ದಕ್ಷಿಣ ಕನ್ನಡ; ವಾರಾಂತ್ಯದ ಕರ್ಫ್ಯೂ ನಡುವೆಯೂ 372 ವಿವಾಹ!

ಮಂಗಳೂರು, ಏಪ್ರಿಲ್ 26; ಕೊರೊನಾ ಕರ್ಫ್ಯೂ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮದುವೆ ಕಾರ್ಯಕ್ರಮಗಳು ನಿರಾತಂಕವಾಗಿ ನಡೆದಿದೆ. ಜಿಲ್ಲಾಡಳಿತದ ಬಿಗಿ ನಿಯಮದ ನಡುವೆ ಜಿಲ್ಲೆಯಲ್ಲಿ 372 ಮದುವೆ ಕಾರ್ಯಕ್ರಮಗಳು ಭಾನುವಾರ ನಡೆದವು.

ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ 82 ಮದುವೆ ಕಾರ್ಯಕ್ರಮಗಳು ನಡೆದಿದ್ದು, ಗ್ರಾಮೀಣ ಭಾಗದಲ್ಲಿ 225 ಮದುವೆ ಕಾರ್ಯಕ್ರಮ ನಡೆದಿದೆ. ಕೊರೊನಾ ಆತಂಕದ ನಡುವೆಯೇ 372 ಜೋಡಿಗಳು ಹೊಸ ಜೀವನಕ್ಕೆ ಕಾಲಿಟ್ಟಿವೆ.

ಮಂಗಳೂರಿನಲ್ಲಿ‌ 52, ಬಂಟ್ವಾಳ ತಾಲೂಕಿನಲ್ಲಿ 62, ಬೆಳ್ತಂಗಡಿ 43, ಪುತ್ತೂರು 24, ಸುಳ್ಯ 19,ಕಡಬ 9, ಮೂಡಬಿದಿರೆ 16 ಮದುವೆ ಕಾರ್ಯಕ್ರಮಗಳು ನಡೆದಿವೆ. ಕೋವಿಡ್ ಮಾರ್ಗಸೂಚಿ ಅನ್ವಯ 50 ಜನರು ಮಾತ್ರ ವಿವಾಹದಲ್ಲಿ ಪಾಲ್ಗೊಳ್ಳಬಹುದಾಗಿದೆ.

Dakshina Kannada District Witnessed For 372 Wedding On April 25th

225 ಮದುವೆ ಕಾರ್ಯಕ್ರಮಗಳು ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನಡೆದರೆ, 65 ಮದುವೆ ಕಾರ್ಯಕ್ರಮಗಳು ಜಿಲ್ಲೆಯ ಪಟ್ಟಣ ಭಾಗದಲ್ಲಿ ನಡೆದಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 82 ಜೋಡಿಗಳು ಸತಿಪತಿಗಳಾಗಿ ಸಪ್ತಪದಿ ತುಳಿದಿದ್ದಾರೆ. ಕಟೀಲು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ಸರಳ ವಿವಾಹ ಕಾರ್ಯ ನೆರವೇರಿದೆ. ದುರ್ಗಾಪರಮೇಶ್ವರಿ ಸನ್ನಿದಾನದಲ್ಲಿ 47 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದೆ.

ಕೋವಿಡ್ ನಿಯಮ ಪಾಲಿಸಿಕೊಂಡು ವಿವಾಹಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಒಂದು ಮದುವೆಗೆ ಅರ್ಚಕರು, ಫೊಟೋಗ್ರಾಫರ್ ಸೇರಿ 10 ಜನರಿಗೆ ಅವಕಾಶ ಮಾಡಕೊಡಲಾಗಿತ್ತು. ದೇವಳದ ಸರಸ್ವತಿ ಸದನ, ಮಹಾಲಕ್ಷ್ಮಿ ಸದನ, ಅನ್ನಛತ್ರದಲ್ಲಿ ಮದುವೆಗಳು ನಡೆದಿದ್ದು, ನೂತನ ವಧುವರರಿಗೆ ದೇವಸ್ಥಾನದ ಹೊರಭಾಗದಿಂದಲೇ ದೇವಿಯ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮೊದಲೇ ಬುಕ್ಕಿಂಗ್ ಆಗಿದ್ದ 90 ಜೋಡಿಗಳ ಪೈಕಿ 47 ಜೋಡಿಗಳ ಮದುವೆ ಕಾರ್ಯಕ್ರಮ ಭಾನುವಾರ ಕಟೀಲು ದುರ್ಗಾಪರಮೇಶ್ವರಿ ದೇವಾಲಯದಲ್ಲಿ ನಡೆದಿದೆ. ಭಾನುವಾರ ಮುಹೂರ್ತ ಬಹಳ ಪ್ರಶಸ್ತವಾಗಿದ್ದ ಹಿನ್ನಲೆಯಲ್ಲಿ ನಿಗದಿಯಾಗಿದ್ದಂತಹ ಮದುವೆ ಕಾರ್ಯಕ್ರಮಗಳಲ್ಲಿ ಭಾಗಶಃ ಎಲ್ಲವೂ ನಡೆದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+