• search
  • Live TV
ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಂಗಳೂರು: ಹೆಚ್ಚುತ್ತಿರುವ ಎಲ್‌ಎಸ್‌ಡಿ ಹಾವಳಿ, ಇಬ್ಬರ ಬಂಧನ

|

ಮಂಗಳುರು ಡಿಸೆಂಬರ್ 15: ಮಂಗಳೂರು ನಗರದಲ್ಲಿ ಹೆಚ್ಚಾಗಿರು ಗಾಂಜಾ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಮಂಗಳೂರು ಪೊಲೀಸರು ಅವಿರತ ಶ್ರಮಿಸುತ್ತಿದ್ದಾರೆ . ಅದರೆ ಈ ನಡುವೆ ಪೊಲೀಸರಿಗೆ ಇನ್ನೊಂದು ತಲೆ ನೋವು ಅರಂಭವಾಗಿದೆ.

ಇತ್ತೀಚೆನ ದಿನಗಳಲ್ಲಿ ನಗರದಲ್ಲಿ ಮಾರಕ ಎಲ್ ಎಸ್ ಡಿ ಮಾದಕ ವಸ್ತು ಕಳ್ಳಸಾಗಣೆ ಹೆಚ್ಚಾಗಿದೆ. ಅತೀ ಸುಲಭವಾಗಿ ಸಾಗಿಸ ಬಹುದಾದ ಈ ಮಾದಕ ವಸ್ತುಗಳತ್ತ ವಿದ್ಯಾರ್ಥಿಗಳು ಹಾಗೂ ಯುವಕ ಯುವತಿಯರು ಹೆಚ್ಚಾಗಿ ಆಕರ್ಷಿತರಾಗುತ್ತಿದ್ದಾರೆ.

ಮಂಗಳೂರು ನಗರದಲ್ಲಿ ಅತೀ ದುಬಾರಿ ಎಲ್ ಎಸ್ ಡಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಹಾಗೂ ದರೋಡೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 13 ಸಾವಿರ ರೂಪಾಯಿ ಮೌಲ್ಯದ 13 ಎಲ್ ಎಸ್ ಡಿ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಅದಲ್ಲದೇ ದರೋಡೆ ಮಾಡಿದ ಮೊಬೈಲ್ ಹ್ಯಾಂಡ್ ಸೆಟ್, ಸ್ಕೂಟರ್, ನಗದು ಹಣ ಮತ್ತು ದರೋಡೆ ಕೃತ್ಯಕ್ಕೆ ಬಳಸಿದ ಕಾರು, ಚೂರಿ,ಕಬ್ಬಿಣದ ರಾಡ್ ಒಟ್ಟು 2,89 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ.

ಬಂಧಿತರನ್ನು ಕಾವೂರು ನಿವಾಸಿ ಗೌತಮ್ (28), ಹಾಗು ದೇರೆಬೈಲ್ ಕೊಂಚಾಡಿ ನಿವಾಸಿ ಲಾಯ್ ವೇಗಸ್ (26) ಎಂದು ಗುರುತಿಸಲಾಗಿದೆ. ಮಂಗಳೂರು ನಗರದ ಹೆರಿಟೇಜ್ ಕಟ್ಟಡದ ಎದುರಿನ ರಸ್ತೆ ಬದಿಯಲ್ಲಿ ಆರೋಪಿಗಳು ಎಲ್ ಎಸ್ ಡಿ ಮಾದಕ ವಸ್ತುವನ್ನು ಗ್ರಾಹಕರಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದ ಬಗ್ಗೆ ಮಾಹಿತಿ ಪಡೆದಿದ್ದ ಮಂಗಳೂರು ದಕ್ಷಿಣ ಪೊಲೀಸ್ ಠಾಣಾಯ ಸಿಬ್ಬಂದಿಗಳು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಗೌತಮ್ ,ಲಾಯಿ ವೇಗಸ್ ರವರು ಇತರರೊಂದಿಗೆ ಸೇರಿಕೊಂಡು ದಿನಾಂಕ ಡಿಸೆಂಬರ್ 5 ರಂದು ನಗರದ ಫಳ್ನೀರ್ ನಿಂದ ವಿದ್ಯಾರ್ಥಿ ಹಸನ್ ಶಿಮಾಕ್ ಎಂಬವರನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣದಲ್ಲೂ ಭಾಗಿಯಾಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.ಆರೋಪಿಗಳ ಪೈಕಿ ಗೌತಮ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ 01ಹಲ್ಲೆ, 01ಕೊಲೆ ಪ್ರಕರಣ ದಾಖಲಾಗಿದ್ದು ಈತನ ಮೇಲೆ ದಾಖಲಾದ ಕೊಲೆ ಪ್ರಕರಣದಲ್ಲಿ ಈತನಿಗೆ ಮಾನ್ಯ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು ಪ್ರಸ್ತುತ ಈತನು ಉಚ್ಚ ನ್ಯಾಯಾಲಯದಿಂದ ಜಾಮೀನು ಪಡೆದಿರುತ್ತಾನೆ.

ಆರೋಪಿಗಳ ಪೈಕಿ ಲಾಯ್ ವೇಗಸ್ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ2 ದರೋಡೆ ಯತ್ನ ಪ್ರಕರಣ, ಉತ್ತರ ಪೊಲೀಸ್ ಠಾಣೆಯಲ್ಲಿ 01 ದರೋಡೆ ಯತ್ನ ಪ್ರಕರಣ, ಬರ್ಕೆ ಪೊಲೀಸ್ ಠಾಣೆಯಲ್ಲಿ 01, ಕೊಲೆ ಯತ್ನ, 02 ಹಲ್ಲೆ ಪ್ರಕರಣ . ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 01 ಹಲ್ಲೆ ಪ್ರಕರಣ ದಾಖಲಾಗಿರುತ್ತದೆ.

English summary
Mangaluru police busted drug racket in Mangaluru . Cops arrested 2 youth and seized LSD drug.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X