ಬೇಸಿಗೆಯಲ್ಲಿ ತಂಪಾಗಿ ಇರಲು 30,000 ರೂ. ಒಳಗೆ ಸಿಗುವ ಟಾಪ್ 5 ಪೋರ್ಟಬಲ್ ಎಸಿಗಳು

ಈಗಾಗಲೇ ಬೇಸಿಗೆ ಆರಂಭವಾಗಿದ್ದು, ದೇಶದ ಬಹುತೇಕ ಭಾಗಗಳಲ್ಲಿ ಬಿಸಿಲಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಲಿದೆ. ಈ ವೇಳೆ ಜನರು ತಂಪಾದ ಗಾಳಿಗಾಗಿ ಎಸಿ ಮೊರೆ ಹೋಗುತ್ತಿದ್ದಾರೆ. ಆದರೆ, ನಗರ ಪ್ರದೇಶದ ಸಣ್ಣ ಮನೆಗಳು ಅಥವಾ ಸಣ್ಣ ಅಪಾರ್ಟ್‌ಮೆಂಟಗಳಲ್ಲಿ ವಾಸಿಸುವವರಿಗೆ ಸ್ಪ್ಲಿಟ್ ಎಸಿ ಮನೆಗೆ ಅಳವಡಿಸುವುದು ದೊಡ್ಡ ತಲೆನೋವಿನ ಕೆಲಸ. ಇಂತಹ ಸಂದರ್ಭಗಳಲ್ಲಿ ಪೋರ್ಟಬಲ್ ಎಸಿ ಒಂದು ವರದಾನವಾಗಿದೆ.

ಈ ಪೋರ್ಟಬಲ್ ಎಸಿ ಯಾವುದೆ ರೀತಿಯ ಪರ್ಮನೆಂಟ್ ಇನ್ಸ್ಟಾಲೇಶನ್ ಕಿರಿಕಿರಿ ಇಲ್ಲದೆ, ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಕೊಂಡೊಯ್ಯಬಹುದಾಗಿದೆ. ಈ ಪೋರ್ಟಬಲ್ ಎಸಿ ಮಧ್ಯಮ ವರ್ಗಕ್ಕೆ ತುಂಬಾ ಅನುಕೂಲಕರ ಮತ್ತು ಇವರ ನೆಚ್ಚಿನ ಆಯ್ಕೆ ಕೂಡ ಆಗಿದೆ. ಹಾಗದರೆ ಬನ್ನಿ 30,000 ರೂಪಾಯಿ ಬಜೆಟ್‌ನಲ್ಲಿ ದೊರೆಯುವ ಟಾಪ್ 5 ಪೋರ್ಟಬಲ್ ಎಸಿಗಳ ಮಾಹಿತಿಯನ್ನು ತಿಳಿಯೋಣ.

Top 5 Portable Air Conditioners

1.ಬ್ಲೂ ಸ್ಟಾರ್ ಎಸಿ (Blur Star) BS-CPAC12DA:

ವಿಶ್ವಾಸರ್ಹತೆಗೆ ಹೆಸರಾದ ಬ್ಲೂ ಸ್ಟಾರ್ ಕಂಪನಿಯು 1 ಟನ್ ಸಾಮರ್ಥ್ಯದ ಎಸಿ ಒಂದು ಬೆಡ್‌ರೂಮ್ ಅಂದರೆ 100 ರಿಂದ 120 ಚದುರ ಅಡಿ ಕೊಠಡಿಗೆ ಇದು ಹೇಳಿಮಾಡಿಸಿದಂತೆ ಇದೆ.

ವಿಶೇಷತೆ, ಬೆಲೆಗಳ ವಿವರ

* ವೈಶಿಷ್ಟ್ಯ: ಬ್ಯಾಕ್ಟೀರಿಯಾ ಪಿಲ್ಟರ್ ಮತ್ತು ರೋಟರಿ ಕಂಪ್ರೆಸರ್
* ಮಾರುಕಟ್ಟೆ ಬೆಲೆ: ಸುಮಾರು 26,000 ದಿಂದ 28,000 ರೂಪಾಯಿರವರೆಗೆ.
* ಇದರಲ್ಲಿರುವ ಸ್ಲೀಪ್ ಮೋಡ್ ರಾತ್ರಿ ವೇಳೆ ಮಲಗುವ ಕೋಣೆಯ ವಾತಾವರಣವನ್ನು ತಂಪಾಗಿರಿಸುತ್ತದೆ. ಇದರಿಂದ ಸೆಕೆ ಇಲ್ಲದಂತೆ ನೆಮ್ಮದಿಯಾಗಿ ನಿದ್ದೆ ಮಾಡಬಹುದು.

2.ಕ್ರೂಸ್ (Cruise) 1 ಟನ್ ಪೋರ್ಟಬಲ್ ಎಸಿ

ಕಡಿಮೆ ಬೆಲೆಯಲ್ಲಿ ಪ್ರೀಮಿಯಂ ಫೀಚರ್ಸ್ ನೀಡುವ ಬ್ರ್ಯಾಂಡ್ ಇದು. ಈ ಎಸಿ ಕೇವಲ ಕೂಲಿಂಗ್ ಮಾತ್ರವಲ್ಲದೆ ಫ್ಯಾನ್ ಮತ್ತು ಡಿಹ್ಯೂಮಿಡಿಫೈಯರ್ ಆಗಿಯೂ ಕಾರ್ಯನಿರ್ವಹಿಸುತ್ತದೆ. ಇದರಿಂದ ಬೇಸಿಗೆಯಲ್ಲಿ ಮಾತ್ರವಲ್ಲದೆ, ತೇವಾಂಶ (Humidity) ಹೆಚ್ಚಿರುವ ಸಮಯದಲ್ಲೂ ಉಪಯೋಗವಾಗುತ್ತದೆ.

* ವೈಶಿಷ್ಟ್ಯ: ಕಾಪರ್ ಕಂಡೆನ್ಸರ್, ಡಿಜಿಟಲ್ ಟಚ್ ಪ್ಯಾನೆಲ್.
* ಮಾರುಕಟ್ಟೆ ಬೆಲೆ: ಅಂದಾಜು 30,000 ರೂಪಾಯಿ
* ಪ್ಲಸ್‌ ಪಾಯಿಂಟ್‌: ಕ್ಯಾಸ್ಟರ್ ವೀಲ್ಸ್ ಇರುವುದರಿಂದ ಮನೆಯೊಳಗೆ ಎಲ್ಲಿಗೆ ಬೇಕಾದರೂ ಸುಲಭವಾಗಿ ತಳ್ಳಿಕೊಂಡು ಹೋಗಬಹುದು.

3.ಲಾಯ್ಡ್ (Lloyd) 1 Ton Portable AC

ಹ್ಯಾವೆಲ್ಸ್ ಇಂಡಿಯಾ ಸಮೂಹದ ಲಾಯ್ಡ್ ಎಸಿಗಳು ಉತ್ತಮ ಕಾರ್ಯಕ್ಷಮತೆ ಮತ್ತು ವಿಶ್ವಾಸಾರ್ಹತೆಗೆ ಹೆಸರುವಾಸಿ. ಸಣ್ಣ ಬೆಡ್‌ರೂಮ್ ಅಥವಾ ಸ್ಟಡಿ ರೂಮ್‌ಗಳಿಗೆ ಇದು ಉತ್ತಮ ಆಯ್ಕೆ ಆಗಿದೆ.

* ವೈಶಿಷ್ಟ್ಯ: ಆಟೋ ಸ್ವಿಂಗ್ ಏರ್‌ಫ್ಲೋ ಮತ್ತು ಸ್ಲೀಪ್ ಮೋಡ್.
* ಮಾರುಕಟ್ಟೆ ಬೆಲೆ: ಅಂದಾಜು 25,000-28,000 ರೂಪಾಯಿ
* ಪ್ಲಸ್ ಪಾಯಿಂಟ್‌: ಕಾಪರ್ ಕಂಡೆನ್ಸರ್ ಇರುವುದರಿಂದ ಉತ್ತಮ ಕೂಲಿಂಗ್ ನೀಡುವುದರ ಜೊತೆಗೆ ದೀರ್ಘಕಾಲ ಬಾಳಿಕೆ ಬರುತ್ತದೆ.

4 ಹೈಯರ್ (Haier) HPC12XCR

ಕಾಂಪ್ಯಾಕ್ಟ್ ವಿನ್ಯಾಸ ಬಯಸುವವರಿಗೆ ಹೈಯರ್ ಉತ್ತಮ ಆಯ್ಕೆ ಆಗಿದೆ. ಇದು 0.8 ಟನ್ ಸಾಮರ್ಥ್ಯ ಹೊಂದಿದ್ದು, ಕಚೇರಿಯ ಕ್ಯಾಬಿನ್‌ಗಳಿಗೆ ಅಥವಾ ಸಣ್ಣ ರೊಮ್‌ಗಳಿಗೆ ಸೊಕ್ತ.

* ವೈಶಿಷ್ಟ್ಯ: ಡಿಹ್ಯೂಮಿಡಿಫೈಯರ್ ಮೋಡ್ ಮತ್ತು ಕಡಿಮೆ ವಿದ್ಯುತ್ ಬಳಕೆ.
* ಪ್ಲಸ್ ಪಾಯಿಂಟ್: ಬಳಸಲು ಸುಲಭ ಮತ್ತು ಕನಿಷ್ಠ ನಿರ್ವಹಣೆ.

5. ಮಿನಿ ಪೋರ್ಟಬಲ್ ಕಂಪ್ರೆಸರ್ ಎಸಿ (Mini Portable AC)

ಅತ್ಯಂತ ಕಡಿಮೆ ಬಜೆಟ್ ಅಂದರೆ 15,000 ರೂ. ರಿಂದ 25,000 ರೂ. ಒಳಗೆ ಎಸಿ ಬೇಕು ಎನ್ನುವವರಿಗೆ ಈ ಪೋರ್ಟಬಲ್ ಕಂಪ್ರೆಸರ್ ಎಸಿ ಸೂಕ್ತವಾಗಿದೆ.

* ಸಾಮರ್ಥ್ಯ: 0.5 ರಿಂದ 0.8 ಟನ್.
* ಮಾರುಕಟ್ಟೆ ಬೆಲೆ: 15,000 - 25,000 ರೂಪಾಯಿ
* ಪ್ಲಸ್ ಪಾಯಿಂಟ್: ವೈಯಕ್ತಿಕ ಬಳಕೆಗೆ ಮತ್ತು ಬ್ಯಾಚುಲರ್ ರೂಮ್‌ಗಳಿಗೆ ಇದು ಸೊಕ್ತ.

ಪೋರ್ಟಬಲ್ ಎಸಿ ಬಳಸಬೇಕೆಂದರೆ, ನಿಮ್ಮ ಕೊಠಡಿಯ ಗಾತ್ರ ಮತ್ತು ಬಿಸಿ ಗಾಳಿಯನ್ನು ಹೊರಹಾಕಲು ಕಿಟಕಿ ಇದ್ದರೆ ಒಳ್ಳೆಯದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+