ದ.ಕ ಡಿಸಿ ರಾಜೇಂದ್ರ ಕೆವಿ ಮೊಬೈಲ್ ಹ್ಯಾಕ್; ಹಣಕ್ಕಾಗಿ ಮೆಸೇಜ್ ಮಾಡಿದ ಹ್ಯಾಕರ್ಸ್

ಮಂಗಳೂರು, ಸೆಪ್ಟೆಂಬರ್ 15: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮೊಬೈಲ್ ಫೋನ್‌ಗೆ ಹ್ಯಾಕರ್‌ಗಳು ಕನ್ನ‌ಹಾಕಿದ್ದಾರೆ. ಜಿಲ್ಲಾಧಿಕಾರಿ ಮೊಬೈಲ್‌ನಿಂದ ಇ-ಮೇಲ್‌ನಲ್ಲಿರುವ ಸಂಪರ್ಕ ಪಟ್ಟಿಯ ಹಲವು ಜನರಿಗೆ ಜಿಲ್ಲಾಧಿಕಾರಿ ಖಾಸಗಿ ನಂಬರ್, ಹೆಸರು ಮತ್ತು ಫೋಟೋ ಬಳಸಿ ಹಣ ವರ್ಗಾಯಿಸುವಂತೆ ಹ್ಯಾಕರ್‌ಗಳು ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿರುವ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ನಿಮಗೆ 8590710748 ನಂಬರ್‌ನಿಂದ ನನ್ನ ಹೆಸರು ಮತ್ತು ಫೋಟೋ ಬಳಸಿ WhatsApp ಮುಖಾಂತರ ಸಂದೇಶ ಕಳುಹಿಸಿ ಅಪರಿಚಿತರು ಸಹಾಯ ಅಥವಾ ಹಣವನ್ನು ವರ್ಗಾಯಿಸಲು ಕೇಳಬಹುದು. ಮೇಲ್ಕಾಣಿಸಿದ ನಂಬರ್ ನನ್ನದಾಗಿರುವುದಿಲ್ಲ ಆದ ಕಾರಣ ನೀವು ಯಾವುದೇ ರೀತಿಯಲ್ಲಿ ಇವರಿಗೆ ಸಹಾಯ ಅಥವಾ ಹಣವನ್ನು ವರ್ಗಾಯಿಸ ಬೇಡಿ. ಆ‌‌ ನಂಬರ್‌ಅನ್ನು ರಿಪೋರ್ಟ್ ಅಥವಾ ಬ್ಲಾಕ್ ಮಾಡಿ ಎಂದು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ.

ದ.ಕ.ಜಿಲ್ಲಾಧಿಕಾರಿ ಹೆಸರು ಹಾಗೂ ಫೋಟೋ ಬಳಸಿ ಹಣ ವರ್ಗಾಯಿಸುವಂತೆ ವಾಟ್ಸ್ ಆ್ಯಪ್ ಮೆಸೇಜ್ ಮಾಡಲಾಗುತ್ತಿದೆ. 8590710748 ಮೊಬೈಲ್ ಸಂಖ್ಯೆಯ ಮೂಲಕ ಜಿಲ್ಲಾಧಿಕಾರಿಯವರ ಕ್ವಾಂಟ್ಯಾಕ್ಟ್ ಲಿಸ್ಟ್ ನಲ್ಲಿದ್ದ ಹಲವರಿಗೆ ಸಂದೇಶ ಮಾಡುತ್ತಿದ್ದಾರೆ. ಮೇಲ್ ಹ್ಯಾಕ್ ಮಾಡಿ ಕಾಟ್ಯಾಂಕ್ಟ್ ನಂಬರ್ ಪಡೆದಿರುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

Dakshina Kannada DC Rajendra KV Informs about his Phone Hacked

ಆದ್ದರಿಂದ ಯಾರೂ ಹಣ ವರ್ಗಾಯಿಸದಂತೆ ಜನರಿಗೆ ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆ. ಈ ಬಗ್ಗೆ ಸೆನ್ ಪೊಲೀಸ್ ಠಾಣೆಯಲ್ಲಿ ಡಾ.ರಾಜೇಂದ್ರ ಕೆ.ವಿ.ಯವರು ದೂರು ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+