ಮಂಗಳೂರು: ಸಾಕು ಪ್ರಾಣಿಯನ್ನು ಬಿಡದ ಕಾಮಾಂಧರು!
ಮಂಗಳೂರು, ಜ. 22 : ಇನ್ನು ಕೇವಲ ಮಕ್ಕಳನ್ನು ಮಾತ್ರವಲ್ಲ, ಸಾಕು ಪ್ರಾಣಿಗಳನ್ನು ಕಾಮುಕರಿಂದ ಕಾಪಾಡಿಕೊಳ್ಳಬೇಕಿದೆ. ಕಾಮಾಂಧರ ಕಣ್ಣು ಇದೀಗ ಮೂಕ ಪ್ರಾಣಿಗಳ ಮೇಲೂ ಬಿದ್ದಿದೆ. ವಾಂಛೆ ತೀರಿಸಿಕೊಳ್ಳಲು ಅತ್ಯಾಚಾರ ಎಸಗುತ್ತಿದ್ದ ಕಿರಾತಕರು ಇದೀಗ ಮೂಕ ಪ್ರಾಣಿಗಳ ಮೇಲೆ ತಮ್ಮ 'ಪರಾಕ್ರಮ' ತೋರಿಸಲು ಆರಂಭಿಸಿದ್ದಾರೆ!
ಹೌದು... ಮಂಗಳೂರಿನ ಮುಲ್ಕಿ ಇಂಥ ಅಸಹ್ಯಕರ ಘಟನೆಗೆ ಸಾಕ್ಷಿಯಾಗಿದೆ. ಆಡಿನ ಮೇಲೆ ಅತ್ಯಾಚಾರ ಎಸಗಿದ ಕಲಬುರಗಿ ಮೂಲದ ಸಂತೋಷ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.[ಕಲಬುರಗಿ: ನಾಲ್ವರು ಅತ್ಯಾಚಾರಿ ಬಾಲಕರ ಬಂಧನ]

ಆಡಿನ ದೇಹದ ಹಿಂಭಾಗದಲ್ಲಿ ರಕ್ತ ಬರುತ್ತಿರುವುದನ್ನು ಗಮನಿಸಿದ ಮಾಲೀಕ ಪಶುವೈದ್ಯರ ಬಳಿ ತೆರಳಿ ತಪಾಸಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ. ಕೂಡಲೇ ಮುಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು ಅರೋಪಿಯನ್ನು ಬಂಧಿಸಿದ್ದಾರೆ. [ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬಾಲಕರು]
ಮಕ್ಕಳು, ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಜೈಲು ಸೇರುತ್ತಿದ್ದವರ ಪಟ್ಟಿಗೆ ಇದೊಂದು ಹೊಸ ಸೇರ್ಪಡೆ ಎಂದೇ ಹೇಳಬಹುದು. ಕಾಮತೃಷೆ ತಣಿಸಿಕೊಳ್ಳಲು ಆಡನ್ನು ಬಳಸಿಕೊಂಡವ ಸದ್ಯ ಜೈಲು ಕಂಬಿ ಎಣಿಸುತ್ತಿದ್ದಾನೆ.












Click it and Unblock the Notifications