ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರ; ಪೇಚಿಗೆ ಸಿಲುಕಿದ ಮಂಗಳೂರು ಪೊಲೀಸರು!

ಮಂಗಳೂರು, ಸೆಪ್ಟೆಂಬರ್ 29: ಮಂಗಳೂರು ನಗರ ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ಮಾಡುವವರ ವಿರುದ್ಧ ಕಾರ್ಯಾಚರಣೆಗೆ ಇಳಿದಿದ್ದಾರೆ. ಸೋಮವಾರ ಕಾರುಗಳಿಗೆ ಟಿಂಟೆಡ್ ಅಳವಡಿಸಿದ ವಿರುದ್ಧ ಕಾರ್ಯಾಚರಣೆ ಮಾಡಿದ ಪೊಲೀಸರು, ಈಗ ವಾಹನಗಳ ನಂಬರ್ ಪ್ಲೇಟ್ ಸರಿಯಾಗಿಡದವರನ್ನು ಹಿಡಿದು ಕೇಸ್ ಹಾಕಿದ್ದಾರೆ.

ಎರಡು ದಿನದಲ್ಲಿ ಬರೋಬ್ಬರಿ ಏಳು ಲಕ್ಷ ದಂಡ ಸಂಗ್ರಹ ಮಾಡಿದ್ದಾರೆ. ಆದರೆ ದುರಂತ ಏನೆಂದರೆ ಸಿಕ್ಕಸಿಕ್ಕವರ ವಾಹನವನ್ನು ತಡೆದು ನಿಲ್ಲಿಸಿದ ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಎ‌. ನಟರಾಜ್‌ರವರ ಸರ್ಕಾರಿ ಕಾರಿನಲ್ಲೇ ಐಎನ್‌ಡಿ ನಂಬರ್ ಪ್ಲೇಟ್ ಇಲ್ಲದಿರುವುದು ಪೊಲೀಸ್ ಇಲಾಖೆಗೆ ತೀವ್ರ ಪೇಚುಗೀಡು ಮಾಡಿದೆ.

ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ನಿರ್ದೇಶನದಂತೆ, ಒಂದು ವಾರಗಳ ಕಾಲ ಮಂಗಳೂರು ಪೊಲೀಸರು ಸಂಚಾರ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ಮಾಡಲಿದ್ದಾರೆ. ಸೋಮವಾರ ಟಿಂಟೆಡ್ ಗ್ಲಾಸ್ ಹೊಂದಿದ ಕಾರುಗಳ ಮೇಲೆ ಕಾರ್ಯಾಚರಣೆ ಮಾಡಿದರೆ, ಮಂಗಳವಾರ ವಾಹನಗಳ ನಂಬರ್ ಪ್ಲೇಟ್ ಅಭಿಯಾನ ಮಾಡಲಾಗಿದೆ.

Defective Number Plate In Mangaluru ACP Vehicle

ಇನ್ನು ಬುಧವಾರ ಹೆಲ್ಮೆಟ್ ಹಾಕದಿರುವವರ ಬಗ್ಗೆ ಪೊಲೀಸರು ಕಾರ್ಯಾಚರಣೆ ಮಾಡಿದರೆ, ಗುರುವಾರ ಇನ್ಶುರೆನ್ಸ್ ಹೊಂದಿರದ ವಾಹನಗಳ ಮೇಲೆ ಪೊಲೀಸರು ಕಾರ್ಯಾಚರಣೆ ಮಾಡಲಿದ್ದಾರೆ. ಶುಕ್ರವಾರ ಹಳೇ ಕೇಸ್‌ಗಳ ದಂಡ ಕಟ್ಟಿಸಿಕೊಳ್ಳಲು ಪೊಲೀಸರು ತಯಾರಾದರೆ, ಶನಿವಾರ ಎಮಿಶನ್ ಸರ್ಟಿಫಿಕೇಟ್ ಇಲ್ಲದ ವಾಹನಗಳನ್ನು ಹಿಡಿಯುವ ಕಾರ್ಯಾಚರಣೆಯನ್ನು ಪೊಲೀಸರು ಮಾಡಲಿದ್ದಾರೆ. ಈ ಎಲ್ಲಾ ಕಾರ್ಯಾಚರಣೆ ಮಂಗಳೂರು ಸಂಚಾರ ವಿಭಾಗದ ಎಸಿಪಿ ಎಂ.ಎ. ನಟರಾಜ್ ನೇತೃತ್ವದಲ್ಲಿ ನಡೆಯಲಿದೆ.

ಸೋಮವಾರ ಕಾರುಗಳಿಗೆ ಟಿಂಟೆಡ್ ಗ್ಲಾಸ್ ಅಳವಡಿಸಿದರ ಬಗ್ಗೆ ಕಾರ್ಯಾಚರಣೆ ಮಾಡಿದ ಮಂಗಳೂರು ಪೊಲೀಸರು ಒಟ್ಟು 550 ಟಿಂಟೆಡ್ ಕಾರುಗಳ ವಿರುದ್ಧ ಪ್ರಕರಣ ದಾಖಲಿಸಿ, 2.75 ಲಕ್ಷ ರೂಪಾಯಿ ದಂಡ ಸಂಗ್ರಹ ಮಾಡಿದ್ದಾರೆ. ಮಂಗಳೂರು ಕಮೀಷನೇಟರ್ ವ್ಯಾಪ್ತಿಯಲ್ಲಿ ಕಾರ್ಯಾಚರಣೆ ಮಾಡಿದ 21 ಪೊಲೀಸ್ ತಂಡ, ಹೆದ್ದಾರಿ ಹಾಗೂ ನಗರದ ರಸ್ತೆಗಳಲ್ಲಿ ಟಿಂಟೆಡ್ ಗ್ಲಾಸ್ ಹೊಂದಿದ ವಾಹನಗಳನ್ನು ತಡೆದು, ಸ್ಥಳದಲ್ಲೇ ಟಿಂಟ್ ಕವರ್‌ಗಳನ್ನು ತೆಗೆದಿದ್ದಾರೆ.

ಮಂಗಳವಾರ ಸರಿಯಾಗಿ ನಂಬರ್ ಪ್ಲೇಟ್ ಹಾಕದ ವಾಹನಗಳನ್ನು ಪೊಲೀಸರು ತಡೆದಿದ್ದಾರೆ. ಮಂಗಳೂರು ನಗರ, ತೊಕ್ಕೊಟ್ಟು ಸೇರಿದಂತೆ ಕಮೀಷನರೇಟ್ ವ್ಯಾಪ್ತಿಯಲ್ಲಿ ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ. ನಂಬರ್ ಪ್ಲೇಟ್ ಮೇಲೆ‌ ಬರಹಗಳು, ನಂಬರ್ ಪ್ಲೇಟ್ ಮೇಲೆ‌ ಐಎನ್‌ಡಿ ಇರದಿರುವುದು, ಫ್ಯಾನ್ಸಿ ನಂಬರ್, ನಂಬರ್ ಪ್ಲೇಟ್ ನಿಯಮ ಪ್ರಕಾರ ಇರದಿರುವ ಸುಮಾರು 900ಕ್ಕೂ ಹೆಚ್ಚು ವಾಹನಗಳ ಮೇಲೆ ಮಂಗಳೂರು ಪೊಲೀಸರು ಕಾರ್ಯಾಚರಣೆ ಮಾಡಿದ್ದಾರೆ.

900 ವಾಹನಗಳಲ್ಲಿ ಸುಮಾರು ನಾಲ್ಕೂವರೆ ಲಕ್ಷ ದಂಡ ಸಂಗ್ರಹವನ್ನು ಮಂಗಳೂರು ಪೊಲೀಸರು ಮಾಡಿದ್ದಾರೆ. ಮಂಗಳೂರು ನಗರ ಹೊರವಲಯದ ತೊಕ್ಕೊಟ್ಟಿವಿನಲ್ಲಿ ಸಂಚಾರ ವಿಭಾಗದ ಎಸಿಪಿ ನಟರಾಜ್ ಮತ್ತು ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್ ಜಂಟಿಯಾಗಿ ಕಾರ್ಯಾಚರಣೆ ಮಾಡಿದ್ದಾರೆ.

ನಂಬರ್ ಪ್ಲೇಟ್ ಸರಿಯಿಲ್ಲದ ಮತ್ತು ಐಎನ್‌ಡಿ ಹೊಂದಿರದ ವಾಹನಗಳನ್ನು ಹಿಡಿಯುತ್ತಿದ್ದ ಎಸಿಪಿ ನಟರಾಜ್ ವಾಹನದ ನಂಬರ್ ಪ್ಲೇಟ್‌ನಲ್ಲಿ ಐಎನ್‌ಡಿ ಇರದಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ವಾಹನದ ಹಿಂದಿನ ನಂಬರ್ ಪ್ಲೇಟ್‌ನಲ್ಲಿ ಐಎನ್‌ಡಿ ಸ್ಟಿಕ್ಕರ್ ಇಲ್ಲದಿರುವುದು ಸಾರ್ವಜನಿಕರು ವಾಹನದ ಫೋಟೋ ತೆಗೆದು ಪೊಲೀಸರ ಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ.

"ಸಾರ್ವಜನಿಕರನ್ನು ಹಿಡಿದು ದಂಡ ವಸೂಲಿ ಮಾಡುತ್ತಿದ್ದ ಪೊಲೀಸರ ವಾಹನದಲ್ಲೇ ನಿಯಮ ಬಾಹಿರ ನಂಬರ್ ಪ್ಲೇಟ್ ಇರುವ ಬಗ್ಗೆ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. ಆಟೋ, ಬೈಕ್‌ಗಳಲ್ಲಿ ಪ್ರಯಾಣಿಸುವ ಸಾಮಾನ್ಯರನ್ನು ಹಿಡಿದು ಕೇಸ್ ಹಾಕುವ ಪೊಲೀಸರು, ತಮ್ಮ ವಾಹನದಲ್ಲೇ ಸರಿಯಾಗಿ ನಿಯಮ ಅಳವಡಿಸಿಲ್ಲ. ಪೊಲೀಸರಿಗೆ ಕೇಸ್ ಹಾಕುವವರು ಯಾರು?," ಅಂತಾ ಪ್ರಶ್ನೆ ಮಾಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಪೊಲೀಸ್ ಕಮೀಷನರ್ ಎನ್. ಶಶಿಕುಮಾರ್, "ಎಸಿಪಿ ವಾಹನದ ನಂಬರ್ ಪ್ಲೇಟ್ ನಿಯಮ ಬಾಹಿರವಾಗಿರುವುದು ಗೊತ್ತಾಗಿದೆ. ತಕ್ಷಣ ಸರಿ ಮಾಡಲು ಸೂಚಿಸಿದ್ದೇನೆ," ಎಂದು ತಿಳಿಸಿದ್ದಾರೆ.

Recommended Video

      ಪಾಪ.. ಕ್ಯಾಬ್ ಚಾಲಕರ ಕಷ್ಟ ಕೇಳೋರೇ ಇಲ್ವಾ? | Oneindia Kannada

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+