ನಾಮಪತ್ರ ಸಲ್ಲಿಕೆಗೂ ಮುನ್ನ ದೇವಸ್ಥಾನ, ಚರ್ಚ್, ಮಸೀದಿಗೆ ಭೇಟಿ ನೀಡಿದ ಮಿಥುನ್ ರೈ

ಮಂಗಳೂರು, ಮಾರ್ಚ್ 25:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದ್ದಾರೆ.

ನಗರದ ಪುರಭವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಬಳಿಕ ಕಾರ್ಯಕರ್ತರ ಜೊತೆ ಪಾದಯಾತ್ರೆಯಲ್ಲಿ ತೆರಳಿದ ಮಿಥುನ್ ರೈ, ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಶಶಿಕಾಂತ್ ಸೆಂಥಿಲ್ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ, ಸಚಿವ ಯು.ಟಿ.ಖಾದರ್, ಮಾಜಿ ಸಚಿವರಾದ ರಮಾನಾಥ ರೈ, ಜೆಡಿಎಸ್ ಮುಖಂಡ ಅಮರನಾಥ ಶೆಟ್ಟಿ ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಖ್ಯಾತ ವೈದ್ಯ ಡಾ.ಮಹಾಬಲ ರೈ ಅವರ ಪುತ್ರ ಬಿಬಿಎಂ ಪದವೀಧರ ಮಿಥುನ್ ರೈ ಮೊದಲ ಭಾರಿಗೆ ಚುನಾವಣೆಯಲ್ಲಿ ಸ್ಪರ್ಧಿಸುತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಘಟಾನುಘಟಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳ ನಡುವೆ ಪಕ್ಷದ ಹೈಕಮಾಂಡ್ ಯುವ ಕಾಂಗ್ರೆಸ್ ಮುಖಂಡ ಮಿಥುನ್ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದೆ.

ನಾಮಪತ್ರ ಸಲ್ಲಿಸುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಶ್ರೀ ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮರೋಳಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥಿಸಿದ ಮಿಥುನ್, ಬಳಿಕ ತನ್ನ ತರವಾಡು ಮನೆಗೆ ತೆರಳಿ ಗೋ ಪೂಜೆ ಸಲ್ಲಿಸಿದರು. ಬಳಿಕ ಮಂಗಳೂರು ತಾಲೂಕಿನ ಪಾವೂರು ಗ್ರಾಮದ ಕೊಪ್ಪರಿಗೆಯ ತನ್ನ ತಾಯಿ ಮನೆಯ ದೈವ ದೇವರಿಗೆ ಪೂಜೆ ಸಲ್ಲಿಸಿದರು.

 ದರ್ಗಾ, ಚರ್ಚ್ ಗೆ ಭೇಟಿ ನೀಡಿದ ಮಿಥುನ್ ರೈ

ದರ್ಗಾ, ಚರ್ಚ್ ಗೆ ಭೇಟಿ ನೀಡಿದ ಮಿಥುನ್ ರೈ

ಪೂಜೆ ಸಲ್ಲಿಸಿದ ನಂತರ ಉಳ್ಳಾಲ ಸೆಬಾಸ್ಟಿಯನ್ ಚರ್ಚ್ ಗೆ ಭೇಟಿ ನೀಡಿ ದೇವರ ಹಾಗೂ ಗುರುಗಳ ಆಶಿರ್ವಾದವನ್ನು ಪಡೆದ ಮಿಥುನ್ ರೈ, ಬಳಿಕ ಸಮೀಪದ ಸೋಮೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಆ ನಂತರ ಉಳ್ಳಾಲ ದರ್ಗಾಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

 ಅಪಸ್ವರ ಎತ್ತಿದ ಜನಾರ್ದನ ಪೂಜಾರಿ

ಅಪಸ್ವರ ಎತ್ತಿದ ಜನಾರ್ದನ ಪೂಜಾರಿ

ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಮಿಥುನ್ ರೈ, ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ಬಿ ಜನಾರ್ಧನ ಪೂಜಾರಿ ಅವರಿಂದ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಮಿಥುನ್ ರೈ ಬಗ್ಗೆ ಜನಾರ್ದನ ಪೂಜಾರಿ ಅಪಸ್ವರ ಎತ್ತಿದ್ದಾರೆ. ಆಶೀರ್ವಾದ ಕೇಳಲು ಹೋಗಿದ್ದಾಗ ಅವಸರಿಸಿದ್ದಕ್ಕೆ ಪೂಜಾರಿ ಅಪಶ್ರುತಿ ಆಡಿದ್ದಾರೆ.

ಕರ್ನಾಟಕದ ಮತದಾರರೆ, ನಿಮ್ಮ ಕ್ಷೇತ್ರ ಯಾವುದು? ಕಳೆದ ಬಾರಿ ಗೆದ್ದವರು, ಸೋತವರು ಯಾರು?

 ಪ್ರಚಾರಕ್ಕೆ ನಾನೂ ಬರುತ್ತೇನೆ

ಪ್ರಚಾರಕ್ಕೆ ನಾನೂ ಬರುತ್ತೇನೆ

ಅವಸರ ಮಾಡಿದರೆ ಸೋಲುವುದು ಗ್ಯಾರಂಟಿ. ಶಾಪ ಕೊಡುತ್ತೇನೆಂದು ಮಿಥುನ್ ರೈಗೆ ಎಚ್ಚರಿಸಿದ ಜನಾರ್ದನ ಪೂಜಾರಿ, ನಂತರ ಸಮಾಧಾನಿಸಿಕೊಂಡು ಚುನಾವಣೆಗೆ ಬೆಸ್ಟ್ ಅಭ್ಯರ್ಥಿಯನ್ನು ನಿಲ್ಲಿಸಿದ್ದೀರಿ. ಪ್ರಚಾರಕ್ಕೆ ನಾನೂ ಬರುತ್ತೇನೆ ಎಂದು ತಿಳಿಸಿದರು.

 ಮಿಥುನ್ ರೈ ಒಳ್ಳೆಯ ಅಭ್ಯರ್ಥಿ

ಮಿಥುನ್ ರೈ ಒಳ್ಳೆಯ ಅಭ್ಯರ್ಥಿ

ಇನ್ನು ಪುರಭವನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಜನಾರ್ದನ ಪೂಜಾರಿ, ಲೋಕಸಭಾ ಚುನಾವಣೆಗೆ ಈ ಬಾರಿ ಕಾಂಗ್ರೆಸ್ ಒಳ್ಳೆಯ ಅಭ್ಯರ್ಥಿ ಆಯ್ಕೆ ಮಾಡಿದೆ. ಇದು ಎಲ್ಲಾ ಧರ್ಮದ ದೇವರು ನೀಡಿದ ಆಶೀರ್ವಾದ. ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಮಿಥುನ್ ರೈ ಒಳ್ಳೆಯ ಅಭ್ಯರ್ಥಿ. ಈ ಬಾರಿ ಮಿಥುನ್ ರೈ ಗೆಲ್ಲುವುದರಲ್ಲಿ ಅನುಮಾನ ಇಲ್ಲ. ಗೆಲ್ಲದಿದ್ದಲ್ಲಿ ಇನ್ನು ನಾನು ಕುದ್ರೋಳಿ ಗೋಕರ್ಣ ಕ್ಷೇತ್ರಕ್ಕೆ , ಉಳ್ಳಾಲ ಮಸೀದಿಗೆ ಹಾಗೂ ಚರ್ಚ್ ಗೆ ಹೋಗೋದನ್ನು ನಿಲ್ಲಿಸುತ್ತೇನೆ ಎಂದು ಶಪಥ ಮಾಡಿದರು.

ಕರ್ನಾಟಕದ ಯಾವ ಸಂಸದ ಎಷ್ಟು ವಿದ್ಯಾಭ್ಯಾಸ ಮಾಡಿದ್ದಾರೆ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+