ಪಣಂಬೂರಿನಲ್ಲಿ ದೋಣಿ ಅವಘಡ, ಕೋಸ್ಟ್‌ಗಾರ್ಡ್‌ನಿಂದ ಐವರ ರಕ್ಷಣೆ
ಮಂಗಳೂರು, ಡಿಸೆಂಬರ್, 07: ಪಣಂಬೂರು- ಸುರತ್ಕಲ್ ಸಮುದ್ರ ಮಧ್ಯೆ ದೋಣಿಯೊಂದು ಅವಘಡಕ್ಕೊಳಗಾದ ಪರಿಣಾಮ ಅಪಾಯಕ್ಕೆ ಸಿಲುಕಿದ್ದ ಐವರು ಮೀನುಗಾರರು ಹಾಗೂ ದೋಣಿಗಳನ್ನು ಕರ್ನಾಟಕ ತಟ ರಕ್ಷಣಾ ಪಡೆ ರಕ್ಷಿಸಿದ್ದು, ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.
ಸುರತ್ಕಲ್ ಗೆ 12.5 ನಾಟಿಕಲ್ ಮೈಲ್ ದೂರದಲ್ಲಿ ಮೀನುಗಾರರ ದೋಣಿ ಹಡಗಿನ ಅವಶೇಷಕ್ಕೆ ಢಿಕ್ಕಿಯಾದ ಪರಿಣಾಮ ಮೀನುಗಾರಿಕಾ ದೋಣಿಯ ಹಿಂಬದಿ ಸಂಪೂರ್ಣ ಹಾನಿಗೊಳಗಾಯಿತು. ಆಗ ಸಮುದ್ರದ ನೀರು ಇಂಜಿನ್ ಒಳಗೆ ಪ್ರವೇಶಸಿದ ಕಾರಣ ಮೀನುಗಾರರು ತೊಂದರೆಗೆ ಸಿಲುಕಿದ್ದರು.[ಈಜಲು ಹೋಗಿ ಮಸಣ ಸೇರಿದ ಮಸಣಾಪುರ ವಿದ್ಯಾರ್ಥಿಗಳು]

ಪಣಂಬೂರು- ಸುರತ್ಕಲ್ ಸಮುದ್ರ ಮಧ್ಯೆ ದೋಣಿ ಅಪಾಯಕ್ಕೆ ಸಿಲುಕಿದ ಈ ಬಗ್ಗೆ ತಕ್ಷಣ ಮಂಗಳೂರಿನ ಕೋಸ್ಟ್‌ಗಾರ್ಡ್‌ಗೆ ದೂರವಾಣಿ ಮೂಲಕ ಮಾಹಿತಿ ಬಂದಿತ್ತು. ಈ ಕೋಸ್ಟ್‌ಗಾರ್ಡ್ ವಿಭಾಗವು ತಕ್ಷಣವೇ ಮುಂಬೈ ಭಾರತೀಯ ತಟ ರಕ್ಷಣಾ ಪಡೆಯ ಸಾಗರ ಪರಿಹಾರ ಸಮನ್ವಯ ಕೇಂದ್ರಕ್ಕೆ ಮಾಹಿತಿ ರವಾನಿಸಿದೆ.[ದೀಪಸ್ತಂಭಗಳ ಬೆಳಕಲ್ಲಿ ಅಡಗಿದೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ದಿ]
ಸಮನ್ವಯ ಕೇಂದ್ರ ಮಂಗಳೂರಿನಲ್ಲಿರುವ ಸಾಗರ ಪರಿಹಾರ ಸಮನ್ವಯ ಉಪ ಕೇಂದ್ರಕ್ಕೆ ಮಾಹಿತಿ ನೀಡಿ ಶೀಘ್ರದಲ್ಲೇ ಪರಿಹಾರ ಕೈಗೊಳ್ಳುವಂತೆ ನಿರ್ದೇಶನ ನೀಡಿತು. ಇದರನ್ವಯ ಕರ್ನಾಟಕ ತಟ ರಕ್ಷಣಾ ಜಿಲ್ಲೆಯ ಕ್ರಮ ಸಂಖ್ಯೆ 100ರ ಹಡಗು ತುರ್ತಾಗಿ ಸ್ಥಳಕ್ಕೆ ಧಾವಿಸಿ ಮೀನುಗಾರರನ್ನು ರಕ್ಷಿಸಿದೆ.












Click it and Unblock the Notifications