಮುಂತಾದ ಕಡೆ ನಳಿನ್ ಹಾಗೂ ವಿನುತಾ ಜತೆಗೆ ಸುತ್ತಾಡಿದ ಮಾಹಿತಿ ಇದೆ ಎಂದು ಸತೀಶ್ ಆರೋಪಿಸಿದ್ದಾರೆ.












Click it and Unblock the Notifications