ಉರ್ವ ಚರ್ಚ್ ಆಶ್ರಯದಲ್ಲಿ ಸ್ವಚ್ಛತಾ ಆಂದೋಲನ

ಮಂಗಳೂರು, ಅ. 29 : ಉರ್ವ ಚರ್ಚ್‌ನ ಆಶ್ರಯದಲ್ಲಿ ಚರ್ಚ್‌ನ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ವತಿಯಿಂದ ನವೆಂಬರ್ 1 ಕನ್ನಡ ರಾಜ್ಯೋತ್ಸವದಂದು ಲೇಡಿಹಿಲ್ ಪರಿಸರದಲ್ಲಿ ಬೃಹತ್ ಸ್ವಚ್ಛತಾ ಆಂದೋಲನ ನಡೆಯಲಿದೆ.

ಬೆಳಗ್ಗೆ 8.30ಕ್ಕೆ ಉರ್ವ ಚರ್ಚ್‌ನ ಧರ್ಮಗುರು ಫಾ. ವಿಕ್ಟರ್ ಡಿಮೆಲ್ಲೊ ಕಾರ್ಯಕ್ರಮಕ್ಕೆ ಈ ಸ್ವಚ್ಛತಾ ಆಂದೋಲನಕ್ಕೆ ಚಾಲನೆ ನೀಡಲಿದ್ದಾರೆ. ಸ್ಥಳೀಯ ಕಾರ್ಪೊರೇಟರ್‌ ಗಳಾದ ರಾಧಾಕೃಷ್ಣ, ಜಯಂತಿ ಆಚಾರ್, ರಜನೀಶ್, ಚಿಲಿಂಬಿಯ ಶಿರಡಿ ಸಾಯಿಬಾಬಾ ಮಂದಿರದ ಆಡಳಿತ ಮೊಕ್ತೇಸರ ವಿಶ್ವಾಸಕುಮಾರ್ ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.


ಉರ್ವ ಚರ್ಚ್ ಆಡಳಿತದ ಸೈಂಟ್ ಅಲೋಶಿಯಸ್ ಆಂಗ್ಲ ಮಾಧ್ಯಮ ಶಾಲೆ, ಪಾಂಪೈ ಪ್ರೌಢಶಾಲೆ, ಸೈಂಟ್ ಅಲೋಶಿಯಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ 1 ಸಾವಿರಕ್ಕೂ ಅಧಿಕ ಮಂದಿ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. [ಸ್ಟಾರ್ ಬಜಾರ್ ನಿಂದ ಸ್ವಚ್ಛ ಭಾರತ ಅಭಿಯಾನ]

ಒಟ್ಟು 3 ತಂಡಗಳು ಲೇಡಿಹಿಲ್, ಚಿಲಿಂಬಿ, ಉರ್ವ ಮಾರ್ಕೆಟ್ ರಸ್ತೆ, ಮಣ್ಣಗುಡ್ಡೆ ರಸ್ತೆಯಲ್ಲಿ ಸ್ವಚ್ಛತೆ ನಡೆಸಲಿವೆ ಎಂದು ಉರ್ವ ಚರ್ಚ್ ಆಡಳಿತ ಮಂಡಳಿಯ ಪ್ರಕಟಣೆ ತಿಳಿಸಿದೆ. ಒಟ್ಟಿನಲ್ಲಿ ಕರ್ನಾಟಕದ ಎಲ್ಲೆಡೆಯಲ್ಲಿಯೂ ಗಾಂಧಿ ಜಯಂತಿಯಂದು ಪ್ರಧಾನಿ ನರೇಂದ್ರ ಮೋದಿ ಆರಂಭಿಸಿದ ಸ್ವಚ್ಛತಾ ಆಂದೋಲನದ ಗಾಳಿ ಬೀಸಿದೆ. ಈ ನೆವದಿಂದಲಾದರೂ ಎಲ್ಲೆಡೆಯಲ್ಲಿಯೂ ಸ್ವಚ್ಛತೆ ಕಂಗೊಳಿಸಲಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+