Heat wave: ಹೆಚ್ಚುತ್ತಿರುವ ತಾಪಮಾನದಿಂದ ಪರದಾಡುತ್ತಿದ್ದಾರೆ ದಕ್ಷಿಣ ಕನ್ನಡದ ಜನರು
ಈ ಸಮಯದಲ್ಲಿ ಸಾಕಷ್ಟು ನೀರು, ಹಣ್ಣಿನ ರಸಗಳು, ನಿಂಬೆ ಪಾನಕ, ಮಜ್ಜಿಗೆ ಮತ್ತು ಎಳನೀರನ್ನು ಕುಡಿಯಬೇಕು.
ಮಂಗಳೂರು, ಮಾರ್ಚ್ 13: ಕರಾವಳಿ ಕರ್ನಾಟಕದಲ್ಲಿ ತಾಪಮಾನ ದಾಖಲೆಯ ಗರಿಷ್ಠ ಮಟ್ಟ ತಲುಪಿದ್ದು, ನಿರಂತರ ಬಿಸಿಲಿನ ತಾಪವನ್ನು ಎದುರಿಸಲು ಜನರು ಹರಸಾಹಸ ಪಡುತ್ತಿದ್ದಾರೆ. ಮಂಗಳೂರಿನ ಪಣಂಬೂರಿನಲ್ಲಿ ಶನಿವಾರ ಗರಿಷ್ಠ ತಾಪಮಾನ 39.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.
ಬಿಸಿಲು ಮತ್ತು ಇತರ ನಿರ್ಜಲಿಕರಣಕ್ಕೆ ಸಂಬಂಧಿತ ಸಮಸ್ಯೆಗಳೊಂದಿಗೆ ಜನರು ಹೋರಾಡಬೇಕಾದ ಪರಿಸ್ಥಿತಿಯಿದ್ದು, ಎಷ್ಟು ಎಚ್ಚರ ವಹಿಸಿದರೂ ಕಡಿಎ ಎಂಬಂತಿದೆ ಪರಿಸ್ಥಿತಿ. ಈ ಹವಾಮಾನ ವೈಪರೀತ್ಯಕ್ಕೆ ಪ್ರಕೃತಿ ಹಾನಿಯೇ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ. ಬಿಸಿಲ ಧಗೆಯಿಂದ ತಪ್ಪಿಸಿಕೊಳ್ಳಲು ಜನರು ಹರಸಾಹಸ ಪಡುತ್ತಿದ್ದು, ಇದೊಂದು ಮಾನವ ನಿರ್ಮಿತ ದುರಂತ ಎಂದು ಹಲವರು ಆರೋಪಿಸಿದ್ದಾರೆ.

"ನಾವು ಹೆಚ್ಚು ಸಸಿಗಳನ್ನು ನೆಡಬೇಕು, ಈಗಿರುವ ಮರಗಳನ್ನು ಸಂರಕ್ಷಿಸಬೇಕು. ತೆರೆದ ನೀರಿನ ಸಂಪನ್ಮೂಲಗಳಾದ ಬಾವಿ. ಕೆರೆಗಳನ್ನು ಸಂರಕ್ಷಿಸಬೇಕು ಅವುಗಳನ್ನು ಪುನ್ರ್ ನಿರ್ಮಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೆಲಸ ಮುಗಿಸಿ ಮನೆಗೆ ಬಂದ ತಕ್ಷಣ ತುಂಬಾ ದಣಿವು, ಆಯಾಸ ಉಂಟಾಗುತ್ತಿದೆ. ಹೊರಗಿನ ತೀವ್ರ ಶಾಖ ನಮ್ಮನ್ನು ಬಾಧಿಸುತ್ತಿದೆ" ಎಂದು ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ.ಎಡ್ಮಂಡ್ ಫರ್ನಾಂಡಿಸ್ ಅವರನ್ನು ಉಲ್ಲೇಖಿಸಿರುವ ಸಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್, "ಹೆಚ್ಚುತ್ತಿರುವ ತಾಪಮಾನವು ಜನರ ಕೆಲಸದ ಮಟ್ಟವನ್ನು ಕಡಿಮೆ ಮಾಡಿ, ಆಯಾಸಕ್ಕೆ ಕಾರಣವಾಗುತ್ತದೆ. ಶಾಖ-ಪ್ರೇರಿತ ಒತ್ತಡವು ಹೆಚ್ಚಿದ ಹೃದಯರಕ್ತನಾಳದ ಅಪಾಯಗಳಿಗೆ ಕಾರಣವಾಗುತ್ತದೆ. ಇದಕ್ಕೆ ಹಲವು ಅಧ್ಯಯನಗಳು ಸಾಕ್ಷಿಯಾಗಿವೆ" ಎಂದಿದ್ದಾರೆ.
ಮಂಗಳೂರಿನಲ್ಲಿ ದಿನನಿತ್ಯ ಪಟಾಕಿ ಸಿಡಿಸುವುದರಿಂದ ಹವಾಮಾನ ಹದಗೆಡುತ್ತದೆ. ಇದು ಪರಿಸರಕ್ಕೆ ಹಾನಿಯುಂಟು ಮಾಡುವುದಲ್ಲದೆ, ಅಂತಿಮವಾಗಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಎಡ್ವರ್ಡ್ ಮತ್ತು ಸಿಂಥಿಯಾ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ.ಎಡ್ಮಂಡ್ ಫರ್ನಾಂಡಿಸ್ ಹೇಳಿದ್ದಾರೆ.

ಬೆಂಗಳೂರಿನ ಐಎಂಡಿ ವಿಜ್ಞಾನಿ ಪ್ರಸಾದ್ ಎ," ಬೇಸಿಗೆಯಲ್ಲಿ, ಕರಾವಳಿ ಕರ್ನಾಟಕದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನದ ಸಂಭವನೀಯತೆ ಸುಮಾರು ಶೇಕಡ 50 ರಷ್ಟಿದೆ. ಋತುಮಾನದ ಮುನ್ಸೂಚನೆಯ ಪ್ರಕಾರ ಈಗ ತಾಪಮಾನದಲ್ಲಿ ಸ್ವಲ್ಪ ಕುಸಿತವಿದೆ. ಮಾರ್ಚ್ ಮೂರನೇ ವಾರ ಅಲ್ಲಿ ಅಲ್ಪ ಪ್ರಮಾಣದ ಮಳೆಯನ್ನು ನಿರೀಕ್ಷಿಸಬಹುದು. ದಕ್ಷಿಣ ಕನ್ನಡದಲ್ಲಿ ಮಾರ್ಚ್ 3, 4, 5 ಮತ್ತು 10 ರಂದು ಭಾರಿ ಶಾಖದ ಅಲೆಗಳಿಗೆ ಸಾಕ್ಷಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ಆರೋಗ್ಯದ ಏರುಪೇರು ಉಂಟಾಗುತ್ತಿದೆ ಎಂದಿರುವ ದಕ್ಷಿಣ ಕನ್ನಡ ಡಿಎಚ್‌ಒ ಡಾ.ಕಿಶೋರ್ ಕುಮಾರ್ ಮಾತನಾಡಿ, ಶಾಖದ ಅಲೆ ಮತ್ತು ಏರುತ್ತಿರುವ ತಾಪಮಾನವು ನಿರ್ಜಲೀಕರಣ, ಸ್ನಾಯು ಸೆಳೆತ, ವೈರಲ್ ಸೋಂಕುಗಳಿಗೆ ಕಾರಣವಾಗುತ್ತದೆ. ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಈ ಸಂದರ್ಭದಲ್ಲಿ ಹೆಚ್ಚಿನ ಕಾಳಜಿಯ ಅಗತ್ಯವಿದೆ ಎಂದಿದ್ದಾರೆ.
" ಈ ಸಮಯದಲ್ಲಿ ಸಾಕಷ್ಟು ನೀರು, ಹಣ್ಣಿನ ರಸಗಳು, ನಿಂಬೆ ಪಾನಕ, ಮಜ್ಜಿಗೆ ಮತ್ತು ಎಳನೀರನ್ನು ಕುಡಿಯಬೇಕು. ಇದು ದೇಹದಲ್ಲಿ ಜೀವಸತ್ವಗಳು ಮತ್ತು ಐರನ್ ಅಂಶಗಳನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಜನರು ಬಿಸಿಲಿನಲ್ಲಿ ತಿರುಗಾಡುವುದನ್ನು ತಪ್ಪಿಸಬೇಕು. ಮೂರ್ಛೆ ರೋಗ ಅಥವಾ ತೀವ್ರ ದೌರ್ಬಲ್ಯ ಕಂಡುಬಂದರೆ, ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು" ಎಂದು ಸಲಹೆ ನೀಡಿದ್ದಾರೆ.












Click it and Unblock the Notifications