• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊರೊನಾ ವೈರಸ್ ಗೆ ಕನ್ನಡ ಬರುವುದಿಲ್ಲ ಎಂದು ಇಂಗ್ಲಿಷ್ ನಲ್ಲಿ ಪ್ರತಿಭಟನೆ

|

ಮಂಗಳೂರು, ಮಾರ್ಚ್ 22: ಕೊರೊನಾ ವೈರಸ್ ಮಾನವ ಕುಲವನ್ನು ದಿನದಿಂದ ದಿನಕ್ಕೆ ಭಯಭೀತಗೊಳಿಸುತ್ತಾ ಸಾಗುತ್ತಿರುವುದು ಒಂದೆಡೆಯಾದರೆ, ಇದರ ಸುತ್ತಮುತ್ತ ಮೀಮ್ಸ್ ಗಳು ಎಗ್ಗಿಲ್ಲದೇ ಸಾಗುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯ ಕಾರ್ನಾಡ್ ಪಟ್ಟಣದಲ್ಲಿ ಮಾರಣಾಂತಿಕ ಕೊರೊನಾ ವೈರಸ್ ವಿರುದ್ದ ಯುವಕರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. 'ಕೊರೊನಾ ವೈರಸ್ ಗೋ..ಗೋ..' ಎಂದು ಹುಲ್ಲಿನ ಮಂದೆಗೆ ಬೆಂಕಿಯಿಟ್ಟು ಸಿಟ್ಟು ಹೊರಹಾಕಿದ್ದಾರೆ.

ಇಟಲಿಯ ಏರ್ ಪೋರ್ಟ್ ನಲ್ಲಿ ಪ್ರಯಾಣಿಕರ ಸಾವು: ವೈರಲ್ ವಿಡಿಯೋ ನಿಜವೇ?

ಚೀನಾದಲ್ಲಿ ಸುತ್ತುವರಿದು ಈಗ ವಿಶ್ವದೆಲ್ಲಡೆ ಹರಡುತ್ತಿರುವ ಕೊರೊನಾ ವೈರಸ್ ಅನ್ನು ನಮ್ಮ ದೇಶದಿಂದ ಓಡಿಸಬೇಕು. ಕೊರೊನಾ ಓಡಿಸುವ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ ಎಂದು ಕೈಯಲ್ಲಿ ಬೆಂಕಿಯ ಕೋಲಿನಿಂದ (ತುಳು ಭಾಷೆಯಲ್ಲಿ ತೂಟೆ) ಹುಲ್ಲಿನ ಮಂದೆಗೆ, 'ಕೊರೊನಾ ಓಡು...ಕೊರೊನಾ ಓಡು' ಎಂದು ಯುವಕನೊಬ್ಬ ಬೆಂಕಿ ಹಚ್ಚುತ್ತಾನೆ.

ನಮ್ಮ ಪೂರ್ವಜರು ಊರಿಗೆ ಏನಾದರೂ ತೊಂದರೆಯಾದರೆ, ದುಷ್ಟಶಕ್ತಿ ಎದುರಾಗಿದೆ ಎಂದು ಮಾರಿ (ಇದೊಂದು ತುಳುನಾಡಿನ ಸಂಪ್ರದಾಯ) ಓಡಿಸುತ್ತಿದ್ದರು. ಹಾಗೆಯೇ ನಾವು ದೇಶಕ್ಕೆ ಎದುರಾಗಿರುವ ಮಾರಿಯನ್ನು ಓಡಿಸುತ್ತಿದ್ದೇವೆ ಎಂದು ಆ ಯುವಕ ಹೇಳುತ್ತಾನೆ.

ಆಗ ಅಲ್ಲಿದ್ದ ಇನ್ನೊಬ್ಬ ಯುವಕ ಕೊರೊನಾ ವೈರಸ್ ಗೆ ಕನ್ನಡ ಅಥವಾ ತುಳು ಬರುವುದಿಲ್ಲ, ಇಂಗ್ಲಿಷ್ ನಲ್ಲಿ ಓಡಿಸೋಣ ಎಂದು ಹೇಳುತ್ತಾನೆ. ಆಗ ಯುವಕರೆಲ್ಲರೂ, 'ಕೊರೊನಾ ಗೋ..ಗೋ.. ಗೋ.. ಟು ಚೀನಾ' ಎಂದು ಘೋಷಣೆ ಕೂಗುತ್ತಾರೆ.

ಕೊರೊನಾಗೆ ಇದುವರೆಗೆ ದೇಶದಲ್ಲಿ ಏಳು ಜನ ಮೃತ ಪಟ್ಟಿದ್ದಾರೆ. ಮಹಾರಾಷ್ಟ್ರದಲ್ಲಿ ಎರಡು, ಕರ್ನಾಟಕ, ಬಿಹಾರ, ರಾಜಸ್ಥಾನ, ಪಂಜಾಬ್ ಮತ್ತು ದೆಹಲಿಯಲ್ಲಿ ತಲಾ ಒಬ್ಬರು ಮೃತ ಪಟ್ಟಿದ್ದಾರೆ.

English summary
Coronavirus Doesn't Know Kannada, Hence In English, Different Protest In Dakshina Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X