ಸೈಯದ್ ಅವರ ಮಿರಾಕಲ್ ಆನ್ ವೀಲ್ಸ್ ಎಂಬ ಮಾಯಾಲೋಕ
ಆಧುನಿಕ ಜಗತ್ತಿನಲ್ಲಿ ಸಾಮಾನ್ಯ ಮನುಷ್ಯನೇ ತನ್ನ ಶಕ್ತಿ ಮತ್ತು ಸಾಮಥ್ರ್ಯದೊಡನೆ ಸಮಾಜದಲ್ಲಿ ಗುರುತಿಸಿಕೊಳ್ಳುವುದು ಕಡಿಮೆ. ಅಂಥದ್ದರಲ್ಲಿ ವಿಕಲಚೇತನರ ಪ್ರಯತ್ನದೊಡನೆ ನಡೆಯುತ್ತಿರುವ ಕಾರ್ಯಕ್ರಮ 'ಮಿರಾಕಲ್ ಓನ್ ವೀಲ್ಸ್'. ಗಾಲಿ ಕುರ್ಚಿಯಲ್ಲಿ ಪ್ರದರ್ಶನ ನೀಡುವ ಈ ವಿಕಲಚೇತನರ ಪ್ರತಿಭೆಗೆ ಅಂಗವೈಖಲ್ಯ ಎಂದಿಗೂ ಅಡ್ಡಿಯಾಗಿಲ್ಲ.
ಇಂಥದ್ದೊಂದು ಅದ್ಭುತ ಪ್ರದರ್ಶನವನ್ನು ಸೈಯದ್ ಸಲ್ಲಾವುದ್ದೀನ್ ಅವರ ನೇತೃತ್ವದ ತಂಡ ಇತ್ತೀಚೆಗೆ ಧರ್ಮಸ್ಥಳ ಲಕ್ಷದೀಪೋತ್ಸವ ಸಂದರ್ಭದಲ್ಲಿ ನೀಡಿದೆ. ಈ ಬಗ್ಗೆ ವರದಿ ಇಲ್ಲಿದೆ. [ಗ್ಯಾಲರಿ: ಕಾರ್ತೀಕ ದೀಪದ ಬೆಳಕಲ್ಲಿ ಮಿಂದೆದ್ದ ಧರ್ಮಸ್ಥಳ]
ಸೈಯದ್ ಸಲ್ಲಾವುದ್ದೀನ್ ಅವರ ನೇತೃತ್ವದ ಈ ತಂಡದಲ್ಲಿ ಸುಮಾರು 15ಕ್ಕೂ ಅಧಿಕ ಸಂಖ್ಯೆಯ ಕಲಾವಿದರಿದ್ದು ಒಂದು ಉತ್ತಮ ಸಮಾಜಿಕ ಸಂದೇಶವುಳ್ಳ ನೃತ್ಯ ರೂಪಕವನ್ನು ವೀಕ್ಷಕರಿಗೆ ಕೊಡುವ ಜವಾಬ್ದಾರಿ ಹೊತ್ತಿದ್ದಾರೆ. ಸೈಯದ್ ಸಲ್ಲಾವುದ್ದೀನ್ ಅವರು ಭರತನಾಟ್ಯ, ಕಥಕ್ ಪ್ರಕಾರಗಳಲ್ಲಿ ಸಾಧನೆ ಮಾಡಿದ್ದು ತನ್ನ ಕಲಾಸಧಕರನ್ನು ತಯಾರು ಗೊಳಿಸಲು ನೆರವಾಗಿದೆ. [ಮರೆಯಾಗಿದ್ದ ಗೋಲಿ ಸೋಡಾ ಲಕ್ಷದೀಪೊತ್ಸವದಲ್ಲಿ ಪ್ರತ್ಯಕ್ಷ]
ಈ ತಂಡಕ್ಕೆ ನೃತ್ಯರೂಪಕ ಎನ್ನುವುದು ಕೇವಲ ಪ್ರದರ್ಶನದ ಕಲೆಯಲ್ಲ. ದೈಹಿಕವಾಗಿ ಸಬಲರಾಗಲು ಇದು ಇವರೊಳಗಿನ ಶಕ್ತಿಯಾಗಿ ಪರಿಣಮಿಸಿದೆ. ಇದುವರೆಗೆ ಈ ತಂಡ ಸುಮಾರು 10,000ಕ್ಕೂ ಅಧಿಕ ಪ್ರದರ್ಶನ ನೀಡಿದ್ದು ಲಿಮ್ಕಾ, ಗಿನ್ನಿಸ್ ದಾಖಲೆಯಲ್ಲಿ ತಮ್ಮ ಹೆಸರು ಮೂಡಿಸಿದೆ.

ಸೈಯದ್ ಸಲ್ಲಾವುದ್ದೀನ್ ಅವರಿಗೆ ಸನ್ಮಾನ
ಸ್ವತಃ ಭರತನಾಟ್ಯ, ಕಥಕ್ ನೃತ್ಯ ಪ್ರವೀಣರಾದ ಬೆಂಗಳೂರು ಮೂಲದ ಸೈಯದ್ ಸಲ್ಲಾವುದ್ದೀನ್ ಹಾಗೂ ಅವರ ಮಿರಾಕಲ್ ಆನ್ ವೀಲ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಿ, ಸನ್ಮಾನಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ.

ಎಲ್ಲಾ ಬಗೆಯ ನೃತ್ಯ ಹಾಗೂ ಕಸರತ್ತು ಪ್ರದರ್ಶನ
ಸೋಫಿ, ಯೋಗ, ದೇಶಭಕ್ತಿ ಗೀತೆ ಮತ್ತು ನೃತ್ಯ, ಪೌರಾಣಿಕ ರೂಪಕ, ಹಾಡುಗಳ ಮೂಲಕ ಜನರನ್ನು ರಂಜಿಸುವ ಈ ತಂಡಕ್ಕೆ ಕಲಾಸಕ್ತರ ಚಪ್ಪಾಳೆಯೇ ಪ್ರೀತಿಯ ಮುಕುಟ.

ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದೆ
ಆಳ್ವಾಸ್ ನುಡಿಸಿರಿ, ಧರ್ಮಸ್ಥಳ ಲಕ್ಷದೀಪದಂಥ ಆಕರ್ಷಕ ಕಾರ್ಯಕ್ರಮಗಳಲ್ಲಿ ತಮ್ಮ ಕಲಾಸಾಮಥ್ರ್ಯ ಬಿಚ್ಚಿಡುವ ಈ ತಂಡ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಕಾರ್ಯಕ್ರಮ ನೀಡಿದೆ.

ಪ್ರತಿಭೆಗೆ ಅವಿರತ ಶ್ರಮವೇ ಸ್ಪೂರ್ತಿ
ಇವರ ಕಲಾಸಾಮರ್ಥ್ಯಕ್ಕೆ ಈಗಾಗಲೇ ಹಲವು ಪ್ರಶಸ್ತಿಗಳು ಈ ತಂಡಕ್ಕೆ ಲಭ್ಯವಾಗಿವೆ. ವಿಕಲಚೇತನರೂ ಪ್ರಕೃತಿಯ ಒಂದಂಶ ಅವರನ್ನು ಬೇರೆ ಎಂದು ಕಾಣುವುದು ಅಸಮರ್ಪಕ ಎನ್ನುವ ಸಂದೇಶವನ್ನು ಸಮಾಜಕ್ಕೆ ಸಾರಲು ಹೊರಟಿರುವ ಈ ತಂಡದ ಪ್ರತಿಭೆಗೆ ಅವಿರತ ಶ್ರಮವೇ ಸ್ಪೂರ್ತಿ.

ಮಹಾಭಾರತ ಕತೆಯನ್ನು ಬಿಚ್ಚಿಡುವ ಯತ್ನ
ನೃತ್ಯದ ಮೂಲಕ ಮಹಾಭಾರತ ಕತೆಯನ್ನು ಬಿಚ್ಚಿಡುವ ಈ ತಂಡ ಸರ್ವಧರ್ಮ ಸಮನ್ವಯತೆಯ ತತ್ವವನ್ನು ಸಮಾಜಕ್ಕೆ ಸಾರುವ ರೀತಿ ಸುಂದರ.

ಧೋರಣೆಯನ್ನು ಬದಲಾಯಿಸುವಂತಿರುತ್ತದೆ
ಇಡೀ ಪ್ರದರ್ಶನದುದ್ದಕ್ಕೂ ವೀಲ್ ಚಯರ್, ಊರುಗೋಲುಗಳು ಇವರ ನೃತ್ಯ ಪರಿಕರಗಳಾಗಿ ಗೋಚರಿಸುವುದರೊಡನೆ ಆ ಉಪಕರಣಗಳ ಕುರಿತು ಸಮಾಜದ ಸಾಮಾನ್ಯ ಧೋರಣೆಯನ್ನು ಬದಲಾಯಿಸುವಂತಿರುತ್ತದೆ,

ಹತ್ತು ಸಾವಿರಕ್ಕೂ ಅಧಿಕ ಪ್ರದರ್ಶನ
ವೈವಿಧ್ಯಮಯ ಪ್ರದರ್ಶನ ನೀಡುತ್ತಾ ಬಂದಿರುವ ಮಿರಾಕಲ್ ಆನ್ ವೀಲ್ಸ್ ತಂಡ ಇದುವರೆವಿಗೂ 10,000ಕ್ಕೂ ಅಧಿಕ ಪ್ರದರ್ಶನ ನೀಡಿದ್ದಲ್ಲದೆ, ಗಿನ್ನಿಸ್ ಹಾಗೂ ಲಿಮ್ಕಾ ದಾಖಲೆಯನ್ನು ಹೊಂದಿದೆ.











Click it and Unblock the Notifications